Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮೂರು ರಾಜ್ಯಗಳ ಜನಾದೇಶ ಲೋಕಸಭೆಯ ಹ್ಯಾಟ್ರಿಕ್‌ ಗೆಲುವಿನ ಗ್ಯಾರಂಟಿ: ಮೋದಿ ಭರವಸೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಮೂರು ರಾಜ್ಯಗಳ ಜನಾದೇಶ ಲೋಕಸಭೆಯ ಹ್ಯಾಟ್ರಿಕ್‌ ಗೆಲುವಿನ ಗ್ಯಾರಂಟಿ: ಮೋದಿ ಭರವಸೆ

Latest

ಮೂರು ರಾಜ್ಯಗಳ ಜನಾದೇಶ ಲೋಕಸಭೆಯ ಹ್ಯಾಟ್ರಿಕ್‌ ಗೆಲುವಿನ ಗ್ಯಾರಂಟಿ: ಮೋದಿ ಭರವಸೆ

Public TV
Last updated: December 3, 2023 9:06 pm
Public TV
Share
2 Min Read
narendra modi
SHARE

ನವದೆಹಲಿ: ಮೂರು ರಾಜ್ಯಗಳ ಜನಾದೇಶ (ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢ) ಲೋಕಸಭೆಯ ಹ್ಯಾಟ್ರಿಕ್‌ ಗೆಲುವಿನ ಗ್ಯಾರಂಟಿ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಆಶಯ ವ್ಯಕ್ತಪಡಿಸಿದ್ದಾರೆ.

ನಾಲ್ಕು ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಸಾಧಿಸಿದೆ. ಬಿಜೆಪಿ ಗೆಲುವಿನ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಕಾರ್ಯಕರ್ತರು ಮತ್ತು ದೇಶದ ಜನತೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದರು.

bjp leaders workers

ಇದು ರೈತರು, ಆದಿವಾಸಿಗಳು, ಮಹಿಳೆಯರ ಗೆಲುವು. ಈ ಗೆಲುವಿನಲ್ಲಿ ಮಹಿಳೆಯರು, ಯುವಕರು ತಮ್ಮ ಗೆಲುವು ನೋಡುತ್ತಿದ್ದಾರೆ. 2047 ಭಾರತವನ್ನು ವಿಕ್ಸಿತ್ ದೇಶ ಮಾಡುವ ಗುರಿಗೆ ಶಕ್ತಿ ನೀಡಲಿದೆ. ಈ ಚುನಾವಣೆಯಲ್ಲಿ ನಾರಿ ಶಕ್ತಿ ದೊಡ್ಡದಾಗಿ ಹೊರ‌ಹೊಮ್ಮಿದೆ. ದೇಶದ ಮಹಿಳೆಯರು ಸುರಕ್ಷಾ‌ ಕವಚವಾಗಿ ನಿಂತರೆ, ಯಾವುದೇ ಕಾರಣಕ್ಕೂ ಹಾನಿಯಾಗಲು ಬಿಡುವುದಿಲ್ಲ. ಬಿಜೆಪಿ ಸರ್ಕಾರದಲ್ಲಿ‌ ಮಹಿಳೆಯರು ಸಕ್ರಿಯವಾಗಿ ಭಾಗಿಯಾಗಿದ್ದಾರೆ. ನಮಗೆ ರಕ್ಷಾ ಕವಚವಾಗಿದ್ದಾರೆ ಎಂದು ಮಹಿಳೆಯರಿಗೆ ಪ್ರಧಾನಿ ಕೃತಜ್ಞತೆ ಸಲ್ಲಿಸಿದ್ದಾರೆ.

