ಬೆಂಗಳೂರು: ಇರಾನ್-ಇಸ್ರೇಲ್ ಯುದ್ಧದಿಂದಾಗಿ ದುಬೈನಲ್ಲಿ ಸಿಲುಕಿದ್ದ ಕನ್ನಡಿಗರು ವಾಪಸ್ಸಾಗಿದ್ದಾರೆ. ಇಂದು ಸಂಜೆ ಕೆಂಪೇಗೌಡ ಏರ್‌ಪೋರ್ಟ್‌ಗೆ 3ನೇ ವಿಮಾನ ಆಗಮಿಸಿದ್ದು, 246 ಕನ್ನಡಿಗರು ಬಂದಿಳಿದಿದ್ದಾರೆ.
ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸ್ಸಾಗಿದ್ದಕ್ಕೆ ಕನ್ನಡಿಗರು ಹರ್ಷ ವ್ಯಕ್ತಪಡಿಸಿದ್ದಾರೆ. ಶಾರ್ಜಾದಿಂದ ಕೊಚ್ಚಿನ್‌ಗೆ ಬಂದ ವಿಮಾನದಲ್ಲಿ 50 ಪ್ರಯಾಣಿಕರು ಸ್ವದೇಶಕ್ಕೆ ವಾಪಸಾಗಿದ್ದಾರೆ.
ಈ ವಿಮಾನದಲ್ಲಿ ಬಳ್ಳಾರಿ ಹಾಗೂ ದಾವಣಗೆರೆಯ 50 ಮಂದಿ ಆಗಮಿಸಿದ್ದಾರೆ. ಕೊಚ್ಚಿನ್‌ನಿಂದ ನಾಳೆ ಬೆಳಗ್ಗೆ ಬೆಂಗಳೂರಿಗೆ ಈ 50 ಮಂದಿ ಆಗಮಿಸುತ್ತಿದ್ದು, ಬಳ್ಳಾರಿ ಶಾಸಕ ನಾಗೇಂದ್ರ ಬೆಂಗಳೂರಿಗೆ ವಿಮಾನದ ವ್ಯವಸ್ಥೆ ಮಾಡಿದ್ದಾರೆ.

