ಶಾಹಿದ್ ಕಪೂರ್ (shahid kapoor), ರಶ್ಮಿಕಾ ಮಂದಣ್ಣ(Rashmika Mandanna) ಮತ್ತು ಕೃತಿ ಸನೋನ್(Kriti sanon) ಅಭಿನಯದ ‘ಕಾಕ್‌ಟೇಲ್ 2′(Cocktail 2) ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಬಿಡುಗಡೆಯಾದ ಮೊದಲ ವಾರದಲ್ಲೇ ಸಿನಿಮಾ ವಿಶ್ವದಾದ್ಯಂತ 109.07 ಕೋಟಿ ರೂ. ಗಳಿಸಿದೆ.
ಮೊದಲ ಏಳು ದಿನಗಳಲ್ಲಿ ಸಿನಿಮಾ ಭಾರತದಲ್ಲಿ 70.50 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ಭಾರತದ ಗ್ರಾಸ್ ಕಲೆಕ್ಷನ್ 84.07 ಕೋಟಿ ರೂ.ಗೆ ತಲುಪಿದೆ. ಏಳನೇ ದಿನ ಸಿನಿಮಾ 4.25 ಕೋಟಿ ರೂ. ಗಳಿಸಿದೆ. ಆರನೇ ದಿನದ 5.25 ಕೋಟಿ ರೂ.ಗೆ ಹೋಲಿಸಿದರೆ ಕಲೆಕ್ಷನ್‌ನಲ್ಲಿ ಸುಮಾರು 19 ಶೇಕಡಾ ಇಳಿಕೆ ಕಂಡಿದೆ.
ವಿದೇಶಗಳಲ್ಲೂ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಏಳನೇ ದಿನ 1 ಕೋಟಿ ರೂ. ಗಳಿಸಿದ್ದು, ಒಟ್ಟು ಓವರ್‌ಸೀಸ್ ಕಲೆಕ್ಷನ್ 25 ಕೋಟಿ ರೂ.ಗೆ ಏರಿದೆ. ಇದರೊಂದಿಗೆ ವಿಶ್ವದಾದ್ಯಂತ ಚಿತ್ರದ ಒಟ್ಟು ಗ್ರಾಸ್ ಕಲೆಕ್ಷನ್ 109.07 ಕೋಟಿ ರೂ. ಆಗಿದೆ. ಮುಂಬೈ, ಬೆಂಗಳೂರು, ಜೈಪುರ, ಚೆನ್ನೈ ಸೇರಿದಂತೆ ಹಲವು ನಗರಗಳಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದನ್ನೂ ಓದಿ: ಪದ್ಮಭೂಷಣ ಸ್ವೀಕರಿಸುವಾಗ ವೀಲ್‌ಚೇರ್‌ನಲ್ಲಿ ಕಾಣಿಸಿಕೊಂಡ ಅಲ್ಕಾ ಯಾಗ್ನಿಕ್; ಆರೋಗ್ಯದ ಬಗ್ಗೆ ಭಾವುಕ ಮಾತು
ಮೊದಲ ವಾರದಲ್ಲೇ ಹಳೆಯ ದಾಖಲೆಗೆ ಬ್ರೇಕ್
2012ರಲ್ಲಿ ಬಿಡುಗಡೆಯಾದ ‘ಕಾಕ್‌ಟೇಲ್’ ಸಿನಿಮಾ ಭಾರತದಲ್ಲಿ ತನ್ನ ಸಂಪೂರ್ಣ ಪ್ರದರ್ಶನದಲ್ಲಿ 74.50 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿತ್ತು. ಇದೀಗ ‘ಕಾಕ್‌ಟೇಲ್ 2’ ಬಿಡುಗಡೆಯಾದ ಮೊದಲ ವಾರದಲ್ಲೇ ಆ ದಾಖಲೆಯನ್ನು ಹಿಂದಿಕ್ಕಿ ಹೊಸ ಸಾಧನೆ ಮಾಡಿದೆ.ಇದನ್ನೂ ಓದಿ: ಡಾ.ಪ್ರದೀಪ್‌ಗೆ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
