ಬಾಗಲಕೋಟೆ: ಕಾಂಗ್ರೆಸ್ ಶಾಸಕರಾಗಿದ್ದ ಸಿದ್ದುನ್ಯಾಮೇಗೌಡರ ನಿಧನದಿಂದ ಅನಿವಾರ್ಯವಾಗಿ ನಡೆಯುತ್ತಿರುವ ಉಪಚುನಾವಣೆ ಇದಾಗಿದೆ. ಕಳೆದ ಚುನಾವಣೆಯಲ್ಲಿ ಕಷ್ಟಪಟ್ಟು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ದೋಸ್ತಿಯೋ ಅಥವಾ ಬಿಜೆಪಿಯೋ ಎಂಬುದು ಪ್ರಶ್ನೆಯಾಗಿದೆ. ಒಟ್ಟಿನಲ್ಲಿ ಜಮಖಂಡಿಯಲ್ಲಿ ಬಂಡಿ ಎಳೆಯೋರು ಯಾರು ಅನ್ನೋದು ಕುತೂಹಲ ಕೆರಳಿಸಿದೆ.
ಬಾಗಲಕೋಟೆಯ ಜಮಖಂಡಿಯಲ್ಲಿ ಕಾಂಗ್ರೆಸ್ ನ ಆನಂದ ನ್ಯಾಮೇಗೌಡ ಹಾಗೂ ಬಿಜೆಪಿಯ ಶ್ರೀಕಾಂತ ಕುಲಕರ್ಣಿ ಮಧ್ಯೆ ಹಣಾಹಣಿ ನಡೆದಿದೆ. ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ 2,03,681 ಒಟ್ಟು ಮತದಾರರಿದ್ದಾರೆ. ಇದರಲ್ಲಿ ಪುರುಷರು- 1,02,216 ಹಾಗೂ 1,01,460 ಮಹಿಳಾ ಮತದಾರರಿದ್ದಾರೆ. ಇದನ್ನೂ ಓದಿ: ಪ್ರತಿಷ್ಠೆಯ ಕಣ ಶಿವಮೊಗ್ಗದಲ್ಲಿ ಯಾರಿಗೆ ವಿಜಯಮಾಲೆ..?
Advertisement
Advertisement
ಇನ್ನು ಜಾತಿ ಲೆಕ್ಕಾಚಾರದಲ್ಲಿ ನೋಡೋದಾದ್ರೆ ಲಿಂಗಾಯತ (ಪಂಚಮಸಾಲಿ ಬಣಜಿಗ)- 28,000, ಹಾಲುಮತ- 22,000, ಗಾಣಿಗ ಲಿಂಗಾಯತ-20,000, ಮುಸ್ಲಿಂ- 20,000, ಜೈನ್- 10,000, ಎಸ್ಸಿ, ಎಸ್ಟಿ- 28,000, ಮರಾಠ/ಕ್ಷತ್ರೀಯ- 15,000, ರೆಡ್ಡಿ ಲಿಂಗಾಯತ್-8,500, ಇತರೆ ಸಮುದಾಯದಲ್ಲಿ 28,000 ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಲಿಂಗಾಯತ ಮತದಾರರೇ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಇದನ್ನೂ ಓದಿ: ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಹವಾ-ಮತದಾರರ ಒಲವು ಯಾರ ಅತ್ತ?
Advertisement
2018ರ ಫಲಿತಾಂಶ ಹೀಗಿತ್ತು:
ಕಾಂಗ್ರೆಸ್ ನಿಂದ ಸಿದ್ದು ನ್ಯಾಮೇಗೌಡ ಸ್ಪರ್ಧಿಸಿ 49,245 ಮತಗಳನ್ನು ಗಳಿಸಿದ್ದರು. ಇನ್ನು ಬಿಜೆಪಿಯಿಂದ ಶ್ರೀಕಾಂತ ಕುಲಕರ್ಣಿ ಸ್ಪರ್ಧಿಸಿ 46,450 ಮತಗಳನ್ನು ತಮ್ಮದಾಗಿಸಿಕೊಂಡಿದ್ದು, ಗೆಲುವಿನ ಅಂತರ- 2,795 ಆಗಿತ್ತು. ಇದನ್ನೂ ಓದಿ: ಮಂಡ್ಯದಲ್ಲಿ ಮತದಾರನ ಒಲವು ದೋಸ್ತಿಗೋ, ಬಿಜೆಪಿಗೋ?
Advertisement
ಕಾಂಗ್ರೆಸ್ ಸೋತರೆ ಏನಾಗುತ್ತೆ…?
ಜಮಖಂಡಿಯಲ್ಲಿ ಈ ಬಾರಿ ಕಾಂಗ್ರೆಸ್ ಸೋತರೆ ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್‍ಗೆ ಮುಖಭಂಗವಾಗುತ್ತದೆ. ಈ ಮೂಲಕ ಬಿಎಸ್‍ವೈ ವೀರಶೈವ-ಲಿಂಗಾಯತ ಸಮುದಾಯದ ನಾಯಕ ಅನ್ನೋದು ಮತ್ತೊಮ್ಮೆ ಸಾಬೀತಾಗುತ್ತದೆ. ಇಷ್ಟು ಮಾತ್ರವಲ್ಲದೇ ಉತ್ತರ ಕರ್ನಾಟಕದಲ್ಲಿ ಬಿಎಸ್‍ವೈ ಬಲಿಷ್ಠ ಅನ್ನೋದು ಪ್ರೂವ್ ಆಗುತ್ತದೆ. ಕಾಂಗ್ರೆಸ್‍ನಲ್ಲಿ ಡಿಸಿಎಂ ಪರಮೇಶ್ವರ್ ಪ್ರಭಾವ ಕುಗ್ಗಲಿದೆ. ವಿಧಾನಸಭೆಯಲ್ಲಿ ಬಿಜೆಪಿ ಸಂಖ್ಯಾಬಲ 104ರಿಂದ 105ಕ್ಕೆ ಹೆಚ್ಚಳವಾಗುತ್ತದೆ. ಬಿಎಸ್‍ವೈ ಮತ್ತೆ ಸಿಎಂ ಆಗುವ ಆಸೆ ಚಿಗುರಲಿದೆ. ಇದನ್ನೂ ಓದಿ: ಗಣಿ ನಾಡಿಗೆ ಯಾರು ಧಣಿ? ಬಳ್ಳಾರಿ ಮಹಾಭಾರತದಲ್ಲಿ ಪಾಂಡವರು ಯಾರು..?
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv