ಚಂಡೀಗಢ: ನಿಶ್ಚಿತಾರ್ಥ ಸಮಾರಂಭಕ್ಕೆ ನುಗ್ಗಿನ ದುಷ್ಕರ್ಮಿಗಳು 27 ವರ್ಷದ ಯುವಕರನ್ನು ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ಫರಿದಾಬಾದ್‍ನ ಟಿಗಾಂವ್‍ನಲ್ಲಿ ನಡೆದಿದೆ.
ಮೃತ ದುರ್ದೈವಿ ಕಪಿಲ್ ಅದಾನ ಮತ್ತು ಆತನ ಸಹೋದರ ಸತ್ನಾಮ್ ಫರಿದಾಬಾದ್‍ನ ಟಿಗಾಂವ್‍ನಲ್ಲಿ ನಡೆಯುತ್ತಿದ್ದ ತಮ್ಮ ಸಂಬಂಧಿ ನಿಶ್ಚಿತಾರ್ಥಕ್ಕೆ ಹೋಗಿದ್ದರು. ಆಗ ಕಪಿಲ್ ಮತ್ತು ಸತ್ನಾಮ್ ಊಟ ಮಾಡುವಾಗ ದುಷ್ಕರ್ಮಿಗಳು ಬಂದು ಕಪಿಲ್ ಮೇಲೆ ಗುಂಡು ಹಾರಿಸಿದ್ದಾರೆ. ಟಿಗಾಂವ್ ಪೊಲೀಸ್ ಠಾಣೆಯಲ್ಲಿ ಐಪಿಸಿಯ ಸೆಕ್ಷನ್ 302(ಕೊಲೆ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ಪರ್ಯಾಯ ಅಂದ್ರೆ ಏನು? ಮಧ್ವಾಚಾರ್ಯರು ಕೊಟ್ಟಿರುವ ಅಕ್ಷಯ ಪಾತ್ರೆ, ಸಟ್ಟುಗವೇ ಅಧಿಕಾರ ಹಸ್ತಾಂತರಕ್ಕೆ ಅಂಕಿತ
Advertisement
Advertisement
ಹಳೆಯ ದ್ವೇಷವೇ ಕಾರಣ!
ಮೃತ ಕಪಿಲ್ ಅದಾನ ಟಿಗಾಂವ್ ಗ್ರಾಮದ ನಿವಾಸಿ. ಸಾಗರ್ ಮತ್ತು ಆಕಾಶ್ ಎಂದು ಗುರುತಿಸಲಾದ ಇಬ್ಬರು ಪುರುಷರು ಅವರ ಸೋದರಳಿಯ ಸೋನು ಅವರ ಗಾರ್ಮೆಂಟ್ಸ್ ಅಂಗಡಿಗೆ ಡಿಸೆಂಬರ್ 6 ರಂದು ಶಾಪಿಂಗ್ ಮಾಡುವ ನೆಪದಲ್ಲಿ ನುಗ್ಗಿದ್ದರು.
Advertisement
ಈ ವೇಳೆ ಆಕಾಶ್ ಮತ್ತು ಸಾಗರ್ ಕಪಿಲ್ ಮಗನ ಮೇಲೆ ಹಲ್ಲೆ ಮಾಡಿ ಅಂಗಡಿಯಲ್ಲಿದ್ದ 3,500 ರೂ. ಎತ್ತಿಕೊಂಡು ಕೊಲೆ ಬೆದರಿಕೆ ಹಾಕಿದ್ದರು. ಘಟನೆಯ ನಂತರ ಕಪಿಲ್ ಟಿಗಾಂವ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ. ಅಂದಿನಿಂದ ಆರೋಪಿಗಳು ಪ್ರಕರಣವನ್ನು ಹಿಂಪಡೆಯುವಂತೆ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದರು.
Advertisement
ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಕಪಿಲ್, ಸಹೋದರ ಸತ್ನಾಮ್, ಸೋದರಳಿಯ ಸೋನು ಮತ್ತು ಇನ್ನೊಬ್ಬ ಸಂಬಂಧಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಈ ವೇಳೆ ಅವರು ಊಟ ಮಾಡುವಾಗ ಸಾಗರ್ ಮತ್ತು ಆಕಾಶ್ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಪೊಲೀಸ್ ದೂರು ಹಿಂಪಡೆಯುವಂತೆ ಬೆದರಿಕೆ ಹಾಕಿದ್ದಾರೆ. ಅದಕ್ಕೆ ಕಪಿಲ್ ನಿರಾಕರಿಸಿದಾಗ ವಾಗ್ವಾದ ನಡೆಯಿತು. ಆಗ ಸಾಗರ್ ಬಂದೂಕು ತಂದಿದ್ದು, ಕಪಿಲ್‍ಗೆ ಹತ್ತಿರದಿಂದಲೇ ಗುಂಡು ಹಾರಿಸಿದ್ದಾನೆ. ಇದನ್ನೂ ಓದಿ: ಭಾರತದಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯ: ಮೋದಿ
ಘಟನೆ ಕುರಿತು ಸತ್ನಾಮ್ ಪೊಲೀಸರಿಗೆ ದೂರು ನೀಡಿದ್ದು, ಸಂಪೂರ್ಣವಾಗಿ ವಿವರವನ್ನು ನೀಡಿದ್ದಾರೆ. ಪ್ರಸ್ತುತ ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡಗಳು ಕಾರ್ಯಚರಣೆಯನ್ನು ಮಾಡುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.