ಲಂಡನ್: ಕಳೆದ ವರ್ಷ ಲಂಡನ್ನಲ್ಲಿರುವ (London) ಭಾರತದ ಹೈಕಮಿಷನ್ ಕಚೇರಿ (Indian High Commission) ಮೇಲೆ ನಡೆದಿದ್ದ ದಾಳಿ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಎನ್ಐಎ ಬಂಧಿಸಿದೆ.
ಯುನೈಟೆಡ್ ಕಿಂಗ್ಡಮ್ನ ಹೌನ್ಸ್ಲೋ ನಿವಾಸಿ, ಖಲಿಸ್ತಾನಿ ಪ್ರತ್ಯೇಕತಾವಾದಿ(Pro-Khalistani) ಇಂದರ್ಪಾಲ್ ಸಿಂಗ್ ಗಾಬಾ ಎಂಬಾತನನ್ನು 2023ರ ಪ್ರತಿಭಟನೆಯ ಸಮಯದಲ್ಲಿ ಕಾನೂನುಬಾಹಿರ ಚಟುವಟಿಕೆ ಆರೋಪದಲ್ಲಿ ಬಂಧಿಸಲಾಗಿದೆ. ಇದನ್ನೂ ಓದಿ: IPL 2024: ತವರಿನಲ್ಲೇ ಸನ್ ರೈಸರ್ಸ್ಗೆ ಚೊಂಬು – ಅಬ್ಬರಿಸಿ ಬೊಬ್ಬರಿದ ಆರ್ಸಿಬಿಗೆ 35 ರನ್ಗಳ ಭರ್ಜರಿ ಜಯ
- Advertisement 2
- Advertisement 3
ಕಳೆದ ವರ್ಷದ ಮಾ.18 ರಂದು ಖಲಿಸ್ತಾನಿ ಪರ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ವಿರುದ್ಧ ಪಂಜಾಬ್ ಪೊಲೀಸರು ತೆಗೆದುಕೊಂಡ ಕ್ರಮಕ್ಕೆ ಪ್ರತೀಕಾರವಾಗಿ ಹೈಕಮಿಷನ್ ಮೇಲಿನ ದಾಳಿ ನಡೆದಿತ್ತು.
- Advertisement 4
ಅಮೃತಪಾಲ್ ಸಿಂಗ್ ಮೇಲಿನ ದೌರ್ಜನ್ಯದ ವಿರುದ್ಧ ಖಲಿಸ್ತಾನ್ ಸಹಾನುಭೂತಿಗಳು ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ನಲ್ಲಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾಕಾರರು ಕಟ್ಟಡದ ಮೊದಲ ಮಹಡಿಯ ಬಾಲ್ಕನಿಯಿಂದ ಭಾರತೀಯ ಧ್ವಜವನ್ನು ಕೆಳಗಿಳಿಸಿ, ಖಲಿಸ್ತಾನಿ ಧ್ವಜ ಹಾರಿಸಿದ್ದರು. ಇದನ್ನೂ ಓದಿ: ಹೆಲ್ತ್ ಬದಲು ನ್ಯೂಟ್ರಿಷನಲ್ ಡ್ರಿಂಕ್ ಆಗಿ ಬದಲಾದ ಹಾರ್ಲಿಕ್ಸ್
ಯುಕೆಯಲ್ಲಿರುವ ಭಾರತೀಯರು ತ್ರಿವರ್ಣ ಧ್ವಜವನ್ನು ಅಪವಿತ್ರಗೊಳಿಸಿದ್ದನ್ನು ಖಂಡಿಸಿ ಹೈಕಮಿಷನ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಘಟನೆಗೆ ಕಾರಣರಾದವರ ವಿರುದ್ಧ ಲಂಡನ್ ಮೇಯರ್ ಮತ್ತು ಬ್ರಿಟಿಷ್ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.