Connect with us

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟಿ ಯಾಮಿ ಗೌತಮ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟಿ ಯಾಮಿ ಗೌತಮ್

ಮುಂಬೈ: ಬಾಲಿವುಡ್ ನಟಿ ಯಾಮಿ ಗೌತಮ್ ತಮ್ಮ ಬಹುಕಾಲದ ಗೆಳೆಯ ಆದಿತ್ಯ ಧಾರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ವಿವಾಹ ಸಮಾರಂಭದ ಫೋಟೋವೊಂದನ್ನು ಯಾಮಿ ಗೌತಮ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಯುಆರ್‍ಐ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದ, ಆದಿತ್ಯ ಧಾರ್, ಯಾಮಿ ಗೌತಮ್ ಅವರ ಜೊತೆ ಸರಳ ಹಾಗೂ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದಿದ್ದಾರೆ.

ವಿವಾಹದ ಫೋಟೋವನ್ನು ಯಾಮಿ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ನಿನ್ನ ನಾನು ಪ್ರೀತಿಸುವುದನ್ನು ಕಲಿತೆ. ನಮ್ಮ ಕುಟುಂಬದ ಆಶೀರ್ವಾದದೊಂದಿಗೆ ನಾವಿಬ್ಬರೂ ಇಂದು ಆತ್ಮೀಯರ ಸಮ್ಮುಖದಲ್ಲಿ ವಿವಾಹವಾದೆವು. ಕೆಲವೇ ಆಪ್ತರಷ್ಟರ ಮುಂದೆ ನಮ್ಮ ವಿವಾಹ ನಡೆಯಿತು. ನಾವು ಪ್ರೀತಿ ಮತ್ತು ಸ್ನೇಹದ ಪಯಾಣವನ್ನು ಆರಂಭಿಸುತ್ತಿರುವ ಈ ಸಂದರ್ಭದಲ್ಲಿ ನಿಮ್ಮ ಆಶೀರ್ವಾದ ಹಾಗೂ ಶುಭಾಶಯವನ್ನು ಬಯಸುತ್ತೇವೆ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಇದನ್ನು ಓದಿ: ಕಲ್ಯಾಣ ಕರ್ನಾಟಕದ ಹಿರಿಯ ಸಾಹಿತಿ ವಸಂತ ಕುಷ್ಟಗಿ ಇನ್ನಿಲ್ಲ

 

View this post on Instagram

 

A post shared by Yami Gautam (@yamigautam)

ಸದ್ಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಯಾಮಿ ಹಾಗೂ ಆದಿತ್ಯ ಧಾರ್‍ ಗೆ  ಸೆಲೆಬ್ರಿಟಿ ಹಾಗೂ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಸ್ಯಾಂಡಲ್‍ವುಡ್‍ನ ಉಲ್ಲಾಸ ಉತ್ಸಾಹ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್‍ಗೆ ಜೋಡಿಯಾಗುವ ಮೂಲಕ ಸಿನಿ ಜರ್ನಿ ಆರಂಭಿಸಿದ ಯಾಮಿ ನಂತರ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಮಿಂಚಲು ಆರಂಭಿಸಿದರು.

ಬಾಲಿವುಡ್‍ನಲ್ಲಿ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆ ಅಭಿನಯಿಸುವ ಮೂಲಕ ಯಶಸ್ಸು ಗಳಿಸಿದ ಯಾಮಿ ಭೂತ್ ಪೊಲೀಸ್, ದಾವಿ ಸಿನಿಮಾ ಬಿಡುಗಡೆಗೆ ತಯಾರಾಗಿದ್ದು, ಎಥರ್ಸ್ ಡೇ ಸಿನಿಮಾದಲ್ಲಿ ಬಣ್ಣಹಚ್ಚಲಿದ್ದಾರೆ. ಇದನ್ನು ಓದಿ: ಗರ್ಲ್‍ಫ್ರೆಂಡ್ ಭೇಟಿಯಾಗಲು ವಧುವಿನ ವೇಷದಲ್ಲಿ ಮದುವೆ ಮನೆಗೆ ಬಂದ ಬಾಯ್‍ಫ್ರೆಂಡ್

Advertisement
Advertisement