-ಅಕ್ಟೋಬರ್‌ನ ಮೊದಲ 15 ದಿನ ಸಂಪೂರ್ಣ ಬಂದ್
ಶ್ರೀನಗರ: ಇಲ್ಲಿನ ವಿಮಾನ ನಿಲ್ದಾಣದಲ್ಲಿ (Srinagar Airport) ರನ್‌ವೇ ನಿರ್ವಹಣಾ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಜುಲೈಯಿಂದ ಸೆಪ್ಟೆಂಬರ್‌ವರೆಗೆ ವಾರಕ್ಕೆರಡು ದಿನ ಬಂದ್ ಇರಲಿದೆ.
ವಿಮಾನ ನಿಲ್ದಾಣದ ಅಧಿಕಾರಿಗಳ ಮಾಹಿತಿ ಪ್ರಕಾರ, ರನ್‌ವೇಯ ಅಗತ್ಯ ನಿರ್ವಹಣಾ ಕಾಮಗಾರಿ ಹಿನ್ನೆಲೆ ಮುಂದಿನ ಮೂರು ತಿಂಗಳುಗಳ ಕಾಲ ಅಂದರೆ ಜುಲೈ 1ರಿಂದ ಸೆಪ್ಟೆಂಬರ್ 30ರವರೆಗೆ (July-01 to September-30) ಶ್ರೀನಗರ ವಿಮಾನ ನಿಲ್ದಾಣವು ವಾರಕ್ಕೆರಡು ದಿನ ಬಂದ್ ಆಗಿರಲಿದೆ. ಸೋಮವಾರ ಹಾಗೂ ಮಂಗಳವಾರ ಹೊರತಾಗಿ ಉಳಿದೆಲ್ಲ ದಿನವೂ ವಿಮಾನ ನಿಲ್ದಾಣ ತೆರೆದಿರುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆನೇಕಲ್| ಮಾಜಿ ಎಂಎಲ್‌ಸಿ ಕಿಡ್ನ್ಯಾಪ್ ಮಾಡಿ 3 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳು
ಇದಾದ ಬಳಿಕ ಅಕ್ಟೋಬರ್‌ನ ಮೊದಲ 15 ದಿನಗಳ ಕಾಲ ವಿಮಾನ ನಿಲ್ದಾಣ ಸಂಪೂರ್ಣವಾಗಿ ಬಂದ್ ಆಗಲಿದೆ. ಈ ಸಮಯದಲ್ಲಿ ವಿಮಾನ ನಿಲ್ದಾಣದ ರನ್‌ವೇಯ ಮಧ್ಯಭಾಗದಲ್ಲಿ ಕಾಮಗಾರಿ ನಡೆಯಲಿದೆ ಎಂದಿದ್ದಾರೆ. ಈ ನಿರ್ಧಾರದಿಂದಾಗಿ ವಿಮಾನಗಳ ಕಾರ್ಯಚರಣೆಗೆ ಅಡಚಣೆ ಉಂಟಾಗಲಿದೆ.
ಈ ಬಗ್ಗೆ ವಿಮಾನ ನಿಲ್ದಾಣದ ನಿರ್ದೇಶಕ ಜಾವೇದ್ ಅಂಜುಮ್ (Javed Anjum) ಮಾತನಾಡಿ, ಜುಲೈನಿಂದ ಸೆಪ್ಟೆಂಬರ್‌ವರೆಗೆ ಪ್ರತಿ ಸೋಮವಾರ ಹಾಗೂ ಮಂಗಳವಾರ ಶ್ರೀನಗರ ವಿಮಾನ ನಿಲ್ದಾಣ ಬಂದ್ ಇರಲಿದೆ. ಅಕ್ಟೋಬರ್ 1ರಿಂದ ವಿಮಾನ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು. 15 ವರ್ಷಗಳ ಸುದೀರ್ಘ ಅವಧಿಯ ನಂತರ ರನ್‌ವೇ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪ್ರವಾಸಿಗರ ದಟ್ಟಣೆ ಹೆಚ್ಚಿರುವ ಅವಧಿಯಲ್ಲಿ ಶ್ರೀನಗರ ವಿಮಾನ ನಿಲ್ದಾಣದಿಂದ ಸುಮಾರು 100 ವಿಮಾನಗಳು ಕಾರ್ಯನಿರ್ವಹಿಸುತ್ತವೆ. ಆದರೆ ವಿಮಾನ ಕಾರ್ಯಾಚರಣೆಯ ಸಮಯದ ನಿರ್ಬಂಧದಿAದಾಗಿ, ವಿಮಾನ ನಿಲ್ದಾಣವು ಪ್ರಸ್ತುತ ಪ್ರತಿದಿನ 40ಕ್ಕಿಂತ ಕಡಿಮೆ ವಿಮಾನಗಳನ್ನು ನಿರ್ವಹಿಸುತ್ತಿದೆ.
ಈ ಹಿಂದೆ ಆಗಸ್ಟ್ 1ರಿಂದ ಅಕ್ಟೋಬರ್ 15ರ ನಡುವೆ ಶನಿವಾರ ಮತ್ತು ಭಾನುವಾರಗಳಂದು ವಿಮಾನ ನಿಲ್ದಾಣವನ್ನು ಮುಚ್ಚಲು ಯೋಜಿಸಲಾಗಿತ್ತು. ಆದರೆ ನಂತರ ಅದನ್ನು ಬದಲಾಯಿಸಿ, ದುರಸ್ತಿ ಕಾರ್ಯದ ಸಮಯವನ್ನು ನಿಗದಿಗಿಂತ ಮುಂಚಿತವಾಗಿಯೇ ಆರಂಭಿಸಲು ನಿರ್ಧರಿಸಲಾಯಿತು. ಅಲ್ಲದೆ ವಾರಾಂತ್ಯದ ಬದಲಿಗೆ, ಸೋಮವಾರ ಮತ್ತು ಮಂಗಳವಾರದಂದು ವಿಮಾನ ಕಾರ್ಯಾಚರಣೆಯನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ.ಇದನ್ನೂ ಓದಿ:ಅ ನೈತಿಕ ಸಂಬಂಧ ಪ್ರಶ್ನಿಸಿದ ಅಪ್ರಾಪ್ತ ಮಗನ ಕೊಲೆ – ನಾಪತ್ತೆ ದೂರು ನೀಡಿ ನಾಟಕವಾಡಿದ ತಾಯಿ
