ಲಕ್ನೋ: ರಾಮಮಂದಿರದಲ್ಲಿ (Ram Mandir Donation) ನಡೆದ ಕಳ್ಳತನ ಪ್ರಕರಣಗಳ ಕುರಿತು ಎಸ್‌ಐಟಿ ನಡೆಸಿದ ತನಿಖೆಯು ಹಲವಾರು ಸಂಗತಿಗಳನ್ನು ಬಹಿರಂಗಪಡಿಸಿದೆ. 42 ದಿನಗಳಲ್ಲಿ 70 ಬಾರಿ ಕಳ್ಳತನಗಳು ನಡೆದಿರುವ ಬಗ್ಗೆ ಎಸ್‌ಐಟಿಗೆ ಬಲವಾದ ಸಾಕ್ಷ್ಯ ಸಿಕ್ಕಿದೆ.
ಎಸ್‌ಐಟಿಯ (SIT) ತನಿಖೆಯು ಕಳ್ಳತನ ಮತ್ತು ದುರುಪಯೋಗಕ್ಕೆ ಸಂಬಂಧಿಸಿದ ನಿರ್ಣಾಯಕ ಪುರಾವೆಗಳನ್ನು ಬಹಿರಂಗಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಏಪ್ರಿಲ್ 27 ರಿಂದ ಜೂನ್ 5 ರವರೆಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಎಸ್‌ಐಟಿ ಕೂಲಂಕಷವಾಗಿ ಪರಿಶೀಲಿಸಿತು. ಇದಲ್ಲದೆ, ಕಾಣಿಕೆ ಮತ್ತು ದೇಣಿಗೆ ಎಣಿಕೆ ಕೋಣೆಯ ನಗದು ಎಣಿಕೆ ಮತ್ತು ನಿರ್ವಹಣೆಯಲ್ಲಿ ಹಲವಾರು ನ್ಯೂನತೆಗಳು ತನಿಖೆ ವೇಳೆ ಬಹಿರಂಗವಾಗಿವೆ. ಇದನ್ನೂ ಓದಿ: ರಾಮನ ಲೆಕ್ಕ ‘ರಹಸ್ಯ’ ಬಯಲಾಗಿದ್ದು ಹೇಗೆ..? – ಕಳೆದ 20 ದಿನಗಳಲ್ಲಿ ಏನೇನಾಯ್ತು..?
ಈ ವೀಡಿಯೋ ಆಧರಿಸಿಯೇ 8 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಲಾಗಿದೆ. ಎಸ್‌ಐಟಿ ಆಡಿಟ್ ರಿಪೋರ್ಟ್ ಪರಿಶೀಲಿಸಿದೆ. 2022-23, 2023-24, 2024-25 ಹಣಕಾಸು ವರ್ಷಗಳ ಆಂತರಿಕ ಲೆಕ್ಕ ಪರಿಶೋಧನೆ ವೇಳೆ ಹಲವು ನ್ಯೂನತೆಗಳು ಪತ್ತೆಯಾಗಿವೆ.
ದಾಖಲೆಗಳು ಹಾಗೂ ಹುಂಡಿಗಳ ಸಂಖ್ಯೆಯ ನಡುವೆಯೂ ವ್ಯತ್ಯಾಸ ಕಂಡುಬಂದಿದೆ. ಸಿಸಿಟಿವಿ ವ್ಯಾಪ್ತಿ, ಭದ್ರತಾ ಪ್ರೋಟೋಕಾಲ್ ಕೇವಲ ಕಾಗದದಲ್ಲಿತ್ತೇ ವಿನಃ ಯಾವುದೂ ಜಾರಿಯಾಗಿರಲಿಲ್ಲ ಎನ್ನುವುದು ಎಸ್‌ಐಟಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಸಿಸಿಟಿವಿ ಕ್ಯಾಮೆರಾವಿದ್ದರೂ ಕಳ್ಳತನ – ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ರಹಸ್ಯ ಕ್ಯಾಮೆರಾದಲ್ಲಿ ಬಯಲಾಗಿದ್ದೇಗೆ?
