ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ದಕ್ಷಿಣ 24 ಪರಗಣ ಜಿಲ್ಲೆಯ ಹೈ-ವೋಲ್ಟೇಜ್ ಕ್ಷೇತ್ರವಾದ ಫಾಲ್ಟಾ(Falta) ವಿಧಾನಸಭಾ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಬಿಜೆಪಿಯ (BJP) ಅಭ್ಯರ್ಥಿ ದೇಬಾಂಶು ಪಾಂಡಾ ಅವರು ತಮ್ಮ ಪ್ರತಿಸ್ಪರ್ಧಿಗಳಿಗಿಂತ ಭಾರಿ ಮುನ್ನಡೆ ಸಾಧಿಸಿದ್ದಾರೆ. ಸದ್ಯದ ಟ್ರೆಂಡ್‌ಗಳ ಪ್ರಕಾರ ಅವರು ಸುಮಾರು 31 ಸಾವಿರ ಮತಗಳ ಬೃಹತ್ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಒಟ್ಟು 21 ಸುತ್ತುಗಳ ಮತ ಎಣಿಕೆ ನಡೆಯಬೇಕಾಗಿದ್ದು ಬೆಳಗ್ಗೆ 11:45ಕ್ಕೆ 8 ಸುತ್ತುಗಳ ಪ್ರಕ್ರಿಯೆ ಪೂರ್ಣಗೊಂಡಿದೆ. ದೇಬಾಂಶು ಪಾಂಡಾ(Debangshu Panda) 51,621 ಮತಗಳನ್ನು ಪಡೆದರೆ ಸಿಪಿಎಂನ ಶಂಭು ನಾಥ್ ಕುರ್ಮಿ 20,556 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್‌ನ ಅಬ್ದುರ್ ರಜಾಕ್ ಮೊಲ್ಲಾ 5,205, ಟಿಎಂಸಿಯ ಜಹಾಂಗೀರ್ ಖಾನ್ 2,570 ಮತಗಳನ್ನು ಪಡೆದಿದ್ದಾರೆ. ಇದನ್ನೂ ಓದಿ: ಫಾಲ್ಟಾ ಕ್ಷೇತ್ರದ 285 ಬೂತ್‌ಗಳಲ್ಲಿ ಮರುಮತದಾನ, 87% ವೋಟಿಂಗ್ – ಮೇ 24 ರಂದು ಫಲಿತಾಂಶ
VIDEO | South 24 Parganas, West Bengal: As counting of votes for Falta Assembly by-polls is underway, BJP workers celebrate as the party is leading in the initial trends.
A BJP worker says, “Bhaipo always boasted about his Diamond Harbor model, and this election has negated all… pic.twitter.com/BoKnNoftqU
— Press Trust of India (@PTI_News) May 24, 2026
ಕಳೆದ ಏಪ್ರಿಲ್ 29ರಂದು ಈ ಕ್ಷೇತ್ರದಲ್ಲಿ ಮೊದಲ ಹಂತದ ಮತದಾನ ನಡೆದಿತ್ತು. ಆದರೆ ಆ ಸಮಯದಲ್ಲಿ ಇವಿಎಂ (EVM) ಅಕ್ರಮಗಳು ನಡೆದಿವೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಂಡ ಚುನಾವಣಾ ಆಯೋಗವು ಇಡೀ ಕ್ಷೇತ್ರದ ಮತದಾನವನ್ನು ರದ್ದುಪಡಿಸಿತ್ತು. ತದನಂತರ ಮೇ 21 ರಂದು ಕಟ್ಟುನಿಟ್ಟಿನ ಭದ್ರತೆಯ ನಡುವೆ ಮರುಮತದಾನ ನಡೆಸಲಾಗಿತ್ತು. ಇದನ್ನೂ ಓದಿ: ಮತದಾರರಿಗೆ ಬೆದರಿಕೆ ಕೇಸ್ ದಾಖಲಾದ ಬೆನ್ನಲ್ಲೇ ಚುನಾವಣೆಯಿಂದ ಹಿಂದೆ ಸರಿದ ಫಾಲ್ಟಾ ಟಿಎಂಸಿ ಅಭ್ಯರ್ಥಿ
ಮರುಮತದಾನದ ಪ್ರಚಾರದ ಕೊನೆಯ ದಿನವಾದ ಮೇ 19 ರಂದು ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್ (Jahangir Khan) ಅವರು ಅಚ್ಚರಿಯ ರೀತಿಯಲ್ಲಿ ತಾವಿನ್ನು ಚುನಾವಣಾ ಕಣದಲ್ಲಿ ಇರುವುದಿಲ್ಲ ಎಂದು ಘೋಷಿಸಿ ಹಿಂದೆ ಸರಿದಿದ್ದರು. ಈ ರಾಜಕೀಯ ಬೆಳವಣಿಗೆಯೂ ಸಹ ಸದ್ಯದ ಫಲಿತಾಂಶದ ಮೇಲೆ ಭಾರಿ ಪ್ರಭಾವ ಬೀರಿದಂತಿದೆ. ಇದನ್ನೂ ಓದಿ: ಗಂಟೆಗಟ್ಟಲೇ ಸಿಸಿಟಿವಿ ಬಂದ್, ಬೂತ್‌ನಿಂದಲೇ ಪ್ರತಿಪಕ್ಷಗಳ ಏಜೆಂಟ್‌ಗಳು ಹೊರಕ್ಕೆ: ಬೆಚ್ಚಿ ಬೀಳಿಸುವಂತಿದೆ ಫಾಲ್ಟಾ ಅಕ್ರಮ
ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಫಾಲ್ಟಾ ಕ್ಷೇತ್ರದಲ್ಲಿ ಕಮಲ ಅರಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು, ಅಧಿಕೃತ ಪ್ರಕಟಣೆಗೆ ಇನ್ನು ಕೆಲವು ಸುತ್ತುಗಳ ಮತ ಎಣಿಕೆ ಬಾಕಿ ಉಳಿದಿದೆ.
