ಬೆಂಗಳೂರು: ಕೋಮುವಾದದ (Communalism) ಕಾರಣ ಕರಾವಳಿಯಲ್ಲಿ (Karavali) ಐಟಿ-ಬಿಟಿ ಕಂಪನಿ ಬಂಡವಾಳ ಹಾಕಲು ಹೆದರುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ.
ಗಾಂಧಿ ಭವನದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಐಟಿ-ಬಿಟಿ ಕಂಪನಿಗಳಿಗೆ (IT-BT Company) ಹೂಡಿಕೆ ಮಾಡಿ ಎಂದು ಹೇಳುತ್ತೇವೆ. ಅವರು ಕೂಡ ರೆಡಿ ಆಗುತ್ತಾರೆ. ಆದರೆ ನಾಳೆ ಅವರ ಕೆಲಸಗಾರರಿಗೆ ತೊಂದರೆ ಆದರೆ ಏನು ಮಡೋದು ಅನ್ನೋ ಚಿಂತೆ ಅವರದ್ದು. ಎಲ್ಲಿಯವರೆಗೆ ಧರ್ಮಗುರುಗಳು, ರಾಜಕಾರಣಿಗಳು ಪ್ರಬುದ್ಧರಾಗಿ ಮಾತನಾಡಲ್ವೋ ಅಲ್ಲಿಯವರೆಗೂ ಸಮಾಜ ಉದ್ಧಾರ ಆಗಲ್ಲ. ರಾಜಕಾರಣಿಗಳು, ಧರ್ಮಗುರುಗಳು ಸೃಷ್ಟಿಸುವ ಧರ್ಮದ ನಶೆ ನಿಲ್ಲಬೇಕು ಎಂದರು. ಇದನ್ನೂ ಓದಿ: ಕ್ಯಾಲಿಫೋರ್ನಿಯಾದಲ್ಲಿ ಕನ್ನಡಿಗ ವಿದ್ಯಾರ್ಥಿ ಶವವಾಗಿ ಪತ್ತೆ – ಪೋಷಕರಿಂದ ತುರ್ತು ವೀಸಾಗೆ ಅರ್ಜಿ
ಬಿಜೆಪಿ ಅವರಿಗೆ ಗೊತ್ತಿಲ್ಲ, ನಾನು ಅದಮಾರು ಮಠದಲ್ಲಿ ಓದಿದವನು. ತೇಜಸ್ವಿ ಸೂರ್ಯ ಕಾನ್ವೆಂಟ್‌ನಲ್ಲಿ ಓದಿರೋದು. ಆದರೆ ನನ್ನನ್ನ ಕಾನ್ವೆಂಟ್‌ನಲ್ಲಿ ಓದಿದವನು ಎನ್ನುತ್ತಾರೆ. ಧರ್ಮ ಮನುಷ್ಯನಿಗಾಗಿ ಇರೋದು, ಮನುಷ್ಯ ಧರ್ಮಕ್ಕಾಗಿ ಇಲ್ಲ. ಔರಂಗಜೇಬನ ಸಮಾಧಿ ತೆಗೆಯೋಕೆ ಈಗ ಜ್ಞಾನೋದಯ ಆಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಗದಗ | ಶಿವರಾತ್ರಿಯಂದೇ ಶಿವಲಿಂಗ, ನಂದಿ ವಿಗ್ರಹ ಭಗ್ನಗೊಳಿಸಿದ ದುಷ್ಕರ್ಮಿಗಳು

