ವಾಷಿಂಗ್ಟನ್: ಬ್ಲೂ ವೇಲ್ ಚಾಲೆಂಜ್ (Blue Whale) ಎಂಬ ಆನ್‌ಲೈನ್ ಆಟಕ್ಕೆ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಬಲಿಯಾಗಿದ್ದಾನೆ.
ಮ್ಯಾಸಚೂಸೆಟ್ಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಓದುತ್ತಿದ್ದ. ಮಾರ್ಚ್ 8 ರಂದು ಶವವಾಗಿ ಪತ್ತೆಯಾಗಿದ್ದಾನೆ. ಬ್ರಿಸ್ಟಲ್ ಕೌಂಟಿ ಡಿಸ್ಟ್ರಿಕ್ಟ್ ಅಟಾರ್ನಿಯ ವಕ್ತಾರ ಗ್ರೆಗ್ ಮಿಲಿಯೊಟ್, ಇದು ಆತ್ಮಹತ್ಯೆ ಎಂದು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ದುಬೈ ಬರೋ ಪ್ಲ್ಯಾನ್ ಇದ್ದರೆ ಮುಂದಕ್ಕೆ ಹಾಕಿ- ಭಾರತದ ರಾಯಭಾರಿ ಸೂಚನೆ
Advertisement
Advertisement
ವಿದ್ಯಾರ್ಥಿ ಸಾವು ಕೊಲೆ ಎಂದು ವರದಿಯಾಗಿದೆ. ವರದಿಯಲ್ಲಿ ಆತ ಬೋಸ್ಟನ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದ ಎಂದು ತಪ್ಪಾಗಿ ಗುರುತಿಸಲಾಗಿದೆ. ವಿದ್ಯಾರ್ಥಿ ದರೋಡೆ ಮಾಡಿದ್ದ ಎಂದು ಹೇಳಲಾಗುತ್ತಿದೆ. ಕಾಡಿನಲ್ಲಿ ಕಾರಿನಲ್ಲಿ ಆತನ ಶವ ಪತ್ತೆಯಾಗಿದೆ.
Advertisement
ವಿದ್ಯಾರ್ಥಿ ಆನ್‌ಲೈನ್ ಆಟ ಬ್ಲೂವೇಲ್‌ಗೆ ದಾಸನಾಗಿದ್ದ ಎನ್ನಲಾಗಿದೆ. ಆಟದ ಭಾಗವಾಗಿ ವಿದ್ಯಾರ್ಥಿ 2 ನಿಮಿಷಗಳ ಕಾಲ ಉಸಿರನ್ನು ಬಿಗಿಹಿಡಿದುಕೊಂಡಿದ್ದ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಗೇಮ್‌ನ್ನು ನಿಷೇಧಿಸಲು ಭಾರತ ಸರ್ಕಾರ ಮುಂದಾಗಿತ್ತು. ಇದನ್ನೂ ಓದಿ: ಫಿಲಿಪೈನ್ಸ್‌ಗೆ ಭಾರತದ ಬ್ರಹ್ಮೋಸ್ ರಫ್ತು – ಹಲವು ರಾಷ್ಟ್ರಗಳಿಂದ ಬೇಡಿಕೆ
Advertisement
ಬ್ಲೂ ವೇಲ್ ಗೇಮ್ (ಆತ್ಮಹತ್ಯೆ ಆಟ) ಆತ್ಮಹತ್ಯೆಗೆ ಪ್ರಚೋದನೆಯಾಗಿದೆ ಎಂದು ಐಟಿ ಸಚಿವಾಲಯವು 2017 ರಲ್ಲಿ ನೀಡಿದ ಸಲಹೆಯಲ್ಲಿ ಹೇಳಿದೆ.