ಲಕ್ನೋ: ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಮಹಿಳೆಯೊಬ್ಬಳು ತನ್ನ ಪತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಆಗ್ರಾ ವಿಭಾಗದ ಮಥುರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ರೇಖಾ ತನ್ನ ಪತಿ ಚಮನ್ ಪ್ರಕಾಶ್‍ನನ್ನು ಹತ್ಯೆಗೈದಿದ್ದಾಳೆ.
Advertisement
Advertisement
ರೇಖಾ ವಿವಾಹೇತರ ಸಂಬಂಧವನ್ನು ಹೊಂದಿದ್ದಳು. ಈ ಬಗ್ಗೆ ಆಕೆಯ ಪತಿ ಚಮನ್ ಪ್ರಕಾಶ್ ಅನುಮಾನಗೊಂಡು ಪ್ರಶ್ನಿಸಿದ್ದಾನೆ. ಇದರಿಂದ ಕೋಪಗೊಂಡ ರೇಖಾ, ಚಮನ್ ಪ್ರಕಾಶ್ ಗಾಢ ನಿದ್ದೆಯಲ್ಲಿದ್ದಾಗ ಆತನ ಮೇಲೆ ಪೆಟ್ರೋಲ್ ಸುರಿದ್ದು ಬೆಂಕಿಯನ್ನು ಹಚ್ಚಿದ್ದಾಳೆ. ಇದನ್ನೂ ಓದಿ: ಮಸೀದಿ, ಮದರಸಾದಲ್ಲಿ ಸಂವಿಧಾನ ಓದುವ ಅಭಿಯಾನ ಆರಂಭ!
Advertisement
Advertisement
ಘಟನೆ ವೇಳೆ ಶೇ. 80ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಚಮನ್ ಪ್ರಕಾಶ್‍ನನ್ನು ನೆರೆಹೊರೆಯವರು ದೆಹಲಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದರು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ. ಘಟನೆ ಸಂಬಂಧಿಸಿ ಚಮನ್ ಪ್ರಕಾಶ್‍ನ ಕುಟುಂಬಸ್ಥರು ಪತ್ನಿ ರೇಖಾ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ದೇವಸ್ಥಾನದ ಹಣ ಕದಿಯುವುದಕ್ಕೂ ಮುನ್ನ ದೇವಿ ವಿಗ್ರಹಕ್ಕೆ ನಮಸ್ಕರಿಸಿದ ಅರೆನಗ್ನ ಕಳ್ಳ