ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಆರ್‌ಸಿಬಿ (RCB) ವಿಜಯೋತ್ಸವದ ಸಂಭ್ರಮಾಚರಣೆ ಜೋರಾಗಿದೆ. ಇದೇ ವೇಳೆ ಸಂಚಾರಿ ಪೊಲೀಸರು 260 ಡ್ರಂಕ್ & ಡ್ರೈವ್ (Drunk and Drive Case) ದಾಖಲಿಸಿದ್ದಾರೆ.
ಭಾನುವಾರ (ಮೇ 31) ನಡೆದ ಐಪಿಎಲ್ 2026ರ (IPL 2026) ಫಿನಾಲೆಯಲ್ಲಿ ಗೆದ್ದು ಆರ್‌ಸಿಬಿ (RCB) ತಂಡ ಸತತ ಎರಡನೇ ಬಾರಿಗೆ ಟ್ರೋಫಿ ತನ್ನದಾಗಿಸಿಕೊಂಡಿದೆ. ಈ ಹಿನ್ನೆಲೆ ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದ ಸಂಭ್ರಮಾಚರಣೆ ಜೋರಾಗಿದೆ. ಇದೇ ಸಂದರ್ಭದಲ್ಲಿ ಬೇಟೆಗಿಳಿದ ಸಂಚಾರಿ ಪೊಲೀಸರು ನಿನ್ನೆ ಒಂದೇ ರಾತ್ರಿಯಲ್ಲಿ 260 ಡ್ರಂಕ್ & ಡ್ರೈವ್ ಕೇಸ್ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: 4 ಐಪಿಎಲ್ ಆವೃತ್ತಿ – ವಿಶಿಷ್ಟ ದಾಖಲೆ ಬರೆದ ಕೊಹ್ಲಿ
ಅಭಿಮಾನಿಗಳು ಬೈಕ್ ರ‍್ಯಾಲಿ, ಆರ್‌ಸಿಬಿ ಪರ ಜಯಘೋಷಗಳನ್ನು ಕೂಗಿ ಹಾಗೂ ಹಲವೆಡೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಇದಕ್ಕೂ ಮುನ್ನ ಸಂಚಾರಿ ಪೊಲೀಸರು ಫೈನಲ್ ಹಿನ್ನೆಲೆ ನಗರದ ಪ್ರಮುಖ ಫ್ಲೈಓವರ್‌ಗಳನ್ನು ರಾತ್ರಿ 11ಗಂಟೆಯಿಂದ ಮುಂಜಾನೆ 5 ಗಂಟೆ ತನಕ ಬಂದ್ ಮಾಡುವಂತೆ ಸೂಚನೆ ಹೊರಡಿಸಿದ್ದರು.
