– ಅಮೆರಿಕ ಸೇನಾ ನೆಲೆ ಮೇಲೆ ಇರಾನ್ ಪ್ರತಿದಾಳಿ
– ಇರಾನ್‌ನ 4 ಡ್ರೋನ್ ಹೊಡೆದುರುಳಿಸಿದ ಅಮೆರಿಕ
ಟೆಹ್ರಾನ್: ಹಾರ್ಮುಜ್ ಜಲಸಂಧಿಯಲ್ಲಿ (Starit Of Hormuz) ಅಮೆರಿಕ ಮತ್ತೆ ದಾಳಿ ನಡೆಸಿದೆ. ಇರಾನ್‌ನ (Iran) ಮಿಲಿಟರಿ ತಾಣವನ್ನು ಗುರಿಯಾಗಿಸಿಕೊಂಡು ಅಮೆರಿಕ (America) ಸೇನೆಯು ರಾತ್ರಿಯಿಡೀ ದಾಳಿ ನಡೆಸಿದೆ. ಈ ವೇಳೆ ಇರಾನ್ ಕೂಡ ಪ್ರತಿದಾಳಿ ಮಾಡಿದ್ದು, ಇರಾನಿನ ಡ್ರೋನ್‌ಗಳನ್ನು ಅಮೆರಿಕ ಹೊಡೆದುರುಳಿಸಿದೆ ಎಂದು ಅಮೆರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂದರ್ ಅಬ್ಬಾಸ್ (Bandar Abbas Airport) ಬಳಿ ದಾಳಿಯ ಬಳಿಕ ಇರಾನ್ ಅಮೆರಿಕದ ಸೇನಾ ನೆಲೆ ಮೇಲೆ ಪ್ರತೀಕಾರದ ದಾಳಿ ನಡೆಸಿದೆ. ಅಮೆರಿಕದ ದಾಳಿಗೆ ಪ್ರತೀಕಾರವಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಗುರುವಾರ ಅಮೆರಿಕದ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಬಂದರ್ ಅಬ್ಬಾಸ್ ವಿಮಾನ ನಿಲ್ದಾಣದ ಹೊರವಲಯದಲ್ಲಿರುವ ಸ್ಥಳದ ಮೇಲೆ ಇಂದು ಬೆಳಗ್ಗೆ ಅಮೆರಿಕ ಸೇನೆ ನಡೆಸಿದ ದಾಳಿ ಬಳಿಕ ಈ ದಾಳಿ ನಡೆದಿದೆ. ಹಾರ್ಮುಜ್ ಜಲಸಂಧಿಗೆ ಬೆದರಿಕೆ ಒಡ್ಡಲು ಯತ್ನಿಸುತ್ತಿದ್ದ ಇರಾನಿನ 4 ಡ್ರೋನ್‌ಗಳನ್ನು ಅಮೆರಿಕ ಹೊಡೆದುರುಳಿಸಿದೆ. ಇದನ್ನೂ ಓದಿ: ಗೆಹ್ಲೋಟ್ ನಡೆಗೆ `ಕೈ’ ಪಡೆ ಅನುಮಾನ – ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಸಿಎಂ ಯಾರಿಗೆ ರಾಜೀನಾಮೆ ನೀಡಬೇಕು?
ಅಮೆರಿಕಾದ ರಕ್ಷಣಾ ಇಲಾಖೆ ಮೂಲಗಳ ಪ್ರಕಾರ, ಹಾರ್ಮುಜ್ ಜಲಸಂಧಿ ಸುತ್ತಮುತ್ತ ಅಮೆರಿಕ ಮತ್ತು ಮೈತ್ರಿ ರಾಷ್ಟ್ರಗಳ ಹಡಗುಗಳಿಗೆ ಅಪಾಯ ಉಂಟುಮಾಡುವ ರೀತಿಯಲ್ಲಿ ಇರಾನ್ ಡ್ರೋನ್ ಚಟುವಟಿಕೆಗಳು ಹೆಚ್ಚಾಗಿದ್ದವು. ಇದನ್ನೂ ಓದಿ: ಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್ – ಡಿಕೆಶಿ ಎದುರೇ ‘5 ವರ್ಷ ಸಿದ್ದರಾಮಯ್ಯ ಸಿಎಂ’ ಘೋಷಣೆ ಕೂಗಿದ ಅಭಿಮಾನಿಗಳು
ಇದನ್ನು ಗಮನಿಸಿದ ಅಮೆರಿಕದ ಸೆಂಟ್ರಲ್ ಕಮಾಂಡ್ ಪಡೆಗಳು ತಕ್ಷಣ ಕಾರ್ಯಾಚರಣೆ ನಡೆಸಿ ನಾಲ್ಕು ‘ಒನ್-ವೇ ಅಟ್ಯಾಕ್ ಡ್ರೋನ್’ಗಳನ್ನು ಗುರಿಯಾಗಿಸಿ ಹೊಡೆದುರುಳಿಸಿವೆ. ಇವು ಆತ್ಮಹತ್ಯಾ ದಾಳಿ ನಡೆಸುವ ಉದ್ದೇಶ ಹೊಂದಿದ್ದ ಡ್ರೋನ್‌ಗಳಾಗಿವೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮೈಲಿಗಲ್ಲುಗಳ ಬೆನ್ನತ್ತಿದರೆ ವೃತ್ತಿಜೀವನ ಹಾಳಾಗುತ್ತೆ, ಶತಕ ಮಿಸ್ ಆಗಿದ್ದಕ್ಕೆ ಬೇಸರವಿಲ್ಲ: ಸೂರ್ಯವಂಶಿ
