ನವದೆಹಲಿ: ಸಿಬಿಎಸ್‌ಇ (CBSE) 12ನೇ ತರಗತಿಯ ಉತ್ತರ ಪತ್ರಿಕೆಗಳ ಪರಿಶೀಲನೆ ಮತ್ತು ಮರುಮೌಲ್ಯಮಾಪನ ಸೇರಿದಂತೆ ನಂತರದ ಇತರ ಕಾರ್ಯಚಟುವಟಿಕೆಗಳಿಗಾಗಿ ಇಂದು ಸಿಬಿಎಸ್‌ಇ ಪೋರ್ಟಲ್ ಓಪನ್ ಆಗಿದೆ. ಸೈಬರ್ ದಾಳಿ (Cyber Attack) ನಡುವೆಯೂ ಈಗಾಗಲೇ 16,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ್ದಾರೆ.
ಡಿಜಿಟಲ್ ಮೌಲ್ಯಮಾಪನಕ್ಕಾಗಿ ಪರಿಚಯಿಸಲಾದ `ಆನ್ ಸ್ಕ್ರೀನ್ ಮಾರ್ಕಿಂಗ್’ (OSM) ವ್ಯವಸ್ಥೆಯಲ್ಲಿ ಉಂಟಾದ ಲೋಪದೋಷಗಳು ಹಾಗೂ ತಾಂತ್ರಿಕ ಅಡಚಣೆಗಳಿಂದಾಗಿ ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನಿಗದಿತ ದಿನಾಂಕಕ್ಕಿಂತ ಕೆಲ ದಿನಗಳ ನಂತರ ತಡವಾಗಿ ಈ ಪೋರ್ಟಲ್ ಅನ್ನು ಸಿಬಿಎಸ್‌ಸಿ ಆರಂಭಿಸಿದೆ. ವಿದ್ಯಾರ್ಥಿಗಳು ಈಗಾಗಲೇ ಮೌಲ್ಯಮಾಪನ ಮಾಡಿದ ಉತ್ತರ ಪತ್ರಿಕೆಗಳ ಸ್ಕಾö್ಯನ್ ಕಾಪಿಗಳನ್ನು ಪಡೆದಿದ್ದು, ವ್ಯತ್ಯಾಸಗಳ ಪರಿಶೀಲನೆ ಅಥವಾ ಮರುಮೌಲ್ಯಮಾಪನಕ್ಕಾಗಿ ಮೀಸಲಾದ ಅಧಿಕೃತ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಪೋರ್ಟಲ್ ಜೂನ್ 6ರ ಮಧ್ಯರಾತ್ರಿವರೆಗೆ ಓಪನ್ ಇರಲಿದೆ ಎಂದು ಸೂಚಿಸಿದೆ. ಇದನ್ನೂ ಓದಿ: CBSE ಪೋರ್ಟಲ್ ಮೇಲೆ ಸೈಬರ್ ದಾಳಿ
ಇನ್ನು, ಈ ಗೊಂದಲಗಳ ಹಿನ್ನೆಲೆ ಕೇಂದ್ರ ಸರ್ಕಾರವು (Central Govt) ಸಿಬಿಎಸ್‌ಸಿ ಚೇರ್ಮನ್ ಮತ್ತು ಸೆಕ್ರೆಟರಿಯನ್ನು ವರ್ಗಾವಣೆ ಮಾಡಿ, ತನಿಖೆಗಾಗಿ ತಜ್ಞರ ತಂಡವನ್ನು ರಚಿಸಿದೆ. ಈ ಸಮಿತಿಯು ತಿಂಗಳ ಒಳಗೆ ವರದಿ ಒಪ್ಪಿಸಬೇಕಿದೆ.
ಈ ಮಧ್ಯೆ, ಸಿಬಿಎಸ್‌ಸಿ ಒಎಸ್‌ಎಂ ಅವಾಂತರ ಪತ್ತೆ ಹಚ್ಚಿದ ಸಾರ್ಥಕ್ ಸಿದ್ಧಾಂತ್ ಸಂಸದೀಯ ಸ್ಥಾಯಿ ಸಮಿತಿ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ಸಾರ್ಥಕ್ ಸಿದ್ಧಾಂತ್ ಸಿಬಿಎಸ್‌ಇ ಬಿಡುಗಡೆ ಮಾಡಿದ್ದ ಟೆಂಡರ್ ಪ್ರಕ್ರಿಯೆಯಲ್ಲಿನ ಲೋಪದೋಷಗಳು ಹಾಗೂ ತಾಂತ್ರಿಕ ಅವಾಂತರಗಳನ್ನು ತನ್ನ ಬ್ಲಾಗ್ ಮೂಲಕ ಬಯಲಿಗೆಳೆದಿದ್ದನು.

ಇನ್ನೂ ಇಂದು ಪೋರ್ಟಲ್ ಓಪನ್ ಆದ ಬೆನ್ನಲ್ಲೇ ಕೇವಲ 2 ನಿಮಿಷಗಳಲ್ಲಿ ಸುಮಾರು 1.5 ಮಿಲಿಯನ್‌ಗಿಂತಲೂ ಅಧಿಕ ಸೈಬರ್ ದಾಳಿಗಳು ನಡೆದಿವೆ ಎಂದು ಸಿಬಿಎಸ್‌ಇ ತಿಳಿಸಿದೆ. ಆದಾಗ್ಯೂ, ಪ್ರಸ್ತುತ ಪೋರ್ಟಲ್ ಸುರಕ್ಷಿತವಾಗಿದ್ದು, ಈಗಾಗಲೇ 16,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ್ದಾರೆ.
ವಿದ್ಯಾರ್ಥಿಗಳಿಂದ ಫೀಡ್‌ಬ್ಯಾಕ್ ಪಡೆದ ನಂತರ ಹಲವಾರು ಸುಧಾರಣೆಗಳನ್ನು ಪರಿಚಯಿಸಲಾಗಿದೆ. ಬದಲಾವಣೆಗಳಲ್ಲಿ, ಅರ್ಜಿ ಪ್ರಕ್ರಿಯೆಯನ್ನು ಸುಗಮ ಮತ್ತು ಹೆಚ್ಚು ಬಳಕೆದಾರ ಸ್ನೇಹಿಯಾಗಿ ಮಾಡಲು ಅವಧಿಯ ಸಮಯ ಮಿತಿಗಳನ್ನು ವಿಸ್ತರಿಸಲಾಗಿದೆ. ಸಿಬಿಎಸ್‌ಇ ತಾಂತ್ರಿಕ ತಂಡಗಳು ವೇದಿಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿವೆ. ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಅಡೆತಡೆಯಿಲ್ಲದ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ ಎಂದು ಸಿಬಿಎಸ್‌ಇ ತಿಳಿಸಿದೆ.ಇದನ್ನೂ ಓದಿ: ಜುಲೈನಿಂದ ಶ್ರೀನಗರ ಏರ್‌ಪೋರ್ಟ್ ವಾರಕ್ಕೆರಡು ದಿನ ಕ್ಲೋಸ್
