ಅಯೋಧ್ಯೆ: ಸುಮಾರು 500 ವರ್ಷಗಳ ನಂತರ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯವಾದ ರಾಮಮಂದಿರಕ್ಕೆ (Ayodhya Ram Mandir) ಇದುವರೆಗೆ 1.5 ಕೋಟಿ ಭಕ್ತರು ಭೇಟಿ ಕೊಟ್ಟಿದ್ದಾರೆ. ಇದರಲ್ಲಿ ವಿದೇಶಿ ಭಕ್ತರೇ ಹೆಚ್ಚು.
ಹೌದು. ರಾಮಮಂದಿರ ಉದ್ಘಾಟನೆಯಾದಾಗಿನಿಂದ ರಾಮಲಲ್ಲಾ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇಲ್ಲಿಯವರೆಗೆ ಸುಮಾರು 1.5 ಕೋಟಿ ಭಕ್ತರು ರಾಮಮಂದಿರವನ್ನು ದರ್ಶನಕ್ಕಾಗಿ ಭೇಟಿ ಕೊಟ್ಟಿದ್ದಾರೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಭಕ್ತರೂ ಸೇರಿದ್ದಾರೆ.
Advertisement
Advertisement
ಜನವರಿ 22 ರಂದು ಪ್ರಾಣಪ್ರ ತಿಷ್ಠಾ ಕಾರ್ಯಕ್ರಮದ ನಂತರ ಮರುದಿನ ಸಾಮಾನ್ಯ ಭಕ್ತರಿಗಾಗಿ ರಾಮಮಂದಿರವನ್ನು ತೆರೆಯಲಾಯಿತು. ಹೀಗಾಗಿ ರಾಮಲಲ್ಲಾ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸತೊಡಗಿದರು. ಪ್ರತಿದಿನ ಸರಾಸರಿ ಒಂದು ಲಕ್ಷ ಜನರು ರಾಮಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ. ರಾಮನವಮಿಯ ದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ರಾಮಮಂದಿರವನ್ನು ತಲುಪಬಹುದು ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಅಯೋಧ್ಯೆ ಬಾಲಕರಾಮನಿಗೆ ನಿತ್ಯ ಬೆಳಗ್ಗೆ ಆರತಿ – ದೂರದರ್ಶನದಲ್ಲಿ ನೇರಪ್ರಸಾರ
Advertisement
Advertisement
ಇಲ್ಲಿಯವರೆಗೆ ರಾಮ ಮಂದಿರಕ್ಕೆ ಭೇಟಿ ನೀಡಿದ 1.5 ಕೋಟಿ ಭಕ್ತರಲ್ಲಿ ಸುಮಾರು ಒಂದು ಲಕ್ಷ ಭಕ್ತರು ವಿದೇಶಿಯರೂ ಆಗಿದ್ದಾರೆ. ಶ್ರೀ ರಾಮನ ದರ್ಶನ ಪಡೆಯಲು ವಿದೇಶದಿಂದ ಜನ ಬರುತ್ತಿದ್ದಾರೆ. ಈ ವೇಳೆ ಲಕ್ಷ ಕೋಟಿಯ ಅರ್ಪಣೆಗಳೂ ನಡೆಯುತ್ತಿವೆ. ರಾಮ ನವಮಿಯ (Rama Navami) ದಿನದಂದು ಸುಮಾರು 40 ಲಕ್ಷ ಭಕ್ತರು ಅಯೋಧ್ಯೆಗೆ ತಲುಪಬಹುದು ಎಂದು ಅಂದಾಜಿಸಲಾಗಿದೆ.
ಇದಕ್ಕಾಗಿ ಆಡಳಿತವು ಶ್ರ ದ್ಧೆಯಿಂದ ಕೆಲಸಮಾಡುತ್ತಿದೆ. ಭಕ್ತರಿಗೆಯಾವುದೇ ತೊಂದರೆಯಾಗದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿ ಸಲಾಗುತ್ತಿದೆ. ಹೊರಗಿನಿಂದ ಬರುವ ಭಕ್ತರಿಗೆ ವಸತಿ ಮತ್ತು ಊಟಕ್ಕೆ ಯಾವುದೇ ತೊಂದರೆಯಾಗದಂತೆ ಹೋಟೆಲ್, ರೆಸ್ಟೋರೆಂಟ್ ಗಳ ನಿರ್ಮಾಣವೂ ತ್ವರಿತಗತಿಯಲ್ಲಿ ನಡೆಯುತ್ತಿದೆ.