ನಾನು ಇಂದು ವಿನ್ರಮವಾಗಿ ದೇಶದ ಜನರಿಗೆ ಹೇಳುತ್ತಿದ್ದೇನೆ. ನಾವು ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಲಿದ್ದೇವೆ. ಇದು ಮೋದಿ ಗ್ಯಾರಂಟಿ. ಗ್ಯಾರಂಟಿ ಪೂರ್ಣ ಮಾಡುವುದು ಮೋದಿ ಗ್ಯಾರಂಟಿ. ದೇಶದ ಯುವಕರು ಅಭಿವೃದ್ಧಿಯನ್ನು ಮಾತ್ರ ಕೇಳುತ್ತಾರೆ. ಇದಕ್ಕೆ ವಿರುದ್ಧವಾಗಿ ಕೆಲಸ ಮಾಡಿದವರು ಅಧಿಕಾರದಿಂದ ಹೊರಗಿದ್ದಾರೆ. ಪೇಪರ್ ಲೀಕ್ ಸೇರಿದಂತೆ ಹಲವು ಹರಗಣ ಮಾಡಿದ ಪಕ್ಷಗಳು ಅಧಿಕಾರದಿಂದ ಹೊರಗಿವೆ. ದೇಶದ ಯುವಕರಲ್ಲಿ ಬಿಜೆಪಿ ಮೇಲೆ ಭರವಸೆ ಹೆಚ್ಚಿದೆ. ನಮ್ಮ ಆಕಾಂಕ್ಷೆಗಳನ್ನು ಬಿಜೆಪಿ ಪೂರ್ಣ ಮಾಡಬಲ್ಲದು ಎಂದು ಯುವಕರು ನಂಬಿದ್ದಾರೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಆದಿವಾಸಿಗಳನ್ನು ತಾತ್ಸರ ಮಾಡಿದ ಪಕ್ಷವನ್ನು ಅವರು ಅಧಿಕಾರದಿಂದ ಕೆಳಗಿಳಿಸಿದ್ದಾರೆ. ಆದಿವಾದಿಗಳಿರುವ ರಾಜ್ಯದಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಂಡಿದೆ. ಆದಿವಾಸಿ ಸಮುದಾಯದ ಅಭಿವೃದ್ಧಿ ನಿರೀಕ್ಷೆಯಲ್ಲಿದ್ದಾರೆ. ಈ‌ ನಿರೀಕ್ಷೆಯನ್ನು ಬಿಜೆಪಿ ಪೂರ್ಣ ಮಾಡಬಲ್ಲದು ಎಂದು ನಂಬಿದ್ದಾರೆ ಎಂದು ತಿಳಿಸಿದ್ದಾರೆ.

bjp leaders 1

ರಾಷ್ಟ್ರಿಯ ಅಧ್ಯಕ್ಷ ನಡ್ಡಾ ಅವರ ಕಾರ್ಯತಂತ್ರವೂ ಗೆಲವಿಗೆ ಕಾರಣ. ಈ ಚುನಾವಣೆ ಅವಧಿಯಲ್ಲಿ ನಡ್ಡಾ ಮನೆಯಲ್ಲಿ ದುರ್ಘಟನೆ ನಡೆಯಿತು. ಆದಾಗ್ಯೂ ಕಾರ್ಯಕರ್ತನಂತೆ ಕೆಲಸ ಮಾಡಿದರು. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ವಾಪಸ್ ಬರಲ್ಲ ಎಂದು ಹೇಳಿದ್ದೆ. ನಾನು ಭವಿಷ್ಯ ನಂಬಲ್ಲ, ಆದರೆ‌ ರಾಜಸ್ಥಾನ ಜನರ ಮೇಲೆ‌ ನನಗೆ ವಿಶ್ವಾಸವಿತ್ತು. ಈಗ ಅದು ನಿಜವಾಗಿದೆ. ಬಿಜೆಪಿ ಮೇಲೆ ರಾಜಸ್ಥಾನದಲ್ಲಿ ಭರವಸೆ ಹೆಚ್ಚಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ತೆಲಂಗಾಣ ಜನರಿಗೆ ನಾನು ಅಭಾರಿ. ನಿರಂತರವಾಗಿ ಬಿಜೆಪಿ ಜನಪ್ರಿಯತೆ ಹೆಚ್ಚುತ್ತಿದೆ. ಬಿಜೆಪಿ ತೆಲಂಗಾಣ ಜನರ ಸೇವೆಯಲ್ಲಿ ಲೋಪ ಮಾಡುವುದಿಲ್ಲ. ಬಿಜೆಪಿ ತೆಲಂಗಾಣ ಅಭಿವೃದ್ಧಿಗೆ ಕೆಲಸ‌ ಮಾಡಲಿದೆ. ನಮಗೂ ತೆಲಂಗಾಣಕ್ಕೂ ಒಳ್ಳೆಯ ಅನುಬಂಧವಿದೆ ಎಂದು ತೆಲುಗಿನಲ್ಲಿ ಮೋದಿ ಮಾತನಾಡಿ ಗಮನ ಸೆಳೆದಿದ್ದಾರೆ.

