ಕೆಜಿಎಫ್ ಚಿತ್ರದ ನಂತರ ರಾಕಿಂಗ್ ಸ್ಟಾರ್ ಯಶ್(Yash) ಅವರ ಗಡ್ಡದ ಸ್ಟೈಲ್ ದೇಶಾದ್ಯಂತ ದೊಡ್ಡ ಕ್ರೇಜ್ ಸೃಷ್ಟಿಸಿತ್ತು. ಹಲವು ಸ್ಟಾರ್‌ಗಳು ಹಾಗೂ ಯುವಜನತೆ ಅವರ ಲುಕ್ ಅನ್ನು ಕಾಪಿ ಮಾಡಿದ್ದರು. ‘ಕೆಜಿಎಫ್’ ಎರಡು ಭಾಗಗಳು ಮಾತ್ರವಲ್ಲದೆ, ಮುಂಬರುವ ಟಾಕ್ಸಿಕ್(Toxic) ಚಿತ್ರದಲ್ಲೂ ಯಶ್ ಉದ್ದ ಗಡ್ಡದ ಲುಕ್‌ನಲ್ಲೇ ಕಾಣಿಸಿಕೊಂಡಿದ್ದಾರೆ. ಅವರು ಸದಾ ಈ ರೀತಿಯ ಲುಕ್‌ನಲ್ಲೇ ಇರಲು ಕಾರಣವೇನು ಎಂಬ ಕುತೂಹಲಕ್ಕೆ ಖ್ಯಾತ ಟಿವಿ ಶೋ ‘ಆಪ್ ಕಿ ಅದಾಲತ್’ನಲ್ಲಿ ನಟ ಯಶ್ ತಮಾಷೆಯಾಗಿ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಕಾರ್ಯಕ್ರಮದಲ್ಲಿ ವೀಕ್ಷಕರೊಬ್ಬರು,”ನೀವ್ಯಾಕೆ ಸದಾ ಗಡ್ಡ(Beard) ಬಿಟ್ಟಿರುವ ಲುಕ್‌ನಲ್ಲೇ ಇರುತ್ತೀರಿ?” ಎಂದು ಕೇಳಿದ ಪ್ರಶ್ನೆಗೆ ಯಶ್ ತಮ್ಮ ರಂಗಭೂಮಿ ದಿನಗಳ ಅನುಭವವನ್ನು ನೆನಪಿಸಿಕೊಂಡು ಉತ್ತರಿಸಿದರು
ನಾನು ರಂಗಭೂಮಿಗೆ ಸೇರಿದಾಗ ನನಗೆ ಕೇವಲ 17 ವರ್ಷ ವಯಸ್ಸು. ಆ ಸಮಯದಲ್ಲಿ ನಾನು ಯಾವುದೇ ವಿಷಯ ಹೇಳಲು ಹೋದರೂ ಅಲ್ಲಿದ್ದ ಹಿರಿಯರು ‘ನೀನಿನ್ನೂ ಚಿಕ್ಕವನು, ಸುಮ್ಮನಿರು’ ಎಂದು ನನ್ನ ಮಾತನ್ನು ತಳ್ಳಿಹಾಕುತ್ತಿದ್ದರು. ಇದನ್ನೂ ಓದಿ: ನಾನು ರಾತ್ರೋರಾತ್ರಿ ಸ್ಟಾರ್ ಆದವ್ನಲ್ಲ – ಕಷ್ಟದ ದಿನಗಳ ನೆನೆದ ಯಶ್

ತಮ್ಮ ಹದಿಹರೆಯದಲ್ಲಿ ಹಿರಿಯರಂತೆ ಕಾಣಿಸಿಕೊಳ್ಳಲು ಶುರುಮಾಡಿದ ಆ ಗಡ್ಡದ ಶೈಲಿ, ಇಂದು ಭಾರತೀಯ ಚಿತ್ರರಂಗದಲ್ಲೇ ಟ್ರೆಂಡ್‌ಸೆಟ್ಟರ್ ಆಗಿದೆ.
