ಬೆಂಗಳೂರು: ‘ಪಬ್ಲಿಕ್ ಟಿವಿ’ 14 ವರ್ಷಗಳನ್ನು ಪೂರೈಸಿದೆ. ಕನ್ನಡದ ಎಲ್ಲರ ಮನೆಯ ರಂಗಣ್ಣ ಎಂದು ಪಬ್ಲಿಕ್ ಟಿವಿ ವಾರ್ಷಿಕೋತ್ಸವಕ್ಕೆ (PublicTV 14th Anniversary) ನಟ ಡಾಲಿ ಧನಂಜಯ್ (Daali Dhananjay) ಶುಭ ಹಾರೈಸಿದರು.

‘ಪಬ್ಲಿಕ್ ಟಿವಿ’ಯ 14ನೇ ವಾರ್ಷಿಕೋತ್ಸವದ ಪ್ರಯುಕ್ತ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ವೀರ ಯೋಧರಿಗೆ ‘ಸಿಂಧೂರ ಸಮ್ಮಾನ’ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ನಟ, ರಂಗಣ್ಣ (H.R.Ranganath) ಅವರು ಪ್ರತಿಯೊಂದನ್ನು ಹೇಳುತ್ತಿರುತ್ತಾರೆ. ಪ್ರೀತಿಸುತ್ತಾರೆ, ಬೈತಾರೆ, ಬುದ್ದಿ ಹೇಳ್ತಾರೆ. ಒಂದು ದಿನ ಅವರು ಪ್ರೋಗ್ರಾಮ್ನಲ್ಲಿ ಮಿಸ್ ಆದ್ರೆ, ಎಲ್ಲಿ ಇವತ್ತು ನಮ್ಮ ರಂಗಣ್ಣ ಬರಲಿಲ್ಲ ಅಂತ ಮನೆಗಳಲ್ಲಿ ಕೂತ್ಕೊಂಡು ಜನ ಮಾತಾಡಿಕೊಳ್ತಾರೆ. ಜನತೆಗೆ ಅಷ್ಟು ಹತ್ತಿರದವರು ರಂಗಣ್ಣ ಎಂದು ಬಣ್ಣಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿಗೆ 14ರ ಸಂಭ್ರಮ – ವೀರ ಯೋಧರಿಗೆ ಸಿಂಧೂರ ಸಮ್ಮಾನ
ಬಹಳ ಸ್ಕ್ರ್ಯಾಚ್ ಇಂದ ಇಷ್ಟು ಅದ್ಭುತವಾಗಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಅವರ ಜೊತೆಗೆ ನನ್ನ ಗೆಳೆಯರಿದ್ದಾರೆ. ಅವರ ಕೊಡುಗೆ ಬಹಳಷ್ಟಿದೆ. ಸ್ಫೂರ್ತಿದಾಯಕ ವ್ಯಕ್ತಿ ರಂಗಣ್ಣ ಅವರು. ಇದೇ ಇನ್ನೂ ಐವತ್ತು, ನೂರು ವರ್ಷ ಸಂಸ್ಥೆ ಚೆನ್ನಾಗಿ ಬೆಳೆಯಲಿ. ಇದೇ ರೀತಿ ರಂಗಣ್ಣ ಅವರ ಕಾರ್ಯಕ್ರಮ ಬರುತ್ತಿರಲಿ. ನಮ್ಮನ್ನೆಲ್ಲ ಎಚ್ಚರಿಸುತ್ತಿರಲಿ ಎಂದು ನಟ ಧನಂಜಯ್ ಆಶಿಸಿದರು.

