ಟೆಹ್ರಾನ್: ಪ್ರತಿಕೂಲ ಕಾರ್ಯಾಚರಣೆಯಲ್ಲಿ ಇರಾನ್‌ನ ವಾಯುರಕ್ಷಣಾ ಘಟಕಗಳು ಅಮೆರಿಕದ MQ-1 ಡ್ರೋನ್ (US MQ-1 drone) ಅನ್ನು ಹೊಡೆದುರುಳಿಸಿವೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿಕೊಂಡಿದೆ.
ಭಾರತೀಯ ಕಾಲಮಾನ ಭಾನುವಾರ (ಇಂದು) ಮುಂಜಾನೆ ಇರಾನ್ ವಾಯುಪ್ರದೇಶಕ್ಕೆ (Iran Airspace) ನುಗ್ಗಿದ ಎಂಕ್ಯೂ-1 ಡ್ರೋನ್ ಅನ್ನು ವಾಯುರಕ್ಷಣಾ ಘಟಕಗಳು ಹೊಡೆದುರುಳಿಸಿವೆ. ಪ್ರತಿಕೂಲ ಕಾರ್ಯಾಚರಣೆ ನಡೆಸಲು ಪ್ರಯತ್ನಿಸುವಾಗ ಡ್ರೋನ್ ಅವಶೇಷ ಪತ್ತೆಯಾಗಿದೆ ಎಂದು ಇರಾನ್‌ನ ಮಾಧ್ಯಮವೊಂದು ವರದಿ ಮಾಡಿದೆ. ಇದನ್ನೂ ಓದಿ: ಅಮೆರಿಕ ವಾಯುನೆಲೆ ಮೇಲೆ ಇರಾನ್ ಮಿಸೈಲ್ ದಾಳಿ – ಅತ್ಯಾಧುನಿಕ MQ-9 ರೀಪರ್ ಡ್ರೋನ್‌ಗಳಿಗೆ ಹಾನಿ
ಅಮೆರಿಕದ ಈ ಡ್ರೋನ್, ಇರಾನ್ ವಾಯುಪ್ರದೇಶದ ಮೇಲೆ ದಾಳಿ ನಡೆಸಲು ಉಡಾಯಿಸಲಾಗಿತ್ತು. ಆದ್ರೆ ವಾಯುಸೀಮೆ ಪ್ರವೇಶಿಸುತ್ತಿದ್ದಂತೆ ರಕ್ಷಣಾ ವ್ಯವಸ್ಥೆಗಳು ಪತ್ತೆ ಮಾಡಿವೆ, ಬಳಿಕ ಸುಧಾರಿತ ಕ್ಷಿಪಣಿಗಳನ್ನ ಬಳಸಿ ಮಾನವರಹಿತ ವೈಮಾನಿಕ ಡ್ರೋನ್ ಅನ್ನು ಹೊಡೆದುರುಳಿಸಿವೆ. ಅವಶೇಷಗಳನ್ನು ಪತ್ತೆ ಮಾಡಿದಾಗ ಇದು ಅಮೆರಿಕದ ಮಿಲಿಟರಿಗೆ ಸೇರಿದ್ದ ಡ್ರೋನ್ ಎಂಬುದು ಗೊತ್ತಾಗಿದೆ ಎಂದು ಐಆರ್‌ಜಿಸಿ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ ಇದು ರಕ್ಷಣಾತ್ಮಕ ಕ್ರಮದ ಭಾಗವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್‌ನಿಂದ ಅಫ್ಘಾನ್ ನಿರಾಶ್ರಿತರನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಪಲ್ಟಿ – 22 ಮಂದಿ ಸಾವು, 36 ಮಂದಿಗೆ ಗಾಯ

ಒಂದು ದಿನದ ಹಿಂದಷ್ಟೇ ಇರಾನ್ ಕುವೈತ್‌ನಲ್ಲಿರುವ ಅಮೆರಿಕ ಅಲಿ ಅಲ್ ಸಲೇಂ ವಾಯುನೆಲೆಯ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಅಮೆರಿಕದ MQ-9 ರೀಪರ್ ಡ್ರೋನ್‌ಗಳು ಹಾನಿಯಾಗಿದ್ದವು. ಈ ಬೆನ್ನಲ್ಲೇ ಪ್ರತೀಕಾರದ ದಾಳಿ ನಡೆಸಲು ತನ್ನ ವಾಯುಸೀಮೆ ಪ್ರವೇಶಿಸಿದ ಯುಎಸ್ ಜೆಟ್‌ಗಳ ಮೇಲೆ ಐಆರ್‌ಜಿಸಿ ಗುಂಡಿನ ದಾಳಿ ನಡೆಸಿದೆ. ಇದೇ ವೇಳೆ ಎಂಕ್ಯೂ-1 ಡ್ರೋನ್ ಉಡೀಸ್ ಆಗಿದೆ. ಇದನ್ನೂ ಓದಿ: ಇರಾನ್ ಮೇಲೆ ಮತ್ತೆ ಅಮೆರಿಕ ದಾಳಿ – ಕದನ ವಿರಾಮ ಮಾತುಕತೆ ವಿಫಲ
