ಹಿರಿಯ ಗಾಯಕಿ ಅಲ್ಕಾ ಯಾಗ್ನಿಕ್(Alka Yagnik) ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ(Padma Bhushan Award) ಸ್ವೀಕರಿಸುವ ವೇಳೆ ವೀಲ್‌ಚೇರ್‌ನಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೇ ವೇಳೆ ತಮ್ಮ ಆರೋಗ್ಯ ಸಮಸ್ಯೆಯ ಬಗ್ಗೆ ಅವರು ಭಾವುಕವಾಗಿ ಮಾತನಾಡಿದ್ದಾರೆ.
ಜೂನ್ 23ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಂದ ಅಲ್ಕಾ ಯಾಗ್ನಿಕ್ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದರು. ಈ ಗೌರವ ಸ್ವೀಕರಿಸಿದ ಬಳಿಕ ಅವರು ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಬೆಳಕಿನ ವಲಯದಿಂದ ದೂರ ಉಳಿದಿದ್ದೇನೆ. ಈ ಅವಧಿಯಲ್ಲಿ ಆರೋಗ್ಯದ ಸವಾಲುಗಳನ್ನು ಎದುರಿಸುತ್ತಿದ್ದೆ. ಆದರೆ ಅಭಿಮಾನಿಗಳ ಪ್ರೀತಿ, ಪ್ರಾರ್ಥನೆ ಮತ್ತು ಬೆಂಬಲ ನನಗೆ ಶಕ್ತಿ ನೀಡಿದೆ. ಪದ್ಮಭೂಷಣ ಗೌರವ ನನ್ನ ಹೆಸರಿನಲ್ಲಿದ್ದರೂ, ಅದು ನನ್ನ ಹಾಡುಗಳನ್ನು ಪ್ರೀತಿಸಿದ ಪ್ರತಿಯೊಬ್ಬ ಅಭಿಮಾನಿಗೂ ಸೇರಿದ್ದು ಎಂದು ಅವರು ಹೇಳಿದ್ದಾರೆ.
ಈ ಗೌರವ ನನ್ನ ಕೆಲಸಕ್ಕೆ ಸಿಕ್ಕ ಮನ್ನಣೆ ಮಾತ್ರವಲ್ಲ, ಪ್ರೀತಿ, ಭರವಸೆ ಮತ್ತು ಧೈರ್ಯದ ಸಂಕೇತವೂ ಹೌದು. ನಾನು ನಿಧಾನವಾಗಿ ಮತ್ತೆ ಸಹಜ ಜೀವನಕ್ಕೆ ಮರಳುತ್ತಿದ್ದೇನೆ ಎಂದು ಅಲ್ಕಾ ತಿಳಿಸಿದ್ದಾರೆ.ಇದನ್ನೂ ಓದಿ: ತಮಿಳುನಾಡಿನಲ್ಲಿ ಹುಟ್ಟುವ ಮಕ್ಕಳಿಗೆ 1 ಗ್ರಾಂ ಉಂಗುರ – ಷರತ್ತುಗಳೇನು?
ರಾಷ್ಟ್ರಪತಿ, ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಭಾರತ ಸರ್ಕಾರಕ್ಕೆ ಈ ಗೌರವಕ್ಕಾಗಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. 2024ರಲ್ಲಿ ಅಲ್ಕಾ ಯಾಗ್ನಿಕ್ ಅಪರೂಪದ ಶ್ರವಣ ಸಮಸ್ಯೆಗೆ ತುತ್ತಾಗಿರುವುದಾಗಿ ಬಹಿರಂಗಪಡಿಸಿದ್ದರು. ವಿಮಾನ ಪ್ರಯಾಣದ ಬಳಿಕ ತಮ್ಮ ಶ್ರವಣ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾಗಿ ಅವರು ತಿಳಿಸಿದ್ದರು.
ಅಲ್ಕಾ ಯಾಗ್ನಿಕ್ ಅವರಿಗಿರುವ ಸಮಸ್ಯೆಯೇನು?
ಅಲ್ಕಾ ಯಾಗ್ನಿಕ್ ಅವರು ಸೆನ್ಸೋರಿನ್ಯೂರಲ್ ಹಿಯರಿಂಗ್ ಲಾಸ್ (SNHL) ಎಂಬ ಅಪರೂಪದ ಶ್ರವಣ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತೀವ್ರ ವೈರಲ್ ಸೋಂಕಿನ ಪರಿಣಾಮ ಅವರ ಕಿವಿಯ ನರಗಳಿಗೆ ಹಾನಿಯಾಗಿದ್ದು, ಕೇಳುವ ಸಾಮರ್ಥ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ವಿಮಾನ ಪ್ರಯಾಣದ ಬಳಿಕ ಇದ್ದಕ್ಕಿದ್ದಂತೆ ತಮಗೆ ಏನೂ ಕೇಳಿಸುತ್ತಿಲ್ಲ ಎಂಬುದನ್ನು ಅವರು ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ವೈರಲ್ ಸೋಂಕು ಕಿವಿಯ ಒಳಗಿನ ಸೂಕ್ಷ್ಮ ನರ ಕೋಶಗಳ ಮೇಲೆ ದಾಳಿ ಮಾಡಿರುವುದು ಪತ್ತೆಯಾಗಿತ್ತು. ಈ ಆರೋಗ್ಯ ಸಮಸ್ಯೆಯ ಕಾರಣದಿಂದಾಗಿ ಅಲ್ಕಾ ಯಾಗ್ನಿಕ್ ಕಳೆದ ಎರಡು ವರ್ಷಗಳಿಂದ ಹಾಡುಗಳ ರೆಕಾರ್ಡಿಂಗ್, ವೇದಿಕೆ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರೆ. ಆದರೂ ಧೈರ್ಯ ಕಳೆದುಕೊಳ್ಳದೆ ನಿಧಾನವಾಗಿ ಚೇತರಿಸಿಕೊಳ್ಳುವ ಪ್ರಯತ್ನ ಮುಂದುವರಿಸಿದ್ದಾರೆ. ಇದನ್ನೂ ಓದಿ: ತಾಯಿಯಾಗುತ್ತಿರುವ ಖುಷಿ ಹಂಚಿಕೊಂಡ ಸಮಂತಾ; ಸಿನಿಮಾ ಬಳಿಕ ಬ್ರೇಕ್
Wishing Alka Yagnik strength, comfort, and a smooth recovery. May she regain her health soon and return to full mobility and good health. pic.twitter.com/22jkpDZtOP
— Sapna Madan (@sapnamadan) June 24, 2026
ಅಲ್ಕಾ ಯಾಗ್ನಿಕ್ ಬಾಲಿವುಡ್‌ನ ಅತ್ಯಂತ ಯಶಸ್ವಿ ಗಾಯಕಿಯರಲ್ಲಿ ಒಬ್ಬರು. ಲತಾ ಮಂಗೇಶ್ಕರ್ (Lata Mangeshkar) ಹಾಗೂ ಆಶಾ ಭೋಂಸ್ಲೆ (Asha Bhosle) ಅವರ ಜೊತೆಗೆ ಅತಿ ಹೆಚ್ಚು ಸೋಲೋ ಹಾಡುಗಳನ್ನು ಹಾಡಿದ ದಾಖಲೆ ಕೂಡ ಅವರ ಹೆಸರಿನಲ್ಲಿದೆ.
/p>
