ಚಂಡೀಗಢ: “ನನಗೆ ವೈಯಕ್ತಿಕ ಶತಕಗಳಿಗಿಂತ ತಂಡದ ಗೆಲುವೇ ಮುಖ್ಯ. ಮೈಲಿಗಲ್ಲುಗಳ (Milestones) ಬಗ್ಗೆ ಯೋಚಿಸಲು ಆರಂಭಿಸಿದ ದಿನವೇ ನನ್ನ ವೃತ್ತಿಜೀವನ ಹಳಿ ತಪ್ಪುತ್ತದೆ” ಎಂದು ರಾಜಸ್ಥಾನ ರಾಯಲ್ಸ್(Rajasthan Royals) ತಂಡದ 15 ವರ್ಷದ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ(Vaibhav Sooryavanshi ) ಹೇಳಿದ್ದಾರೆ.
ಐಪಿಎಲ್‌ನ (IPL) ಹೈವೋಲ್ಟೇಜ್ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್(SRH) ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ರಾಜಸ್ಥಾನ ತಂಡದ ಗೆಲುವಿನ ರೂವಾರಿಯಾದ ಸೂರ್ಯವಂಶಿ ಪಂದ್ಯಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡರು. ಪಂದ್ಯದ ಬಳಿಕ ಖ್ಯಾತ ಕ್ರಿಕೆಟ್ ವಿಶ್ಲೇಷಕ ಹರ್ಷ ಬೋಗ್ಲೆ ಅವರು ಮಾತನಾಡಿಸಿದಾಗ ಸೂರ್ಯವಂಶಿ ಹಲವು ಪ್ರಬುದ್ಧ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
Vaibhav Sooryavanshi’s mantra: think less, deliver more 🔥
A record-breaking night as Rajasthan Royals move one step closer to their title dream.🩷#TATAIPL 2026 Qualifier 2 👉 #GTvRR | FRI, 29th MAY, 6:30 PM pic.twitter.com/z7sjQuhVM6
— Star Sports (@StarSportsIndia) May 27, 2026
“ನೀವು ಔಟಾದ ಆ ಎಸೆತದಲ್ಲಿ, ಟಿ20 ಕ್ರಿಕೆಟ್‌ನ ದೈತ್ಯ ಕ್ರಿಸ್ ಗೇಲ್ ಅವರ ಅತ್ಯಂತ ವೇಗದ ಶತಕದ ದಾಖಲೆ ಮುರಿಯುವ ಸನಿಹದಲ್ಲಿದ್ದೀರಿ ಎನ್ನುವುದು ನಿಮಗೆ ಗೊತ್ತಿತ್ತೇ?” ಎಂದು ಹರ್ಷ ಬೋಗ್ಲೆ ಪ್ರಶ್ನಿಸಿದರು.
ಇದಕ್ಕೆ ಅತ್ಯಂತ ವಿನಮ್ರವಾಗಿ ಉತ್ತರಿಸಿದ ವೈಭವ್, “ಖಂಡಿತವಾಗಿಯೂ ಇಲ್ಲ. ನಾನು ಔಟಾಗಿ ಪೆವಿಲಿಯನ್‌ಗೆ ಮರಳಿದ ಮೇಲೆಯೇ ನನಗೆ ಆ ಐತಿಹಾಸಿಕ ದಾಖಲೆಯ ವಿಷಯ ತಿಳಿಯಿತು. ಕ್ರೀಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ನನ್ನ ಸಂಪೂರ್ಣ ಗಮನ ಕೇವಲ ತಂಡಕ್ಕೆ ಎಷ್ಟು ಸಾಧ್ಯವೋ ಅಷ್ಟು ರನ್ ಕೊಡುಗೆ ನೀಡುವುದರ ಮೇಲಿತ್ತು. ಶತಕಗಳು ಮುಂದೆಯೂ ಬರುತ್ತಿರುತ್ತವೆ. ಆದರೆ ತಂಡಕ್ಕೆ ದೊಡ್ಡ ಮೊತ್ತ ತಂದುಕೊಡುವುದು ಮತ್ತು ಟ್ರೋಫಿ ಗೆಲ್ಲುವುದೇ ನಮ್ಮ ಮುಖ್ಯ ಗುರಿ” ಎಂದರು.
