ಬೆಂಗಳೂರು: ಬ್ಯಾಂಕ್ ಸಿಬ್ಬಂದಿ ಗಮನ ಬೇರೆಡೆ ಸೆಳೆದು ಹಣ ಕಳ್ಳತನ ಮಾಡಿರುವ ಘಟನೆ ನಗರದ ಸಂಪಿಗೆ ರಸ್ತೆಯ ವಿಜಯಾ ಬ್ಯಾಂಕ್ ನಲ್ಲಿ ನಡೆದ ನಡೆದಿದೆ.
ಕಳೆದ ತಿಂಗಳ 31 ರಂದು ಈ ಘಟನೆ ನಡೆದಿದೆ. ಏಳು ಜನ ಅಪರಿಚಿತ ವ್ಯಕ್ತಿಗಳು ಈ ಕೃತ್ಯ ಎಸಗಿದ್ದು, ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ ಗಮನ ಬೇರೆಡೆ ಸೆಳೆದು ಕ್ಯಾಶ್ ಕೌಂಟರ್ ಗೆ ಹೋಗಿದ್ದ ಖದೀಮರು ಅಲ್ಲಿದ್ದ ಹತ್ತು ಲಕ್ಷ ಹಣ ಎಗರಿಸಿ ಪರಾರಿಯಾಗಿದ್ದಾರೆ. ಬಳಿಕ ಬ್ಯಾಂಕ್ ವಹಿವಾಟು ಅಂತ್ಯವಾದ ನಂತ್ರ ಹತ್ತು ಲಕ್ಷ ಹಣ ಕಡಿಮೆಯಾಗಿತ್ತು. ಹಣದ ವಹಿವಾಟು ತನಿಖೆ ವೇಳೆ ಹಣ ಕಡಿಮೆಯಾಗಿದ್ದು ಬೆಳಕಿಗೆ ಬಂದಿದೆ.
Advertisement
ಬ್ಯಾಂಕ್ ಸಿಸಿಟಿವಿ ಪರಿಶೀಲನೆ ನಡೆಸಿದ ಸಿಬ್ಬಂದಿ, ಈ ವೇಳೆ ಏಳು ಜನ ವ್ಯಕ್ತಿಗಳು ಅನುಮಾನಸ್ಪದವಾಗಿ ಓಡಾಡುತ್ತಿರುವುದು ಕಂಡು ಬಂದಿದೆ. ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಎಸ್ ಸಿ ನಾಯಕ್ ದೂರು ದಾಖಲಿದ್ದಾರೆ.
Advertisement
ಸದ್ಯ ದೂರು ದಾಖಲಿಸಿಕೊಂಡಿರೋ ಪೊಲೀಸರು ವಂಚಕ ಗ್ಯಾಂಗ್ ಗಾಗಿ ಬಲೆ ಬೀಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv