ಧರ್ಮಶಾಲಾ: ಐಪಿಎಲ್ 2026ರ (IPL 2026) ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ (Gujarat Titans) ವಿರುದ್ಧ ಆಡಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡಕ್ಕೆ ಬಿಗ್ ನ್ಯೂಸ್ ಸಿಕ್ಕಿದೆ. ಇಂದಿನ ಪಂದ್ಯದಲ್ಲಿ ಫಿಲ್ ಸಾಲ್ಟ್ ಆಡ್ತಾರಾ ಎಂಬ ಬಗ್ಗೆ ನಾಯಕ ರಜತ್ ಪಾಟೀದಾರ್ ಅಪ್‌ಡೇಟ್ ಕೊಟ್ಟಿದ್ದಾರೆ.
ಕ್ವಾಲಿಫೈಯರ್-1 ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಜತ್ ಪಾಟೀದಾರ್ (Rajat Patidar), ಆರ್‌ಸಿಬಿ ಆರಂಭಿಕ ಆಟಗಾರ ಫಿಲ್ ಸಾಲ್ಟ್ (Phil Salt) ಗಾಯದಿಂದ ಚೇತರಿಸಿಕೊಂಡಿದ್ದು, ನೆಟ್ಸ್‌ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಸಾಲ್ಟ್ ಕಮ್‌ಬ್ಯಾಕ್ ಮಾಡಿದರೆ ಬೆಂಗಳೂರು ತಂಡ ತನ್ನ ನೆಚ್ಚಿನ ಬ್ಯಾಟಿಂಗ್ ಕ್ರಮಾಂಕದೊಂದಿಗೆ ನೇರವಾಗಿ ಫೈನಲ್ ತಲುಪಲು ರಣತಂತ್ರ ರೂಪಿಸಬಹುದು ಎಂದಿದ್ದಾರೆ. ಇದನ್ನೂ ಓದಿ: RCB Vs GT ಕ್ವಾಲಿಫೈಯರ್-1 ರಣರೋಚಕ ಕದನ ಇಂದು – ಧರ್ಮಶಾಲಾದಲ್ಲಿ ಯಾರ ದರ್ಬಾರ್ ನಡೆಯುತ್ತೆ?
Virat Kohli and Phil Salt during Today’s Practice Session.
– Phil Salt has a finger splint 👀 pic.twitter.com/WeUpCJqEeR
— Virat Kohli Fan Club (@Trend_VKohli) May 25, 2026
ಇನ್ನೂ ಫಿಲ್ ಸಾಲ್ಟ್ ಅವರು ಪ್ಲೇಯಿಂಗ್-11ನಲ್ಲಿ ಆಡುತ್ತಾರೋ? ಇಲ್ಲವೋ? ಎನ್ನುವ ಬಗ್ಗೆ ಮ್ಯಾನೇಜ್‌ಮೆಂಟ್ ಕೊನೆಯ ಕ್ಷಣದಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಆರ್‌ಸಿಬಿಗೆ ಸಾಲ್ಟ್ ಕಮ್‌ಬ್ಯಾಕ್ ಎಷ್ಟು ಮುಖ್ಯ?
ಫಿಲ್ ಸಾಲ್ಟ್ ಅವರ ಕಮ್‌ಬ್ಯಾಕ್‌ನಿಂದ ಪ್ಲೇಆಫ್ ಹಂತದಲ್ಲಿ ಆರ್‌ಸಿಬಿ ಬ್ಯಾಟಿಂಗ್‌ಗೆ ಆನೆಬಲ ಬಂದಂತಾಗಲಿದೆ. ಗಾಯಗೊಳ್ಳುವ ಮುನ್ನ ಸಾಲ್ಟ್ ಐಪಿಎಲ್ 2026ರಲ್ಲಿ ಅತ್ಯಂತ ಆಕ್ರಮಣಕಾರಿ ಆರಂಭಿಕ ಆಟಗಾರನಾಗಿ ಅಬ್ಬರಿಸಿದ್ದರು. ಪವರ್‌ಪ್ಲೇ ಓವರ್‌ಗಳಲ್ಲೇ ಬೌಲರ್‌ಗಳನ್ನ ದಂಡಿಸುವ ಸಾಲ್ಟ್ ಶೈಲಿ ತಂಡಕ್ಕೆ ಪ್ರತಿ ಪಂದ್ಯದಲ್ಲೂ ಉತ್ತಮ ಆರಂಭ ನೀಡುತ್ತಿತ್ತು.

ಇನ್ನೂ ಸಾಲ್ಟ್ ಅಲಭ್ಯತೆಯ ನಡುವೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಜಾಕೋಬ್ ಬೆಥೆಲ್ ಕೂಡ ಎಡಗೈ ಉಂಗುರದ ಬೆರಳಿಗೆ ಗಾಯ ಮಾಡಿಕೊಂಡು ಹೊರಬಿದ್ದಿದ್ದು, ಆರ್‌ಸಿಬಿಗೆ ಮತ್ತೊಂದು ಹಿನ್ನಡೆಯಾಗಿದೆ. ಒಂದು ವೇಳೆ ಕ್ವಾಲಿಫೈಯರ್-1 ಪಂದ್ಯಕ್ಕೆ ಸಾಲ್ಟ್ ಸಂಪೂರ್ಣ ಫಿಟ್ ಆಗಿ ಕಣಕ್ಕಿಳಿದರೆ, ವೆಂಕಟೇಶ್ ಅಯ್ಯರ್ ಮತ್ತೆ ತಮ್ಮ ಹಳೆಯ ಕ್ರಮಾಂಕವಾದ ಮಿಡಲ್ ಆರ್ಡರ್‌ಗೆ ಮರಳಲಿದ್ದಾರೆ.
ಲೀಗ್ ಹಂತದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಆರ್‌ಸಿಬಿ, ಇಂದು ಗುಜರಾತ್ ಟೈಟನ್ಸ್ ವಿರುದ್ಧ ಗೆಲುವು ಸಾಧಿಸಿದರೆ ನೇರವಾಗಿ ಫೈನಲ್ ಟಿಕೆಟ್ ಬುಕ್ ಮಾಡಲಿದೆ.ಇದನ್ನೂ ಓದಿ: RCB ಅಭಿಮಾನಿಗಳಿಗೆ ಗುಡ್‌ನ್ಯೂಸ್ – ಸ್ಟಾರ್ ಆಟಗಾರ ತಂಡಕ್ಕೆ ರಿಟರ್ನ್