#VaibhavSooryavanshi did exactly what his coach asked for and gave fans another outrageous knock for the highlights reel. 😎🔥#TATAIPL 2026 Eliminator 👉 #SRHvRR | LIVE NOW 👉https://t.co/AsF9BnOMCE pic.twitter.com/jEbnxeEiB7
— Star Sports (@StarSportsIndia) May 27, 2026
“97 ರನ್ ಹೊಡೆದ ಬಳಿಕ ಒಂದೆರಡು ಸಿಂಗಲ್ಸ್ ತಗೆದುಕೊಂಡು ಸುಲಭವಾಗಿ ಶತಕ ಪೂರೈಸಬಹುದಿತ್ತು. ಎಲಿಮಿನೇಟರ್‌ನಂತಹ ದೊಡ್ಡ ಪಂದ್ಯದಲ್ಲಿ ಈ ಮೈಲಿಗಲ್ಲು ಕೈತಪ್ಪಿದ್ದಕ್ಕೆ ಬೇಸರವಿಲ್ಲವೇ?” ಎಂಬ ಬೋಗ್ಲೆ ಅವರ ಮರು ಪ್ರಶ್ನೆಗೆ ವೈಭವ್ ನೀಡಿದ ಉತ್ತರ ಅವರ ಕ್ರಿಕೆಟ್ ಪ್ರಬುದ್ಧತೆಯನ್ನು ಬಿಂಬಿಸುವಂತಿತ್ತು. ಇದನ್ನೂ ಓದಿ: IPL: ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್ – ಕ್ರಿಸ್ ಗೇಲ್ ದಾಖಲೆ ಉಡೀಸ್ ಮಾಡಿದ 15ರ ಪೋರ
Universe Boss 🤝 Universe Boss Baby#VaibhavSooryavanshi smashes another fifty in #TATAIPL 2026 and breaks Chris Gayle’s record for most sixes in a season (59)🔥👊🏻#TATAIPL Playoffs Eliminator 👉 #SRHvRR | LIVE NOW 👉https://t.co/AsF9BnOMCE pic.twitter.com/dF7JsFwXro
— Star Sports (@StarSportsIndia) May 27, 2026
ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ದೊಡ್ಡ ವೇದಿಕೆಯಲ್ಲಿ ಯಾವುದೇ ಭಯವಿಲ್ಲದೆ ಆಡುವ ರಹಸ್ಯವನ್ನು ಬಿಚ್ಚಿಟ್ಟ ಸೂರ್ಯವಂಶಿ, “ನಾನು ಪಂದ್ಯಕ್ಕೂ ಮುನ್ನ ಅತಿಯಾಗಿ ಯೋಚಿಸುವುದಿಲ್ಲ. ಎದುರಾಳಿ ತಂಡದಲ್ಲಿ ಯಾರೆಲ್ಲಾ ಬೌಲರ್‌ಗಳಿದ್ದಾರೆ, ಈ ಪಿಚ್‌ನ ಸ್ವರೂಪ ಹೇಗೆ ಇದೆ ಮತ್ತು ಬೌಂಡರಿ ಗೆರೆಗಳು ಎಷ್ಟು ದೂರ ಇವೆ ಎಂಬುದನ್ನು ಮಾತ್ರ ಲೆಕ್ಕಾಚಾರ ಮಾಡುತ್ತೇನೆ. ಮೈದಾನಕ್ಕೆ ಇಳಿದಾಗ ಧನಾತ್ಮಕ ಚಿಂತನೆ ಇಟ್ಟುಕೊಳ್ಳುತ್ತೇನೆ. ನಾವು ಆಕ್ರಮಣಕಾರಿಯಾಗಿ ಆಡಿದರೆ ಬೌಲರ್‌ಗಳೇ ಒತ್ತಡಕ್ಕೆ ಸಿಲುಕುತ್ತಾರೆ, ಅದನ್ನೇ ನಾನು ಮೈದಾನದಲ್ಲಿ ಅಳವಡಿಸಿಕೊಂಡೆ” ಎಂದರು.
“ಈ ಅದ್ಭುತ ಗೆಲುವನ್ನು ಸಂಭ್ರಮಿಸುತ್ತೀರಾ ಅಥವಾ ಮುಂದಿನ ಪಂದ್ಯದ ಬಗ್ಗೆ ಯೋಚಿಸುತ್ತೀರಾ?” ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಈ ಪಂದ್ಯದ ಧನಾತ್ಮಕ ಎನರ್ಜಿಯನ್ನು ಮುಂದಿನ ಪಂದ್ಯಕ್ಕೂ ಕೊಂಡೊಯ್ಯುತ್ತೇವೆ. ಮುಂದಿನ ಕ್ವಾಲಿಫಯರ್ ಪಂದ್ಯದಲ್ಲೂ ಇದೇ ರೀತಿ ಗೆದ್ದು ಫೈನಲ್ ತಲುಪಲು ಹೋರಾಡುತ್ತೇವೆ. ಒಂದು ವೇಳೆ ನನ್ನ ಆಟದಲ್ಲಿ ಏನಾದರೂ ತಪ್ಪುಗಳಿದ್ದರೆ, ಸದ್ಯ ಕೇವಲ ಅದರ ಸುಧಾರಣೆಯ ಮೇಲಷ್ಟೇ ಗಮನ ಹರಿಸುತ್ತೇನೆ” ಎಂದು ವಿಶ್ವಾಸದ ಮಾತನ್ನು ಆಡಿದರು.
Chalo, shuru karte hain! 👏
Vaibhav Sooryavanshi kickstarts his six hitting ritual with yet another first over maximum!
Lijiye Bhojpuri commentary ka maza, sirf Jiohotstar par🎙️#TATAIPL Playoffs Eliminator 👉 #SRHvRR | LIVE NOW 👉https://t.co/AsF9BnOMCE pic.twitter.com/s9Xknsme7X
— Star Sports (@StarSportsIndia) May 27, 2026
