ಇತ್ತೀಚಿಗಷ್ಟೇ ಬಿಪಿಯಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದ ನಟ ವಿನೋಜ್ ಪ್ರಭಾಕರ್ (Vinod Prabhakar) ಇದೀಗ ಥಿಯೇಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಬಲರಾಮನ ದಿನಗಳು ಫಸ್ಟ್ ಶೋ ವೇಳೆ ಥಿಯೇಟರ್ ಆಗಮಿಸಿದ್ದು, ಅನಾರೋಗ್ಯದಿಂದ ಚೇತರಿಕೊಂಡು ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಸದ್ಯ ಈಗ ಆರೋಗ್ಯವಾಗಿದ್ದು, ಸ್ವತಃ ವಿನೋದ್ ಪ್ರಭಾಕರ್ ಅವರೇ ಮಾತನಾಡಿ, ನನಗೆ ಹೃದಯಾಘಾತ ಆಗಿರಲಿಲ್ಲ. ಸುಸ್ತು, ಬಿಪಿ ಲೋ ಆಗಿತ್ತು. ಆಸ್ಪತ್ರೆಯಲ್ಲಿ ನಾರ್ಮಲ್ ಬೆಡ್ ಇರದ ಕಾರಣ ಸಿಸಿಯುನಲ್ಲಿ ಇರಬೇಕಾಯ್ತು. ಇನ್ನೂ ಟ್ರೀಟ್ಮೆಂಟ್ ಮುಂದುವರೆದಿದೆ. ಥಿಯೇಟರ್‌ಗೆ ಬರೋ ಮುಂಚೆಯೂ ಇಂಜೆಕ್ಷನ್ ತೆಗೆದುಕೊಂಡು ಬಂದೆ. ಈಗ 75% ಸುಧಾರಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ‘ಕಾಕ್‌ಟೇಲ್ 2’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಲ್; ಮೊದಲ ವಾರದಲ್ಲೇ 109 ಕೋಟಿ ಕಲೆಕ್ಷನ್
ಒಂದು ವಾರದ ಹಿಂದಷ್ಟೇ ವಿನೋದ್ ಪ್ರಭಾಕರ್ ಅವರ ರಕ್ತದೊತ್ತಡದಲ್ಲಿ ತೀವ್ರ ಏರುಪೇರು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಬೆಂಗಳೂರಿನ ನಾಗರಭಾವಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಮೂರು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದರು. ಅನಾರೋಗ್ಯದ ವಿಚಾರವಾಗಿ ಅನೇಕ ವದಂತಿಗಳು ಹಬ್ಬಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದಕ್ಕೆ ಹೃದಯಾಘಾತವಾಗಿದೆ ಎಂದು ಊಹಿಸಲಾಗಿತ್ತು. ಇದೀಗ ಸ್ವತಃ ವಿನೋದ್ ಪ್ರಭಾಕರ್ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.
ಆರೋಗ್ಯದ ವಿಚಾರವಾಗಿ ಸುಳ್ಳು ವದಂತಿಗೆ ವಿನೋದ್ ಗರಂ ಆಗಿ ಮಾತನಾಡಿದ್ದಾರೆ. ಜೊತೆಗೆ ಇದು ಪ್ರಚಾರದ ಗಿಮಿಕ್ ಅಂದೋರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಲೋ ಬಿಪಿ ಆಗಿದ್ದೇ ಇದಕ್ಕೆಲ್ಲಾ ಕಾರಣ ಎಂದಿದ್ದಾರೆ. ಸತತ ಪ್ರಚಾರ, ನಿದ್ದೆ ಇಲ್ಲದೆ ಕೆಲಸ ಮಾಡಿದ್ದ ಪರಿಣಾಮ ದೇಹ ದಣಿದಿತ್ತು ಎಂದಿದ್ದಾರೆ. `ಪ್ರಚಾರಕ್ಕೆ ಗಿಮಿಕ್ ಮಾಡೋಕೆ ಇದೇನು ನನ್ನ ಮೊದಲ ಸಿನಿಮಾ ಅಲ್ಲ, 25 ಸಿನಿಮಾ ಮಾಡಿದ್ದೇನೆ ಎಂದು ಗುಡುಗಿದ್ದಾರೆ. . ಇದನ್ನೂ ಓದಿ: ಕೊರಟಾಲ ಶಿವ ನಿರ್ದೇಶನದ ಬಾಲಯ್ಯನ 112ನೇ ಚಿತ್ರಕ್ಕೆ ಚಾಲನೆ
