Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಗಂಟೆಗಟ್ಟಲೇ ಸಿಸಿಟಿವಿ ಬಂದ್‌, ಬೂತ್‌ನಿಂದಲೇ ಪ್ರತಿಪಕ್ಷಗಳ ಏಜೆಂಟ್‌ಗಳು ಹೊರಕ್ಕೆ: ಬೆಚ್ಚಿ ಬೀಳಿಸುವಂತಿದೆ ಫಾಲ್ಟಾ ಅಕ್ರಮ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಗಂಟೆಗಟ್ಟಲೇ ಸಿಸಿಟಿವಿ ಬಂದ್‌, ಬೂತ್‌ನಿಂದಲೇ ಪ್ರತಿಪಕ್ಷಗಳ ಏಜೆಂಟ್‌ಗಳು ಹೊರಕ್ಕೆ: ಬೆಚ್ಚಿ ಬೀಳಿಸುವಂತಿದೆ ಫಾಲ್ಟಾ ಅಕ್ರಮ

Latest

ಗಂಟೆಗಟ್ಟಲೇ ಸಿಸಿಟಿವಿ ಬಂದ್‌, ಬೂತ್‌ನಿಂದಲೇ ಪ್ರತಿಪಕ್ಷಗಳ ಏಜೆಂಟ್‌ಗಳು ಹೊರಕ್ಕೆ: ಬೆಚ್ಚಿ ಬೀಳಿಸುವಂತಿದೆ ಫಾಲ್ಟಾ ಅಕ್ರಮ

Public TV
Last updated: May 3, 2026 12:39 pm
Public TV
Share
3 Min Read
West Bengal Election Missing CCTV footage for long hours Multiple instances of group voting Daylight rigging exposed in Falta constituency
SHARE

ಕೋಲ್ಕತ್ತಾ: ಇವಿಎಂ ಟ್ಯಾಂಪರಿಂಗ್‌ (EVM Tampering) ಎಸಗಿದ್ದು ಸಿಸಿಟಿವಿಯನ್ನು (CCTV) ಸೆರೆಯಾದ ಬೆನ್ನಲ್ಲೇ ಪಶ್ಚಿಮ ಬಂಗಾಳದ (West Bengal Election) ಫಾಲ್ಟಾ (Falta) ವಿಧಾನಸಭಾ ಕ್ಷೇತ್ರದ ಎಲ್ಲಾ 285 ಮತಗಟ್ಟೆಗಳಲ್ಲಿ ಮತ್ತೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಆದೇಶಿಸಿದೆ.

ಈ ಕ್ಷೇತ್ರದ ಮತದಾನ ಮೇ 21 ರಂದು ನಡೆದರೆ ಎಣಿಕೆಯು ಮೇ 24 ರಂದು ನಡೆಯಲಿದೆ. ಇದು ಒಂದನ್ನು ಹೊರತುಪಡಿಸಿ ಉಳಿದ 293 ಕ್ಷೇತ್ರಗಳ ಫಲಿತಾಂಶ ನಾಳೆ ಪ್ರಕಟವಾಗಲಿದೆ.

ಫಾಲ್ಟಾ ಕ್ಷೇತ್ರದಲ್ಲಿ ಏಪ್ರಿಲ್ 29ರಂದು ನಡೆದ ಚುನಾವಣೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ಚುನಾವಣಾ ಆಯೋಗವು ಸವಿಸ್ತಾರವಾದ ವರದಿಯನ್ನು ನೀಡಿದೆ. ಈ ಅಕ್ರಮಗಳು ಕೇವಲ ಒಂದೆರಡು ಬೂತ್‌ಗಳಿಗೆ ಸೀಮಿತವಾಗಿರದೇ ಇಡೀ ಕ್ಷೇತ್ರದ ಪ್ರಜಾಪ್ರಭುತ್ವ ಪ್ರಕ್ರಿಯೆಯನನ್ನೇ ವಿಫಲಗೊಳಿಸಿದೆ ಎಂದು ಆಯೋಗವು ಅಭಿಪ್ರಾಯಪಟ್ಟಿದೆ.

