ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ ದೇವೇಗೌಡ (GT Devegowda) ಮಗನನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ಮೈಸೂರಿನ (Mysuru) ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಶಾಸಕ ಜಿ.ಟಿ ದೇವೇಗೌಡ ಪತ್ನಿ ಲಲಿತಾ ಜಿ.ಟಿ ದೇವೇಗೌಡ ಅವರಿಗೆ ʻಸಹಕಾರ ಸೇವಾ ರತ್ನ’ ಪ್ರಶಸ್ತಿ ನೀಡಿದ್ದ ಬೆನ್ನಲ್ಲೇ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಇದನ್ನೂ ಓದಿ: ರಾಜ್ಯದ ಭದ್ರತಾ ಮೂಲಸೌಕರ್ಯ, ಪೊಲೀಸ್ ಸಾಮರ್ಥ್ಯ ಸುಧಾರಣೆಗೆ ನೆರವಾಗಿ – ಅಮಿತ್ ಶಾಗೆ ಡಿಕೆಶಿ ಮನವಿ

ಈ ವೇಳೆ ಭಾಷಣಕ್ಕೆ ನಿಂತ ಕೂಡಲೇ ಶಾಸಕ ಜಿ.ಟಿ ದೇವೇಗೌಡರು ಗಳಗಳನೆ ಅತ್ತರು. ಕಾರ್ಯಕ್ರಮದಲ್ಲಿ ಪುತ್ರ ಶಾಸಕ ಹರೀಶ್ ಗೌಡ ಹೊರತುಪಡಿಸಿ ಕುಟುಂಬದ ಪ್ರತಿಯೊಬ್ಬ ಸದಸ್ಯರು ಭಾಗಿಯಾಗಿದ್ದರು.
ಕಳೆದ 2 ವರ್ಷಗಳಿಂದ ಜಿಟಿಡಿ ಮಗ ಶಾಸಕ ಜಿ.ಡಿ ಹರೀಶ್ ಗೌಡ ತಂದೆಯಿಂದ ದೂರವಾಗಿ ಪ್ರತ್ಯೇಕವಾಗಿ ಪತ್ನಿಯೊಂದಿಗೆ ಜೀವನ ನಡೆಸುತ್ತಿದ್ದಾರೆ. ತಾಯಿಗೆ ಪ್ರಶಸ್ತಿ ನೀಡುವ ಕಾರ್ಯಕ್ರಮದಲ್ಲೂ ಪುತ್ರ ಇಲ್ಲ ಎಂಬ ನೋವಿನಲ್ಲಿ ಜಿಟಿಡಿ ಕಣ್ಣೀರಿಟ್ಟರು. ಇದನ್ನೂ ಓದಿ: ವಿಶ್ವಾದ್ಯಂತ ಇನ್‌ಸ್ಟಾಗ್ರಾಮ್, ವಾಟ್ಸಪ್, ಫೇಸ್‌ಬುಕ್ ಡೌನ್

