ಗಾಂಧೀನಗರ: 2036 ರ ಕ್ರೀಡಾಕೂಟಕ್ಕೆ ದೇಶದ ಬಿಡ್ ಅನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ ಯೋಗಾಸನವನ್ನು (Yogasana) ಒಲಿಂಪಿಕ್ (Olympics) ಸೇರ್ಪಡೆಗೆ ಒತ್ತಾಯಿಸಲಿದೆ ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya) ತಿಳಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ವಿಶ್ವ ಯೋಗಾಸನ ಚಾಂಪಿಯನ್‌ಶಿಪ್‌ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದ್ದಾರೆ. ಯೋಗಾಸನ ವಿಶ್ವ ಚಾಂಪಿಯನ್‌ಶಿಪ್ ಜೂನ್ 4 ರಿಂದ 8 ರವರೆಗೆ ಅಹಮದಾಬಾದ್‌ನಲ್ಲಿ ನಡೆಯಲಿದ್ದು, 60 ಕ್ಕೂ ಹೆಚ್ಚು ರಾಷ್ಟ್ರಗಳ 529 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಅದರಲ್ಲಿ 114 ಮಂದಿ ಭಾರತೀಯರು ಇದ್ದಾರೆ. ಭಾರತೀಯ ತಂಡವು ಪ್ರಸ್ತುತ ಅಹಮದಾಬಾದ್‌ನ ವೀರ್ ಸಾವರ್ಕರ್ ಕ್ರೀಡಾ ಸಂಕೀರ್ಣದಲ್ಲಿ ತರಬೇತಿ ಪಡೆಯುತ್ತಿದೆ. ಇದನ್ನೂ ಓದಿ: ಕೊಹ್ಲಿ ಜೊತೆಗಿನ ರೀಲ್ಸ್ ಸೇರಿ ಇನ್ಸ್ಟಾಗ್ರಾಂನಿಂದ 200ಕ್ಕೂ ಹೆಚ್ಚು ಪೋಸ್ಟ್ ಡಿಲೀಟ್ ಮಾಡಿದ ಅರ್ಷದೀಪ್
2030 ರ ಅಹಮದಾಬಾದ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಯೋಗಾಸನವು ಸಾಂಪ್ರದಾಯಿಕ ಕ್ರೀಡೆಗಳಲ್ಲಿ ಒಂದಾಗಲಿದೆ. 2036 ರಲ್ಲಿ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲು ನಾವು ಬಿಡ್ ಮಾಡುತ್ತಿದ್ದೇವೆ. ಬಿಡ್ ಆದ್ರೆ ನಮ್ಮ ಕ್ರೀಡೆಯು ಪಟ್ಟಿಯಲ್ಲಿರಬೇಕು. ಆ ಹೊತ್ತಿಗೆ ಯೋಗವು ಒಲಿಂಪಿಕ್ ಕ್ರೀಡೆಯಾಗುವಂತೆ ನೋಡಿಕೊಳ್ಳಲು ಭಾರತ ಸರ್ಕಾರ ಮತ್ತು ರಾಷ್ಟ್ರೀಯ ಒಕ್ಕೂಟ ಎರಡೂ ಪ್ರಯತ್ನಿಸುತ್ತಿವೆ ಎಂದು ತಿಳಿಸಿದ್ದಾರೆ.
2030 ರ ಅಹಮದಾಬಾದ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಯೋಗಾಸನವನ್ನು ಪ್ರಥಮ ಬಾರಿಗೆ ಪರಿಚಯಿಸಲಾಗುತ್ತಿದ್ದು, 2032 ರ ಬ್ರಿಸ್ಬೇನ್ ಒಲಿಂಪಿಕ್ಸ್‌ನಲ್ಲಿ ಇದನ್ನು ಪ್ರದರ್ಶನ ಕ್ರೀಡೆಯಾಗಿ ಪ್ರದರ್ಶಿಸುವ ನಿಟ್ಟಿನಲ್ಲಿ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ವಿಶ್ವ ಯೋಗಾಸನದ ಉಪಾಧ್ಯಕ್ಷ ಉದಿತ್ ಶೇಠ್ ತಿಳಿಸಿದ್ದಾರೆ. ಇದನ್ನೂ ಓದಿ: 80% ಮಳೆ ಭೀತಿ: ಆರ್‌ಸಿಬಿ vs ಜಿಟಿ ಪಂದ್ಯ ರದ್ದಾದ್ರೆ ಯಾರಿಗೆ ಸಂಕಷ್ಟ?
