ಅಯೋಧ್ಯೆ: ನಾಳೆ ರಾಮನವಮಿ (Rama Navami) ಹಬ್ಬದ ಹಿನ್ನೆಲೆಯಲ್ಲಿ ಅಯೋಧ್ಯೆ ರಾಮಮಂದಿರದಲ್ಲಿ ವಿಶೇಷ ಆಚರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಮಲಲ್ಲಾ ವಿಗ್ರಹ ಶಿಲ್ಪಿ ಅರುಣ್ ಯೋಗಿರಾಜ್ (Sculptor Arun Yogiraj) ಕುಟುಂಬ ಈಗಾಗಲೇ ಅಯೋಧ್ಯೆ ತಲುಪಿದೆ.
Advertisement
ಹೌದು. ರಾಮಂದಿರದಲ್ಲಿ ರಾಮಲಲ್ಲಾ (Rama Lalla) ಪ್ರಾಣಪ್ರತಿಷ್ಠಾಪನೆಯಾದ ಬಳಿಕ ಮೊದಲ ರಾವನವಮಿ ಹಬ್ಬ ಇದಾಗಿದ್ದು, ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ (Ayodhya Ram Mandir) ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮದಲ್ಲಿ ಭಾಗಿಯಾಗಲು ಅರುಣ್ ಕುಟುಂಬ ಆಗಮಿಸಿದೆ.
Advertisement
#WATCH | Ram Lalla idol sculptor Arun Yogiraj along with his family arrived in Ayodhya, Uttar Pradesh. pic.twitter.com/dJVojrjCHE
— ANI (@ANI) April 16, 2024
Advertisement
ಈ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅರುಣ್ ಅವರು, ರಾಮಲಲ್ಲಾನ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ನಂತರ ಮೊದಲ ಬಾರಿಗೆ ಕುಟುಂಬ ಸಮೇತ ಬಂದಿದ್ದೇನೆ. ನನ್ನ ಕೆಲಸವನ್ನು ನೋಡಿ ಕುಟುಂಬ ಸಂತಸಗೊಂಡಿದೆ. ರಾಮನವಮಿ ಆಚರಣೆಗಾಗಿ ನಾವು ಕಾತರದಿಂದ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಬೆಂಗಳೂರಿನ ಕಂಪನಿಯಿಂದ ‘ಸೂರ್ಯ ತಿಲಕ ಯಂತ್ರ’ ಕೊಡುಗೆ – ಏನಿದರ ವೈಶಿಷ್ಟ್ಯ?
Advertisement
ಈ ಹಿಂದೆ ಬೆಂಗಳೂರಿನಲ್ಲಿ ಮಾತನಾಡಿದ್ದ ಶಿಲ್ಪಿ, ಜನವರಿ 22 ರ ಬಳಿಕ ಅಯೋಧ್ಯೆಗೆ ಭೇಟಿ ನೀಡಿಲ್ಲ. ಇದೀಗ ರಾಮಲಲ್ಲಾ ವಿಗ್ರಹವನ್ನು ವೀಕ್ಷಿಸಲು ತಮ್ಮ ಕುಟುಂಬವನ್ನು ಅಲ್ಲಿಗೆ ಕರೆದೊಯ್ಯಲು ಉತ್ಸುಕನಾಗಿದ್ದೇನೆ. ಹೊಸ ಬಟ್ಟೆ ಖರೀದಿಸುವುದು ಸೇರಿದಂತೆ ತಮ್ಮ ಸಿದ್ಧತೆಗಳ ಜೊತೆಗೆ ತಮ್ಮ ಕುಟುಂಬ ಪ್ರವಾಸದ ಉತ್ಸಾಹವನ್ನು ಹಂಚಿಕೊಂಡಿದ್ದರು. ವಿಶೇಷವಾಗಿ ವಿಗ್ರಹದ ನೋಟದಲ್ಲಿನ ಬದಲಾವಣೆಗಳ ಬಗ್ಗೆ ಸ್ನೇಹಿತರಿಂದ ಕೇಳಿದ ನಂತರ ರಾಮಲಲ್ಲಾನನ್ನು (Rama Lalla) ಮತ್ತೆ ನೋಡಲು ತುಂಬಾ ಉತ್ಸುಕನಾಗಿದ್ದೇನೆ ಎಂದಿದ್ದರು.
#WATCH | Ayodhya: Ram Lalla idol sculptor Arun Yogiraj says, "We are here for the first time after the 'pran pratishtha' ceremony. My family was very happy after seeing my work… We are anxiously waiting for the Ram Navami celebration…" https://t.co/CqdUoHkJ1D pic.twitter.com/a87Nzf72qz
— ANI (@ANI) April 16, 2024
ನನ್ನ ಕುಟುಂಬದವರು ರಾಮಲಲ್ಲಾನನ್ನು ನೋಡಬೇಕೆಂದು ಪಟ್ಟು ಹಿಡಿದಿದ್ದಾರೆ. ದಿನನಿತ್ಯ ಹೇಳುತ್ತಾ ಇರುತ್ತಾರೆ. ಆದರೆ ನಾನು ಮುಂದೂಡುತ್ತಲೇ ಇದ್ದೆ. ಹಾಗಾಗಿ ಈ ಬಾರಿ ನಾನು ಅವರನ್ನು ಕರೆದುಕೊಂಡು ಹೋಗುತ್ತೇನೆ. ಅವರನ್ನು ಬಿಟ್ಟು ನಾನು ಅಯೋಧ್ಯೆಗೆ (Ayodhya) ಹೋದರೆ ಅವರು ನನ್ನನ್ನು ಶಿಕ್ಷಿಸುತ್ತಾರೆ ಎಂದು ನಗುತ್ತಲೇ ಅರುಣ್ ಅವರು ಹೇಳಿದ್ದರು. ಇದನ್ನೂ ಓದಿ: Ram Navami: ಅಯೋಧ್ಯೆ ರಾಮಮಂದಿರಕ್ಕೆ 1,11,111 ಕೆಜಿ ಲಡ್ಡು