ಬೆಂಗಳೂರು: ಜ್ಯೂಸ್ ಕುಡಿಯಲು ಶಾಂಪಿಗ್ ಕಾಂಪ್ಲೆಕ್ಸ್‌ಗೆ ಬಂದಿದ್ದ ಯುವತಿ ವಾಶ್‍ರೂಂನಿಂದ ಕಾಲು ಜಾರಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದು, ಯುವತಿಯನ್ನು ಕಾಪಾಡಲು ಹೋದ ಯುವಕನಿಗೆ ಗಂಭೀರ ಗಾಯವಾದ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.
ಲಿಯಾ(18) ಮೃತ ಯುವತಿ ಹಾಗೂ ಪೀಟರ್ (18) ಗಾಯಗೊಂಡ ಯುವಕ. ಬೆಂಗಳೂರಿನ ಫ್ರೇಜರ್ ಟೌನ್ ನಿವಾಸಿ ಲಿಯಾ ಹಾಗೂ ಆಂಧ್ರ ಮೂಲದ ಪೀಟರ್ ಇಬ್ಬರೂ ಸೆಂಟ್ ಜಾನ್ಸ್ ಕಾಲೇಜಿನಲ್ಲಿ ಓದುತ್ತಾ ಇದ್ದರು. ಈ ಇಬ್ಬರೂ ಸ್ನೇಹಿತರು ಬ್ರಿಗೇಡ್ ರಸ್ತೆಯ ಶಾಂಪಿಂಗ್ ಕಾಂಪ್ಲೆಕ್ಸ್‌ಗೆ ಬಂದಿದ್ದರು.
Advertisement
Advertisement
ಫುಡ್ ಕೋರ್ಟ್‍ನಲ್ಲಿ ಊಟ ಮುಗಿಸಿ ವಾಷ್ ರೂಂಗೆ ಹೋಗಿದ್ದರು. ಈ ವೇಳೆ ಲಿಯಾ ಕಾಲುಜಾರಿ ಬಿದ್ದಿದ್ದಾಳೆ. ಅವಳನ್ನು ಕಾಪಾಡಲು ಹೋದ ಪೀಟರ್ ಕೂಡ ಆಯತಪ್ಪಿ ಬಿದ್ದಿದ್ದಾನೆ. ಘಟನೆ ವೇಳೆ ಯುವಕನ ತಲೆಗೆ ಗಂಭೀರ ಗಾಯವಾಗಿದ್ದು, ನಿಮ್ಹಾನ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಘಟನೆ ಕುರಿತು ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಬೆಣ್ಣೆ ಹಳ್ಳದಲ್ಲಿ ಪ್ರವಾಹ – ನಾಲ್ವರು ಕಾರ್ಮಿಕರನ್ನ ರಕ್ಷಿಸಿದ ಅಗ್ನಿಶಾಮಕ ದಳ
Advertisement
Advertisement
ಈ ಬಗ್ಗೆ ಮಾತನಾಡಿದ ಡಿಸಿಪಿ ಶರಣಪ್ಪ ಅವರು, ಸ್ನೇಹಿತರೊಂದಿಗೆ ಲೀಯಾ ಜ್ಯೂಸ್ ಕುಡಿಯೋದಕ್ಕೆ ಬಂದಿದ್ದರು. ವಾಷ್ ರೂಂಗೆ ಹೋಗಿ ಬರುವಾಗ ಸ್ಟೇರ್ ಕೇಸ್‍ನಿಂದ ಇಬ್ಬರು ಕಾಲು ಜಾರಿ ಕೆಳಗಡೆ ಬಿದ್ದಿದ್ದಾರೆ. ಆತ್ಮಹತ್ಯೆ ಯತ್ನದ ಬಗ್ಗೆ ಪ್ರಾಥಮಿಕವಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಡಿಸಿ ಕಚೇರಿ ಮೇಲೆ ಎಸಿಬಿ ದಾಳಿ – ಇಬ್ಬರು ಭ್ರಷ್ಟ ಅಧಿಕಾರಿಗಳು ಬಲೆಗೆ