ಸತತವಾಗಿ 8 ವರ್ಷಗಳ ಕಾಲ ತಪ್ಪು ಮಾಡಿದಾಗ ತಿದ್ದಿ, ಬೆನ್ನೆಲುಬಾಗಿ ನಿಂತು… ಇಂದು ನಿರೂಪಣೆಯೆಂದರೆ ಅನುಪಮಾ ಎಂದು ಇಷ್ಟಪಡುವ ಜನರಿರುವಾಗ ಇದೀಗ ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ ಅನುಪಮಾ ಗೌಡ.


ಸ್ವತಃ ತಾವೇ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳುವ ಮೂಲಕ ನಿರೂಪಣೆಗೆ ಅಂತಿಮ ವಿದಾಯ ಘೋಷಿಸಿದ್ದಾರೆ. 2016ರಲ್ಲಿಯೇ ನಿರೂಪಕಿಯಾಗಬೇಕಿದ್ದ ಅನುಪಮಾ 2 ವರ್ಷಗಳ ಸಮಯ ತೆಗೆದುಕೊಂಡು ಮೊದಲ ಬಾರಿಗೆ ವೇದಿಕೆ ಹತ್ತಿದ್ದು 2018 ಜೂ.22ರಂದು. ಅಲ್ಲಿಂದ ಪ್ರಾರಂಭವಾದ ಈ ಪ್ರಯಾಣ ಕೊನೆಗೊಂಡಿದ್ದು 2026ರ ಮೇ 05. ಅದು ಅನಿರೀಕ್ಷಿತವಾಗಿ ಒಲಿದು ಬಂದ ನಿವೃತ್ತಿ.
ಏನು ಗೊತ್ತಿಲ್ಲದ್ದಿದ್ದ ನನಗೆ ಕನ್ನಡ ಕಲಿಸಿ, ವೇದಿಕೆ ಮೇಲೆ ನಿಲ್ಲೋದನ್ನು ಕಲಿಸಿಕೊಟ್ಟು.. ನನ್ನನ್ನು ನಿರೂಪಕಿಯಾಗಿ ಮಾಡಿ ಇಲ್ಲಿಯವರೆಗೂ ಬರಲು ನನ್ನ ಹಿಂದೆ ನಿಂತವರು ಹಲವರು. ನನ್ನ ನಿರೂಪಣೆಯ ಜರ್ನಿಯಲ್ಲಿ ಅತ್ಯುತ್ತಮ ವ್ಯಕ್ತಿಗಳು ಪರಿಚಯವಾದ್ರು, ಅವರೆಲ್ಲರೊಂದಿಗಿನ ಸಂಬಂಧವನ್ನು ನಾನು ನನ್ನ ಜೀವನದುದ್ದಕ್ಕೂ ಇಟ್ಟುಕೊಳ್ತೀನಿ.
ನಾನು ನನ್ನೊಳಗಿನ ಕಲಾವಿದೆಗೆ ತೃಪ್ತಿಪಡಿಸಬೇಕು ಅನ್ನೋದೇ ಈ ನಿರ್ಧಾರಕ್ಕೆ ಕಾರಣ.. ನಿಮ್ಮಿಂದ ತುಂಬಾ ಕಲಿತಿದ್ದೀನಿ, ತುಂಬಾ ಪ್ರೀತಿ ಕೊಟ್ಟಿದೀರಿ. ಎಲ್ಲರಿಗೂ ಥ್ಯಾಂಕ್ಯೂ.. ಎಲ್ಲವೂ ಒಳ್ಳೆಯದಕ್ಕಾಗಿಯೇ ಆಗುತ್ತೆ. ಮುಂದೆ ಬೇರೆ ಬೇರೆ ದಾರಿಗಳಿವೆ. ಮುಂದೆ ಜೀವನ ಇನ್ನೂ ಚೆನ್ನಾಗಿದೆ. ಈ ವಿದಾಯಕ್ಕೆ ಇದು ಸರಿಯಾದ ಸಮಯ.. ನಿಮ್ಮ ಪ್ರೀತಿಗೆ ನಾನು ಚಿರಋಣಿ ಎಂದು ಭಾವುಕರಾಗಿ ಗುಡ್ ಬೈ ಹೇಳಿದ್ದಾರೆ ನಿರೂಪಕಿ ಅನುಪಮಾ

