ನವದೆಹಲಿ: ಐಪಿಎಲ್ 2026ರ (IPL 2026) ಸೀಸನ್ ಮುಕ್ತಾಯಗೊಂಡ ಬೆನ್ನಲ್ಲೇ ಭಾರತ (India) ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ (Sunil Gavaskar) ಅವರು ಇದೊಂದೇ ಕಾರಣಕ್ಕೆ ಐಪಿಎಲ್ 2026ರ ಸೀಸನ್ ನೆನಪಿನಲ್ಲಿ ಉಳಿಯಲಿದೆ ಎಂದು ಹೇಳಿದ್ದಾರೆ.
ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಐಪಿಎಲ್ 2026ರ ಆವೃತ್ತಿ ಸದಾ ನನ್ನ ನೆನಪಿನಲ್ಲಿ ಉಳಿಯಲಿದೆ. ನಿಜಕ್ಕೂ ವೈಭವ್ ಸೂರ್ಯವಂಶಿ (Vaibhav Sooryavanshi) ಅವರ ಆಟವನ್ನು ಮರೆಯೋಕೆ ಸಾಧ್ಯವೇ ಇಲ್ಲ ಎಂದು ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ಯುವ ಸೆನ್ಸೇಷನಲ್ ಆಟಗಾರನನ್ನು ಶ್ಲಾಘಿಸಿದ್ದಾರೆ. ಇದನ್ನೂ ಓದಿ: 1.10 ಕೋಟಿ ಹೂಡಿಕೆಗೆ ಸಿಕ್ಕಿದ್ದು 34.97 ಕೋಟಿ – 3.10 ಕೋಟಿ ಬಾಚಿಕೊಂಡ ಸೂರ್ಯವಂಶಿ!

ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಫೈನಲ್ ತಲುಪದಿದ್ದರೂ, ವೈಭವ್ ಸೂರ್ಯವಂಶಿ ತಮ್ಮ ಉತ್ತಮ ಬ್ಯಾಟಿಂಗ್ ಶೈಲಿಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ಈ ಆವೃತ್ತಿಯಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಅವರು 220ಕ್ಕೂ ಅಧಿಕ ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 776 ರನ್ ಗಳಿಸಿ `ಆರೆಂಜ್ ಕ್ಯಾಪ್’ ಮುಡಿಗೇರಿಸಿಕೊಂಡಿದ್ದಾರೆ. ಈ ಸೀಸನ್‌ನಲ್ಲಿ ನಿಮ್ಮ ಮರೆಯಲಾಗದ ನೆನಪು ಯಾವುದು ಎಂದು ಪ್ರಶ್ನಿಸಿದಾಗ, 15 ವರ್ಷದ ಈ ಬಾಲಕನೇ ಈ ಬಾರಿಯ ಐಪಿಎಲ್‌ನ ಅಸಲಿ ಹೀರೋ ಎಂದಿದ್ದಾರೆ. ಒಂದೇ ಸೀಸನ್‌ನಲ್ಲಿ 72 ಸಿಕ್ಸರ್‌ಗಳನ್ನು ಚಚ್ಚಿದ ವೈಭವ್ ಅದ್ಭುತ ಸಾಧನೆಯನ್ನು ಕೊಂಡಾಡಿದ್ದಾರೆ.

ವೈಭವ್ ಬ್ಯಾಟಿಂಗ್ ಮಾಡಿದ ರೀತಿ, ಭರ್ಜರಿ 72 ಸಿಕ್ಸರ್‌ಗಳನ್ನು ಬಾರಿಸಿದ್ದು ಮತ್ತು ಕೇವಲ ಪವರ್‌ಪ್ಲೇನಲ್ಲೇ 500ಕ್ಕೂ ಹೆಚ್ಚು ರನ್ ಗಳಿಸಿದ್ದು ನಿಜಕ್ಕೂ ನಂಬಲಾಗದ ಸಾಧನೆ. 15 ವರ್ಷದ ಹುಡುಗನಿಂದ ಇಂತಹ ಅದ್ಭುತ ಪ್ರದರ್ಶನ ಮೂಡಿಬಂದಿರುವುದು ಭಾರತೀಯ ಕ್ರಿಕೆಟ್‌ನ ಉಜ್ವಲ ಭವಿಷ್ಯಕ್ಕೆ ಶುಭ ಸಂಕೇತವಾಗಿದೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.ಇದನ್ನೂ ಓದಿ: ನನಗೂ ಟೆಸ್ಟ್ ಕ್ರಿಕೆಟ್ ಆಡೋ ಆಸೆಯಿದೆ ಎಂದ ಸೂರ್ಯವಂಶಿ: ಟೀಮ್ ಇಂಡಿಯಾಕ್ಕೆ ಆಯ್ಕೆಯಾಗ್ತಾರಾ ಬಿಗ್ ಹಿಟ್ಟರ್?