#WATCH | A local woman says, “We had voted for TMC, yet they attacked us… TMC’s Israfil Chowkidar has threatened us. We want him to be arrested. We need safety for women.” https://t.co/W2sjgnjd8Q pic.twitter.com/9VTkcsmKoV

— ANI (@ANI) May 2, 2026


ಮರು ಮತದಾನ ಯಾಕೆ?
ಕ್ಷೇತ್ರದ ಸುಮಾರು 60ಕ್ಕೂ ಹೆಚ್ಚು (21%) ಮತಗಟ್ಟೆಗಳಲ್ಲಿ ಇವಿಎಂಗಳ ಬ್ಯಾಲೆಟ್ ಯೂನಿಟ್ ಮೇಲಿದ್ದ ಅಭ್ಯರ್ಥಿಗಳ ಚಿಹ್ನೆಗಳನ್ನು ಮರೆಮಾಡಲು ಕಪ್ಪು ಟೇಪ್ (Black Tape) ಹಚ್ಚಲಾಗಿತ್ತು.

ಕೆಲವು ಕಡೆ ಮತದಾನದ ಗುಂಡಿಗಳ ಮೇಲೆ ಶಾಯಿ ಅಥವಾ ಪರ್ಫ್ಯೂಮ್ ಅನ್ನು ಸುರಿಯುವ ಮೂಲಕ ಮತದಾರರು ತಮಗೆ ಬೇಕಾದ ಅಭ್ಯರ್ಥಿಗೆ ಮತ ಚಲಾಯಿಸದಂತೆ ಅಡ್ಡಿಪಡಿಸಲಾಗಿತ್ತು. ಬಿಜೆಪಿಯ ಚಿಹ್ನೆಯ ಮೇಲೆ ಟೇಪ್ ಹಚ್ಚಲಾಗಿದೆ ಎಂದು ಮುಖ್ಯವಾಗಿ ದೂರುಗಳು ದಾಖಲಾಗಿದ್ದವು.

ಹಲವು ಮತಗಟ್ಟೆಗಳ ಒಳಗೆ ಮತ್ತು ಹೊರಗೆ ಬಿಜೆಪಿ, ಕಾಂಗ್ರೆಸ್‌, ಕಮ್ಯೂನಿಸ್ಟ್‌ ಪಕ್ಷದ ಕಾರ್ಯಕರ್ತರು ಮತದಾರರನ್ನು ತಡೆದು ಅವರಿಗೆ ಪ್ರಾಣ ಬೆದರಿಕೆ ಹಾಕಿದ ಪ್ರಕರಣಗಳು ವರದಿಯಾಗಿವೆ. ಮತದಾರರು ಸ್ವತಂತ್ರವಾಗಿ ಮತ ಚಲಾಯಿಸದಂತೆ ಅವರ ಮೇಲೆ ಬೆದರಿಕೆ ಹಾಕಲಾಗಿತ್ತು. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮತ್ತೆ ಟಿಎಂಸಿ – ಬಿಜೆಪಿ ನಡುವೆ ಘರ್ಷಣೆ

ಮತಗಟ್ಟೆಗಳ ಒಳಗೆ ಇರಬಾರದ ರಾಜಕೀಯ ಪಕ್ಷಗಳ ಕೇಡರ್‌ಗಳು ಕಾನೂನುಬಾಹಿರವಾಗಿ ಅಲ್ಲಿ ನೆರೆದಿದ್ದರು ಮತ್ತು ಮತದಾನದ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸುತ್ತಿದ್ದರು. ಕೆಲವು ಮತಗಟ್ಟೆಗಳಲ್ಲಿ ಮತದಾರರ ಬದಲಿಗೆ ಅವರ ಜೊತೆ ಬಂದಿದ್ದ ಸಹಾಯಕರು ಅಥವಾ ಇತರ ವ್ಯಕ್ತಿಗಳೇ ಮತ ಚಲಾಯಿಸಿದ್ದರು.

ಹಲವು ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ (Webcasting) ಗಾಗಿ ಅಳವಡಿಸಿದ್ದ ಸಿಸಿಟಿವಿಗಳು ಕೆಲಸ ಮಾಡುತ್ತಿರಲಿಲ್ಲ ಅಥವಾ ಅವುಗಳ ಫೂಟೇಜ್ ಲಭ್ಯವಿರಲಿಲ್ಲ. ಇದು ಚುನಾವಣಾ ಅಕ್ರಮಗಳಿಗೆ ಮತ್ತಷ್ಟು ಅನುವು ಮಾಡಿಕೊಟ್ಟಿದೆ.

