ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಸಿಎಂ ಸಿದ್ದರಾಮಯ್ಯನವರ (CM Siddaramaiah) ಬ್ರೇಕ್‌ಫಾಸ್ಟ್ ಸಭೆಗೆ ಆಗಮಿಸಿದ್ದಾರೆ. ಸದಾಶಿವನಗರದಿಂದ ಹೊರಟ ಡಿಕೆಶಿ ಕಾವೇರಿ ನಿವಾಸಕ್ಕೆ 9:30ಕ್ಕೆ ಆಗಮಿಸಿದರು.
ಡಿಸಿಎಂ ಆಗಮನದ ವೇಳೆ ಸಿದ್ದು ಬೆಂಬಲಿಗರ ಸಿದ್ದರಾಮಯ್ಯಗೆ ಜೈಕಾರ ಹಾಕಿದರು. 5 ವರ್ಷ ಸಿದ್ದ ಸಿಎಂ ಎಂದು ಘೋಷಣೆ ಕೂಗಿ ಡಿಕೆಶಿ ವಿರುದ್ಧ ಆಕ್ರೋಶ ಹೊರಹಾಕಿದರು.
ಜಮೀರ್ ಅಹಮದ್ ತಮ್ಮ ನಿವಾಸದಿಂದ ನೇರ ಚಾಮರಾಜಪೇಟೆ ಮೈದಾನದ ಕಡೆ ತೆರಳಿದ್ದಾರೆ. ಬಕ್ರೀದ್ ಹಿನ್ನೆಲೆ ಪ್ರಾರ್ಥನೆಗೆ ತೆರಳಿದ ಬಳಿಕ ಬ್ರೇಕ್ ಫಾಸ್ಟ್ ಮೀಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.
ಯಾರೆಲ್ಲ ಭಾಗಿಯಾಗಿದ್ದಾರೆ?
ಡಿಕೆ ಶಿವಕುಮಾರ್, ಪರಮೇಶ್ವರ್, ಭೈರತಿ ಸುರೇಶ್, ಸಂತೋಷ್ ಲಾಡ್, ಎಂಸಿ ಸುಧಾಕರ್, ಎಂಬಿ ಪಾಟೀಲ್, ಪ್ರಿಯಾಂಕ್ ಖರ್ಗೆ, ಎಸ್‌ಎಸ್ ಮಲ್ಲಿಕಾರ್ಜುನ್, ಕೆಜೆ ಜಾರ್ಜ್, ಕೆ.ವೆಂಕಟೇಶ್, ಶಿವರಾಜ್ ತಂಗಡಗಿ, ಚೆಲುವರಾಯಸ್ವಾಮಿ, ಲಕ್ಷ್ಮೀ ಹೆಬ್ಬಾಳ್ಕರ್, ದರ್ಶಾನಪುರ, ಮಧು ಬಂಗಾರಪ್ಪ, ಸತೀಶ್ ಜಾರಕಿಹೋಳಿ, ಮಹದೇವಪ್ಪ, ಮಂಕಾಳ್ ವೈದ್ಯ, ತಿಮ್ಮಾಪುರ್, ಶರಣು ಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ, ಮುನಿಯಪ್ಪ, ಹೆಚ್.ಕೆ. ಪಾಟೀಲ್, ಈಶ್ವರ್ ಖಂಡ್ರೆ, ಬೋಸರಾಜು.
