ಜ್ಯೂನಿಯರ್ ಎನ್‌ಟಿಆರ್ ಅಭಿನಯ, ಪ್ರಶಾಂತ್ ನೀಲ್ ನಿರ್ದೇಶನದ ʻಡ್ರ್ಯಾಗನ್ʼ ಚಿತ್ರದ ಗ್ಲಿಂಪ್ಸ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. 4.35 ಸೆಕೆಂಡ್ಸ್ ನಾ ಗ್ಲಿಂಪ್ಸ್ ಗೆ ಪ್ರೇಕ್ಷಕ ಪ್ರಭು ಸೈ ಎಂದಿದ್ದಾನೆ. ಕೆಲವರು ಇಷ್ಟು ಉದ್ದದ ಗ್ಲಿಂಪ್ಸ್ ಬೇಕಾ ಅದೇ ಬ್ಲಾಕ್ ಶೇಡ್, ಕೆಜಿಎಫ್, ಸಲಾರ್ ಚಿತ್ರ ಹೊಲಿಕೆ ರೀತಿಯಲ್ಲಿ ಇದೆ ಅಂತಾ ವಿಮರ್ಶೆ ಮಾಡ್ತಾ ಇದ್ದಾರೆ. ಆದರೆ ಪ್ರಶಾಂತ್ ನೀಲ್ ಸಂದರ್ಶನ ಒಂದರಲ್ಲಿ ಇದಕ್ಕೆಲ್ಲ ಉತ್ತರ ನೀಡಿದ್ದಾರೆ.

ಬಿಟ್ರಿಷರ ಕಾಲದ ಹಳೆ ಕಥೆ ಇದು ನಾನು 9 ನಿಮಿಷದ ಟ್ರೈಲರ್ ಕಟ್ಟು ಮಾಡುವುದಕ್ಕೆ ಇಷ್ಟ ಪಡುವುದಿಲ್ಲ. ಹಳೇ ಕಥೆ ಹೇಳಬೇಕು ಅಂದರೆ ಟ್ರೈಲರ್ ಅನ್ನು 9 ನಿಮಿಷ ಮಾಡಬೇಕಾಗುತ್ತದೆ. 9 ನಿಮಿಷ ಟ್ರೈಲರ್ ಕಟ್ ಮಾಡೋದಕ್ಕೆ ನಾನು ಇಷ್ಟ ಪಡಲ್ಲ. ನಾನು ಟ್ರೈಲರ್ ನಲ್ಲಿ ಎಲ್ಲವನ್ನೂ ಹೇಳೋದಕ್ಕೆ ಆಗಲ್ಲ ಅಂತಾ ಗ್ಲಿಂಪ್ಸ್ ನಲ್ಲಿ ಹಳೇಯ ಕಥೆ ಹೇಳಿದ್ದೇನೆ ಅಂತಾ ಸ್ಪಷ್ಟ ಪಡಿಸಿದ್ದಾರೆ.
ಇದೇ ಹೇಳಿಕೆಯನ್ನ ಇಟ್ಟುಕೊಂಡು ಸೊಶಿಯಲ್ ಮೀಡಿಯಾದಲ್ಲಿ9 ನಿಮಿಷದ ಟ್ರೈಲರ್ ಅಂತಾ ಚರ್ಚೆ ಆಗ್ತಿದೆ. ಆದರೆ ನಿಜ ಸಾರಾಂಶ 9 ನಿಮಿಷ ಟ್ರೈಲರ್ ಬಿಡುಗಡೆ ಮಾಡೋಕೆ ಇಷ್ಟ ಪಡುವುದಿಲ್ಲ ಅಂತಾ ಪ್ರಶಾಂತ್ ನೀಲ್ ಸ್ಪಷ್ಟಪಡಿಸಿದ್ದಾರೆ.