This is what Mamata Banerjee was defending when she spoke up for Jehangir Khan, a criminal contesting on a TMC ticket from Falta in Diamond Harbour.

In several polling booths, the option to vote for the BJP has been blocked using a tape, effectively preventing voters from… pic.twitter.com/sKw3mcdA86

— Amit Malviya (@amitmalviya) April 29, 2026

ಟಿಎಂಸಿ ಬೆಂಬಲಿಗರು ಅರೆಸ್ಟ್‌
ಚುನಾವಣಾ ಆಯೋಗದ ವರದಿಯ ಪ್ರಕಾರ, ಫಾಲ್ಟಾ ಕ್ಷೇತ್ರದ ತೃಣಮೂಲ ಕಾಂಗ್ರೆಸ್ (TMC) ಅಭ್ಯರ್ಥಿ ಜಹಾಂಗೀರ್ ಖಾನ್ (Jahangir Khan) ಅವರ ಬೆಂಬಲಿಗರು ಅನೇಕ ಮತಗಟ್ಟೆಗಳಲ್ಲಿ ಹಿಂಸಾಚಾರ ಮತ್ತು ಬೆದರಿಕೆಯಲ್ಲಿ ತೊಡಗಿದ್ದರು. ಹಸಿಮ್‌ನಗರದಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಮತದಾರರನ್ನು ಹಿಡಿದು ಎಳೆದಾಡಿದ್ದು ಮತ್ತು ಅವರಿಗೆ ಮತದಾನದ ಹಕ್ಕನ್ನು ಚಲಾಯಿಸಲು ಬಿಡದಿದ್ದ ಘಟನೆಗಳು ವಿಡಿಯೋಗಳಲ್ಲಿ ಸೆರೆಯಾಗಿವೆ. ಈ ಕಾರಣಕ್ಕಾಗಿಯೇ ಆಯೋಗವು ಖಾನ್ ಅವರ ಇಬ್ಬರು ನಿಕಟವರ್ತಿಗಳನ್ನು ಕೂಡಲೇ ಬಂಧಿಸುವಂತೆ ಆದೇಶಿಸಿದೆ.

ಬಿಜೆಪಿ ಪ್ರತಿಭಟನೆ
ಬಿಜೆಪಿಯು ಸುಮಾರು 100ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ತನ್ನ ಏಜೆಂಟ್‌ಗಳನ್ನು ಹೊರಹಾಕಲಾಗಿದೆ ಎಂದು ಆರೋಪಿಸಿತ್ತು. ಮತಯಂತ್ರಗಳ ಮೇಲೆ ಟೇಪ್ ಹಚ್ಚಿರುವುದು ಪತ್ತೆಯಾದ ನಂತರ, ಅಮಿತ್ ಶಾ ಸೇರಿದಂತೆ ಪ್ರಮುಖ ನಾಯಕರು ಆಯೋಗದ ಮೆಟ್ಟಿಲೇರಿದ್ದರು. ಇದು ಕೇವಲ ಒಂದು ಕ್ಷೇತ್ರದ ಚುನಾವಣೆಯಲ್ಲ, ಬದಲಿಗೆ ಪ್ರಜಾಪ್ರಭುತ್ವದ ಕೊಲೆ ಎಂದು ಪ್ರತಿಪಕ್ಷಗಳು ಟೀಕಿಸಿತ್ತು.

West Bengal Election Missing CCTV footage for long hours Multiple instances of group voting Daylight rigging exposed in Falta constituency 1

ಅಕ್ರಮಕ್ಕೆ ತಡೆ:
ಮೇ 21ರ ಮರು ಮತದಾನಕ್ಕಾಗಿ ಆಯೋಗವು ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಈ ಬಾರಿ ಪ್ರತಿ ಮತಗಟ್ಟೆಯಲ್ಲಿಯೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗುತ್ತದೆ. ಬಾಹ್ಯ ವ್ಯಕ್ತಿಗಳು ಮತಗಟ್ಟೆ ಪ್ರವೇಶಿಸದಂತೆ ತಡೆಯಲು ‘ಮೈಕ್ರೋ ಅಬ್ಸರ್ವರ್‌ಗಳನ್ನು’ ನೇಮಿಸಲಾಗುತ್ತಿದೆ. ಪ್ರತಿ ಮತಗಟ್ಟೆಯ ಒಳಗೆ ಮತ್ತು ಹೊರಗೆ ಚಲನವಲನಗಳನ್ನು ನೇರವಾಗಿ ವೀಕ್ಷಿಸಲು ಅತ್ಯಾಧುನಿಕ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲು ಮುಂದಾಗಿದೆ.

