– ಅವಸರದಲ್ಲಿ ದೆಹಲಿಗೆ ಹೋಗಿದ್ದರ ಹಿಂದಿತ್ತು ಮಹಾ ಪ್ಲ್ಯಾನ್..?
ಮೈಸೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಕೆಲವೇ ಗಂಟೆಗಳಲ್ಲಿ ಸಿದ್ದರಾಮಯ್ಯ (Siddaramaiah) ದೆಹಲಿಗೆ ಹೋಗಿದ್ಯಾಕೆ? ಎಂಬ ಪ್ರಶ್ನೆಗೆ ಎರಡು ದಿನ ತಡವಾಗಿ ಉತ್ತರ ಸಿಕ್ಕಿದೆ. ಅವಸರದಲ್ಲಿ ದೆಹಲಿಗೆ ಹೋಗಿದ್ದರ ಹಿಂದೆ ಇತ್ತು ಮಹಾ ಪ್ಲ್ಯಾನ್ ಎಂಬುದು ಗೊತ್ತಾಗಿದೆ.

ರಾಜೀನಾಮೆ ಕೊಟ್ಟ ಅನುಕಂಪದ ಬಿಸಿಯಲ್ಲಿ ಹೊಸ ಪ್ಲ್ಯಾನ್ ವರ್ಕೌಟ್ ಮಾಡಬಹುದು ಅಂತಾ ಪ್ಲ್ಯಾನ್‌ಶೀಟ್ ಹಿಡಿದುಕೊಂಡು ಸಿದ್ದರಾಮಯ್ಯ ದೆಹಲಿಗೆ ಹೋಗಿದ್ದರು. ಕಳೆದ ಗುರುವಾರ ಸಂಜೆ ಹೈಕಮಾಂಡ್ (Congress High Command) ಮುಂದೆ ಹೊಸ ದಾಳ ಉರುಳಿಸಿದ್ದಾರೆ. ಈ ದಾಳ ನೋಡಿ ಸ್ವತಹ ಹೈಕಮಾಂಡ್ ನಾಯಕರಿಗೆ ಹೊಸ ತಲೆನೋವು ಬರುತ್ತಾ ಎನ್ನುವ ಮಟ್ಟಕ್ಕೆ ಆತಂಕ ಶುರುವಾಗಿತ್ತು. ಇದನ್ನೂ ಓದಿ: ಡಿಕೆ ಶಿವಕುಮಾರ್‌ಗೆ ಅಧಿಕಾರ ಸಿಕ್ಕರೆ ನನಗೆ ಸಿಕ್ಕಹಾಗೇ – ಮಂಡ್ಯ ಜಿಲ್ಲೆಗೆ 2 ಸಚಿವ ಸ್ಥಾನದ ಬೇಡಿಕೆಯಿಟ್ಟ ಗಣಿಗ ರವಿಕುಮಾರ್

ರಾಜ್ಯ ಸರ್ಕಾರದ ಸಲಹಾ ಸಮಿತಿ ಅಧ್ಯಕ್ಷ ಹುದ್ದೆ ಸೃಷ್ಟಿಸಿ ಎಂದು ಹೈಕಮಾಂಡ್ ಮುಂದೆ ಸಿದ್ದರಾಮಯ್ಯ ಬೇಡಿಕೆ ಇಟ್ಟಿದ್ದರು. ಡಿಕೆ ಶಿವಕುಮಾರ್ ಸಂಪುಟದಲ್ಲಿ ಹಿರಿಯರು ಕೂಡ ಇರುತ್ತಾರೆ. ಡಿಕೆ ಮತ್ತು ಅವರ ನಡುವೆ Wavelength ಸರಿ ಹೋಗಲ್ಲ. ಸಮಸ್ಯೆ ಸೃಷ್ಟಿ ಆಗಬಹುದು. ಆಗ ಇದು ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು ರಾಜ್ಯ ಸರ್ಕಾರದ ಸಲಹಾ ಸಮಿತಿ ರಚನೆ ಮಾಡಿ. ನಾನೇ ಅಧ್ಯಕ್ಷ ಆಗ್ತಿನಿ. ಸರಕಾರ ಸರಿದೂಗಿಸ್ತಿನಿ ಎಂದು ಹೈಕಮಾಂಡ್ ಮುಂದೆ ಪ್ರಸ್ತಾಪ ಇಟ್ಟಿದ್ದರು. ಇದನ್ನೂ ಓದಿ: ಡಿಸಿಎಂ ಪ್ರಪೋಸಲ್ ಬಂದಿಲ್ಲ, ಜೂನ್ 3ರಂದು ಸಭೆ ಮಾಡಿ ಫೈನಲ್ ಆಗುತ್ತೆ: ಮಲ್ಲಿಕಾರ್ಜುನ ಖರ್ಗೆ
ಆ ಕ್ಷಣಕ್ಕೆ ಹೈಕಮಾಂಡ್ ನಾಯಕರು ನೋಡೋಣ ಬನ್ನಿ ಎಂದಿದ್ದರು. ಶುಕ್ರವಾರ ಈ ವಿಚಾರಕ್ಕೆ ತಕರಾರು ತೆಗೆದಿದ್ದ ಡಿಕೆ ಶಿವಕುಮಾರ್, ಸಲಹಾ ಸಮಿತಿ ಯಾವುದೇ ಕಾರಣಕ್ಕೂ ಬೇಡ. ಒಂದು ವೇಳೆ ಸಲಹಾ ಸಮಿತಿ ರಚನೆ ಆದರೆ ಅದು ಪರ್ಯಾಯ ಪವರ್ ಸೆಂಟರ್ ಆಗುತ್ತದೆ. ನಾನು ಇದನ್ನ ಒಪ್ಪಲ್ಲ ಎಂದಿದ್ದಾರೆ. ಡಿಕೆ ಮಾತಿಗೆ ಹೈಕಮಾಂಡ್ ಸಮ್ಮತಿ ಸೂಚಿಸಿ ಅಗತ್ಯ ಬಿದ್ದರೆ ಮುಂದೆ ನೋಡೋಣ ಬಿಡಿ ಎಂದು ಸಿದ್ದರಾಮಯ್ಯಗೆ ಹೇಳಿ ಕಳಿಸಿದೆ.