ಇದೇ ವೇಳೆ, ಐದನೇ ಡ್ರೋನ್ ಉಡಾವಣೆಗೆ ಸಿದ್ಧವಾಗಿದ್ದ ನಿಯಂತ್ರಣ ಕೇಂದ್ರವನ್ನು ಗುರುತಿಸಿದ ಅಮೆರಿಕ ಪಡೆಗಳು, ಬಂದರ್ ಅಬ್ಬಾಸ್ ಪ್ರದೇಶದಲ್ಲೇ ನಿಖರ ದಾಳಿ ನಡೆಸಿವೆ. ಈ ದಾಳಿಯಲ್ಲಿ ನಿಯಂತ್ರಣ ವ್ಯವಸ್ಥೆಗೆ ಹಾನಿಯಾಗಿರುವುದಾಗಿ ತಿಳಿದುಬಂದಿದೆ. ಆದರೆ, ದಾಳಿಯಿಂದ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂಬುದರ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇದನ್ನೂ ಓದಿ: ದೆಹಲಿ ಅಂಗಳದಲ್ಲಿ ಹೈಕಮಾಂಡ್‌ಗೆ ಸಿದ್ದರಾಮಯ್ಯ ಚೆಕ್‌ಮೇಟ್ – ಸಿಎಂ ಒಪ್ಪಿಸಲು ಜಾರ್ಜ್‌ಗೆ ರಾಹುಲ್ ಟಾಸ್ಕ್
ಫೆಬ್ರವರಿ 28ರಂದು ಆರಂಭವಾಗಿದ್ದ ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧಕ್ಕೆ ಬ್ರೇಕ್ ಬೀಳುವ ಯಾವುದೇ ಲಕ್ಷಣಗಳು ಸದ್ಯಕ್ಕೆ ಕಾಣುತ್ತಿಲ್ಲ. ಈ ಯುದ್ಧದ ಪರಿಣಾಮ ಸಾವಿರಾರು ಜನರು ಮೃತಪಟ್ಟಿದ್ದಾರೆ. ಅದಲ್ಲದೆ, ಮಧ್ಯಪ್ರಾಚ್ಯದ ಬಿಕ್ಕಟ್ಟಿನ ನಡುವೆ ಜಾಗತಿಕವಾಗಿ ತೈಲ ಬೆಲೆ ಏರಿಕೆಯಾಗುತ್ತಿದೆ. ಈ ನಡುವೆ ಅಮೆರಿಕ ಹಾಗೂ ಇರಾನ್ ನಡುವೆ ಒಪ್ಪಂದದ ಮಾತುಕತೆ ನಡೆಯುತ್ತಿದೆ ಎನ್ನಲಾಗಿತ್ತು. ಇದೇ ವೇಳೆ ಪುನಃ ಅಮೆರಿಕ ದಾಳಿ ನಡೆಸಿರುವುದರಿಂದ ಜಾಗತಿಕವಾಗಿ ಮತ್ತಷ್ಟು ಆತಂಕ ಶುರುವಾಗಿದೆ. ಇದನ್ನೂ ಓದಿ: ಇಂದು ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್ ಮೀಟಿಂಗ್ – ಆಪ್ತರಿಗೆ ಔತಣಕೂಟದ ಜೊತೆ ವಿದಾಯ
ಶಾಂತಿ ಒಪ್ಪಂದದ ಭಾಗವಾಗಿ ಇರಾನ್ ಮತ್ತು ಓಮಾನ್ ಜಂಟಿಯಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಾಣೆಯನ್ನು ನಿರ್ವಹಿಸುತ್ತವೆ ಎನ್ನುವ ಮಾಹಿತಿ ಇರಾನ್ ಮೂಲಗಳಿಂದ ಹೊರಬಿದ್ದಿದೆ. ಈ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಮಾಹಿತಿಯನ್ನು ತಳ್ಳಿ ಹಾಕಿದ್ದು, ಜಲಮಾರ್ಗ ಮುಕ್ತವಾಗಿರುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜಕೀಯ ಬೆಳವಣಿಗೆ ಮಧ್ಯೆ ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್
ಸೋಮವಾರ ಇರಾನ್ ವಿರುದ್ಧ ಅಮೆರಿಕ ಕೊನೆಯದಾಗಿ ರಕ್ಷಣಾತ್ಮಕ ದಾಳಿ ನಡೆಸಿತ್ತು. ಇದನ್ನು ಇರಾನ್ ಕದನ ವಿರಾಮದ ಉಲ್ಲಂಘನೆ ಎಂದು ಕರೆದಿತ್ತು. ಅಮೆರಿಕದ ದೋಣಿಗಳು ಮತ್ತು ಕ್ಷಿಪಣಿ ಉಡಾವಣಾ ತಾಣಗಳನ್ನು ಗುರಿಯಾಗಿಸಿಕೊಂಡು ಇರಾನ್ ಕೂಡ ದಾಳಿ ನಡೆಸುತ್ತಿದೆ. ಇವು ಅಮೆರಿಕದ ಮಿಲಿಟರಿಯ ಕೇಂದ್ರ ಕಮಾಂಡ್ ಹೇಳುವಂತೆ ಅಮೆರಿಕದ ಪಡೆಗಳಿಗೆ ಬೆದರಿಕೆಯನ್ನುಂಟು ಮಾಡಿವೆ ಎನ್ನಲಾಗಿದೆ. ಇದನ್ನೂ ಓದಿ: ಇನ್ಮುಂದೆ ಮಾರ್ಚ್-ಮೇ ತಿಂಗಳಲ್ಲಿ ನಡೆಯಲ್ಲ ಐಪಿಎಲ್?