ಭಾರತದ ಮತದಾರರು ಪರಿಪಕ್ವರಿದ್ದಾರೆ. ಸ್ಥಿರ ಸರ್ಕಾರಕ್ಕಾಗಿ ಯೋಚಿಸಿ ಬಹುಮತ ನೀಡುತ್ತಿದ್ದಾರೆ. ನಮ್ಮ ನೀತಿ ನಿರ್ಣಗಳಲ್ಲಿ ದೇಶ ಇದೆ. ಭಾರತ ಮಾತಾ ಕಿ ಜೈ ನಮ್ಮ ಮಂತ್ರವಾಗಿದೆ. ಬಿಜೆಪಿ ಬರೀ ನೀತಿ ರೂಪಿಸುವುದಿಲ್ಲ. ಅದರ ಹಕ್ಕುದಾರರಿಗೆ ತಲುಪಿಸುತ್ತದೆ. ಭಾರತ ಮುಂದುವರಿದರೆ ರಾಜ್ಯವೂ ಮುಂದುವರಿಯಲಿದೆ. ಜನರ ಜೀವನ ಮಟ್ಟ ಉತ್ತಮವಾಗಲಿದೆ. ಅದಕ್ಕಾಗಿ ಜನರು ನಿರಂತರವಾಗಿ ಬಿಜೆಪಿಯನ್ನು ಆಯ್ಕೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಬಿಜೆಪಿ ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ಜನರ ಬೆಂಬಲ‌ ಸಿಗುತ್ತಿದೆ. ಕೆಲವು ಜನರು ಭ್ರಷ್ಟಾಚಾರಿಗಳ ಜೊತೆಗೆ ‌ನಿಂತಿದ್ದಾರೆ. ಅವರಿಗೆ ಜನರು ಉತ್ತರವನ್ನು ಕೊಟ್ಟಿದ್ದಾರೆ. ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ದೇಶ. ಇಂದು ಭಾರತದಲ್ಲಿ ದಾಖಲೆಯ ಜಿಎಸ್ಟಿ ಸಂಗ್ರಹವಾಗುತ್ತಿದೆ. ಕೃಷಿ, ಡಿಜಿಟಲ್ ಹಣ ವರ್ಗಾವಣೆ ಹೆಚ್ಚುತ್ತಿದೆ. ವಿದೇಶಿ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡುತ್ತಿವೆ ಎಂದು ಹೇಳಿದ್ದಾರೆ.

TAGGED:bjpChattisgarhMadhya Pradeshnarendra modirajasthanಛತ್ತೀಸಗಢನರೇಂದ್ರ ಮೋದಿಬಿಜೆಪಿಮಧ್ಯಪ್ರದೇಶರಾಜಸ್ಥಾನ
Share This Article
Facebook Whatsapp Whatsapp Telegram

Cinema news

Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema
vijay thalapathy
ನಟ ವಿಜಯ್‌ ವಿರುದ್ಧ ಪ್ರಕರಣ ದಾಖಲು
Cinema Latest South cinema Top Stories

You Might Also Like

Donald Trump 1 1
Latest

ಫಾರ್ಮಾ ಕಂಪನಿಗಳಿಗೆ ಟ್ರಂಪ್‌ ಶಾಕ್‌ – ಬ್ರಾಂಡೆಡ್‌ ಔಷಧಗಳಿಗೆ 100% ಸುಂಕ

Public TV
By Public TV
28 minutes ago
Nandini products
Bengaluru City

ಕೋಲಾರ | ನಂದಿನಿ ಅಕ್ವಾ, ಐಸ್‌ಕ್ರೀಂ ಪೂರೈಕೆ ಸ್ಥಗಿತ

Public TV
By Public TV
1 hour ago
Hassan Crime
Crime

ದಾರಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ – ಮಹಿಳೆಯನ್ನ ಬೆತ್ತಲುಗೊಳಿಸಿ ಹಲ್ಲೆಗೆ ಯತ್ನ

Public TV
By Public TV
2 hours ago
General Randy George
Latest

General Randy George| ಸೇನಾ ಮುಖ್ಯಸ್ಥನನ್ನೇ ಕಿತ್ತು ಹಾಕಿದ ಟ್ರಂಪ್‌ ಸರ್ಕಾರ – ರಾಜೀನಾಮೆಗೆ ಸೂಚನೆ

Public TV
By Public TV
2 hours ago
I would have banned him IPL founder Lalit Modi slams LSG owner Sanjiv Goenka over animated exchange with captain Rishabh Pant and coach after defeat
Cricket

ನಾನು ಐಪಿಎಲ್‌ ಅಧ್ಯಕ್ಷನಾಗಿದ್ದರೆ ಗೋಯೆಂಕಾ ಬ್ಯಾನ್‌ – ಲಲಿತ್‌ ಮೋದಿ ಕೆಂಡಾಮಂಡಲ

Public TV
By Public TV
2 hours ago
Love
Latest

ಪ್ರತಿ ಮಳೆಗೂ ನೀನಿಟ್ಟ ನೆನಪು ಅದೆಷ್ಟು ಶಾಶ್ವತ..!

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?