TAGGED:bjpelection commissionEVM TamperingFaltaJahangir KhanTMCಇವಿಎಂಚುನಾವಣಾ ಆಯೋಗಜಹಾಂಗೀರ್ ಖಾನ್ಟಿಎಂಸಿಫಾಲ್ಟಾಬಿಜೆಪಿ
Share This Article
Facebook Whatsapp Whatsapp Telegram

Cinema news

Sara Govindu
ನಿರ್ಮಾಪಕ ಸಾ.ರಾ ಗೋವಿಂದ್ ವಿರುದ್ಧ ಎಫ್‌ಐಆರ್‌
Bengaluru City Crime Districts Karnataka Latest Sandalwood Top Stories
Rishab Shetty
ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ – `ಕಾಂತಾರ’ ಮತ್ತೊಂದು ಅಧ್ಯಾಯದ ಬಗ್ಗೆ ಚರ್ಚಿಸಿದ್ರಾ ಶೆಟ್ರು?
Cinema Latest Main Post National Sandalwood
chetan 13 2
ಡಾ.ರಾಜ್ ಸಮಾಧಿಯ ಪೋಸ್ಟ್ ಪ್ರಶ್ನಿಸಿ ಮನೆಗೆ ಮುತ್ತಿಗೆ ಹಾಕಿದ್ದವರ ವಿರುದ್ಧ ಚೇತನ್ ದೂರು
Bengaluru City Cinema Districts Karnataka Latest Sandalwood Top Stories
Udupi Kapu Marigudi Temple Actor Shashi Kumar
ಕಾಪು ದೇವಸ್ಥಾನಕ್ಕೆ ನಟ ಶಶಿಕುಮಾರ್ ಭೇಟಿ
Cinema Districts Karnataka Latest Top Stories Udupi

You Might Also Like

d.k.shivakumar KPCC
Bengaluru City

ಜೀವರಾಜ್‌ ಜೊತೆ ಕೆಲಸ ಮಾಡ್ತಿದ್ದ ಅಧಿಕಾರಿಗಳನ್ನ ಬಳಸಿಕೊಂಡು ಅಕ್ರಮ: ಡಿಕೆಶಿ ಕೆಂಡಾಮಂಡಲ

Public TV
By Public TV
11 minutes ago
Rajegowda
Chikkamagaluru

ಸ್ಟ್ರಾಂಗ್‌ ರೂಂ ಓಪನ್‌ ಆದಾಗ ಟ್ರಂಕ್‌ನ ಲಾಕ್‌ ಒಡೆದಿದ್ರು, ಸೀಲ್‌ ಇರಲಿಲ್ಲ: ರಾಜೇಗೌಡ ಗಂಭೀರ ಆರೋಪ

Public TV
By Public TV
36 minutes ago
Delhi Building Fire
Latest

ದೆಹಲಿಯ ವಸತಿ ಕಟ್ಟಡದಲ್ಲಿ ಭಾರಿ ಬೆಂಕಿ ಅವಘಡ; 9 ಮಂದಿ ಸಾವು

Public TV
By Public TV
48 minutes ago
R Ashok
Bengaluru City

ಶೃಂಗೇರಿಯಲ್ಲಿ ಸತ್ಯಕ್ಕೆ ಜಯ – ವೋಟ್ ಚೋರ್ ಕೌನ್ ಹೈ? ರಾಹುಲ್ ಗಾಂಧಿ ಹೈ: ಆರ್‌. ಅಶೋಕ್‌

Public TV
By Public TV
59 minutes ago
Heart Attack
Districts

ಜೋಯಿಡಾದಲ್ಲಿ 7ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ

Public TV
By Public TV
1 hour ago
railway track copy
Crime

ಹಳಿ ಮೇಲೆ ಕೆಲಸ ಮಾಡುತ್ತಿದ್ದ ನೌಕರನಿಗೆ ರೈಲು ಡಿಕ್ಕಿ – ಗಂಭೀರ ಗಾಯ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?