ಕಲಬುರಗಿ: ಸದ್ಯ ಡಿಸಿಎಂ (DCM) ಪ್ರಪೋಸಲ್ ಬಂದಿಲ್ಲ, ಬಂದ ಮೇಲೆ ಎಷ್ಟು ಡಿಸಿಎಂ ಮಾಡಬೇಕು, ಎಷ್ಟು ಸಚಿವರನ್ನಾಗಿ ಮಾಡಬೇಕು ಎಂದು ನೋಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲು ಒಂದು ಹಂತದಲ್ಲಿ ಕೆಲವರನ್ನು ಸಚಿವರನ್ನಾಗಿ ಮಾಡಲಾಗುತ್ತದೆ. ಆಮೇಲೆ ಹದಿನೈದು ದಿನದ ನಂತರ ಮತ್ತೊಂದು ಸುತ್ತಿನಲ್ಲಿ ಸಚಿವ ಸ್ಥಾನ ನೀಡುತ್ತಾರೆ. ಮೊದಲ ಹಂತದಲ್ಲಿ 8ರಿಂದ 10 ಜನ ಆಗುತ್ತಾರಾ ಏನು ಅಂತಾ ನೋಡಬೇಕು. ಸಿಎಂ ಸಚಿವರ ಲಿಸ್ಟ್ ಕೊಡಲಿ, ಎಷ್ಟು ಜನ ಸೇರಿಸಿಕೊಳ್ಳಬೇಕು ಅಂತಾ ಗೊತ್ತಾಗುತ್ತದೆ. ಜೂನ್ 3ರಂದು ಸಭೆ ಮಾಡಿ ಎಲ್ಲಾ ಫೈನಲ್ ಆಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಅಮೆರಿಕದ MQ-1 ಡ್ರೋನ್ ಹೊಡೆದುರುಳಿಸಿದ್ದೇವೆ – ಬೆನ್ನುತಟ್ಟಿಕೊಂಡ ಇರಾನ್
ಡಿಕೆಶಿ ಸಿಎಂ ಆದ ಮೇಲೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಹಜವಾಗಿ ಬದಲಾವಣೆ ಆಗೇ ಆಗುತ್ತದೆ. ಜನ ಬೆಂಬಲ ಇರುವ ಸೂಕ್ತ ವ್ಯಕ್ತಿಯನ್ನ ಮಾಡುತ್ತೇವೆ. ಸಿಎಂ ಅವರಿಗೂ ಒಳ್ಳೆಯ ಕೋ-ಆರ್ಡಿನೇಷನ್ ಇರಬೇಕು. ಅಂತಹ ವ್ಯಕ್ತಿಯನ್ನ ಆಯ್ಕೆ ಮಾಡಬೇಕಾಗುತ್ತದೆ ಎಂದರು. ಇದನ್ನೂ ಓದಿ: ಡಿಕೆ ಶಿವಕುಮಾರ್‌ಗೆ ಅಧಿಕಾರ ಸಿಕ್ಕರೆ ನನಗೆ ಸಿಕ್ಕಹಾಗೇ – ಮಂಡ್ಯ ಜಿಲ್ಲೆಗೆ 2 ಸಚಿವ ಸ್ಥಾನದ ಬೇಡಿಕೆಯಿಟ್ಟ ಗಣಿಗ ರವಿಕುಮಾರ್
