ಧರ್ಮಶಾಲಾ: ಐಪಿಎಲ್ 2026ರ (IPL 2026) ಕ್ವಾಲಿಫೈಯರ್ 1ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ (RCB vs GT) ಇಂದು ಸೆಣಸಲಿವೆ. ಹೈವೋಲ್ಟೇಜ್ ಪಂದ್ಯಕ್ಕೆ ಈಗ ಮಳೆ ಭೀತಿ ಎದುರಾಗಿದೆ. ನಗರದಲ್ಲಿ ಸುಮಾರು 14ರಿಂದ 25% ನಷ್ಟು ಮೋಡ ಕವಿದ ವಾತಾವರಣ ಇದೆ. ಹೀಗಾಗಿ, ಮಳೆಯಾಗುವ ಸಾಧ್ಯತೆ 80% ನಷ್ಟಿದೆ ಎಂದು ಅಂದಾಜಿಸಲಾಗಿದ್ದು, ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ.
ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದರೆ ಯಾರಿಗೆ ಲಾಭ, ಯಾರಿಗೆ ನಷ್ಟ ಆಗುತ್ತೆ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಮಳೆಯಿಂದ ಪಂದ್ಯ ರದ್ದಾದರೆ, ಉತ್ತಮ ರನ್‌ರೇಟ್‌ನಿಂದಾಗಿ ಆರ್‌ಸಿಬಿ ಪಾಯಿಂಟ್ ಪಟ್ಟಿಯಲ್ಲಿ ಜಿಟಿಗಿಂತ ಮುಂದಿದ್ದು, ಫೈನಲ್‌ಗೆ ಮುನ್ನಡೆಯುತ್ತದೆ. ಕ್ವಾಲಿಫರ್ 1, ಎಲಿಮಿನೇಟರ್ ಅಥವಾ ಕ್ವಾಲಿಫೈಯರ್ 2ಗೆ ಯಾವುದೇ ಮೀಸಲು ದಿನವಿಲ್ಲದ ಕಾರಣ, ಲೀಗ್ ಹಂತದ ಪಾಯಿಂಟ್ ಪಟ್ಟಿಯಲ್ಲಿ ಹೆಚ್ಚು ಸ್ಥಾನ ಪಡೆದ ತಂಡಕ್ಕೆ ಅನುಕೂಲವಿದೆ ಎನ್ನಲಾಗಿದೆ. ಇದನ್ನೂ ಓದಿ: ಕ್ವಾಲಿಫೈಯರ್-1ರಲ್ಲಿ ಫಿಲ್ ಸಾಲ್ಟ್ ಆಡ್ತಾರಾ? – ಬಿಗ್ ಅಪ್‌ಡೇಟ್ ಕೊಟ್ಟ ಆರ್‌ಸಿಬಿ ಕ್ಯಾಪ್ಟನ್ ರಜತ್ ಪಾಟೀದಾರ್
ಐಪಿಎಲ್ ಮಾದರಿಯ ಪ್ರಕಾರ, ಅಂಕಪಟ್ಟಿಯಲ್ಲಿ ಅಗ್ರ ಎರಡು ತಂಡಗಳು ಕ್ವಾಲಿಫೈಯರ್ 1ಕ್ಕೆ ಅರ್ಹತೆ ಪಡೆಯುತ್ತವೆ. ಪಂದ್ಯದ ವಿಜೇತರು ನೇರವಾಗಿ ಫೈನಲ್‌ಗೆ ಪ್ರವೇಶಿಸುತ್ತಾರೆ. ಆದರೆ, ಸೋತ ತಂಡಕ್ಕೆ ಕ್ವಾಲಿಫೈಯರ್ 2 ಮೂಲಕ ಮತ್ತೊಂದು ಅವಕಾಶ ಸಿಗುತ್ತದೆ. ಐಪಿಎಲ್ ನಿಯಮಗಳ ಪ್ರಕಾರ, ಮಳೆಯಿಂದ ಏನಾದ್ರು ಪಂದ್ಯ ರದ್ದಾದರೆ, ಪೂರ್ಣ ಪ್ರಮಾಣದ ಇನ್ನಿಂಗ್ಸ್ ಅನ್ನು ಬೈಪಾಸ್ ಮಾಡಿ ವಿಜೇತರನ್ನು ನಿರ್ಧರಿಸಲು ಸೂಪರ್ ಓವರ್ ಅನ್ನು ನಿಗದಿಪಡಿಸಬಹುದು.
ಆರ್‌ಸಿಬಿ ಮತ್ತು ಜಿಟಿ ತಂಡಗಳು ತಲಾ 18 ಅಂಕಗಳೊಂದಿಗೆ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ. ನಿವ್ವಳ ರನ್ ರೇಟ್‌ನಿಂದ ಎರಡೂ ತಂಡಗಳು ಅಂತರವನ್ನು ಹೊಂದಿವೆ. ಈ ಋತುವಿನಲ್ಲಿ ತಂಡಗಳು ಹೆಡ್-ಟು-ಹೆಡ್‌ನಲ್ಲಿ 1-1 ಮತ್ತು ಒಟ್ಟಾರೆಯಾಗಿ 4-4 ರಲ್ಲಿ ಸಮಬಲ ಸಾಧಿಸಿವೆ. ಇದನ್ನೂ ಓದಿ: ತಂಡದಿಂದ ಹೊರಬಂದಿದ್ದು ನನ್ನ ನಿರ್ಧಾರವಲ್ಲ – RCB ವಿರುದ್ಧ ತಿರುಗಿಬಿದ್ರಾ ರೇಪ್ ಆರೋಪಿ ಯಶ್ ದಯಾಳ್
ಟೇಬಲ್ ಟಾಪರ್ ಆರ್‌ಸಿಬಿ ಐದು ಸೋಲುಗಳಲ್ಲಿ ಜಿಟಿ ವಿರುದ್ಧವೂ ಒಂದು ಪಂದ್ಯ ಸೋತು ಮತ್ತೊಂದನ್ನು ಗೆದ್ದಿದೆ. ಗಿಲ್ ಪಡೆಯ ಬಲಿಷ್ಠ ಬೌಲಿಂಗ್ ಆರ್‌ಸಿಬಿಯನ್ನು ಕಾಡಬಹುದು. ಎರಡೂ ಫ್ರಾಂಚೈಸಿಗಳು ತಮ್ಮ ಎರಡನೇ ಐಪಿಎಲ್ ಟ್ರೋಫಿ ಗೆಲ್ಲುವ ತವಕದಲ್ಲಿವೆ. ಹಾಲಿ ಚಾಂಪಿಯನ್ ಆರ್‌ಸಿಬಿ ಸತತ ಎರಡನೇ ಪ್ರಶಸ್ತಿ ಗೆಲ್ಲುವ ಗುರಿ ಗೊಂದಿದೆ. ಹಾಗೆಯೇ ಜಿಟಿ 2022ರಲ್ಲಿ ಸಾಧಿಸಿದ ಚೊಚ್ಚಲ ಚಾಂಪಿಯನ್ ವೈಭವವನ್ನು ಮರಳಿ ಪಡೆಯಲು ದೃಢನಿಶ್ಚಯ ಹೊಂದಿದೆ.
