ಧರ್ಮಶಾಲಾ: ನಾಯಕ ರಜತ್ ಪಾಟಿದಾರ್ (Rajat Patidar) ಸ್ಫೋಟಕ ಬ್ಯಾಟಿಂಗ್‌ನಿಂದ ಐಪಿಎಲ್‌ನ ಕ್ವಾಲಿಫೈಯರ್ 1 (Qualifier 1) ಪಂದ್ಯದಲ್ಲಿ ಆರ್‌ಸಿಬಿ (RCB) ತಂಡ 254 ರನ್ ಮೊತ್ತ ಕಲೆ ಹಾಕಿದ್ದು, ಗುಜರಾತ್ ಟೈಟನ್ಸ್‌ಗೆ (GT) 255 ರನ್‌ಗಳ ಬೃಹತ್ ಗುರಿ ನೀಡಿದೆ.
ಧರ್ಮಶಾಲಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಆರ್‌ಸಿಬಿ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ವೆಂಕಟೇಶ್ ಅಯ್ಯರ್ 19 ರನ್ (7 ಎಸೆತ, 3 ಫೋರ್, 1 ಸಿಕ್ಸ್) ಗಳಿಸಿ ಪೆವಿಲಿಯನ್‌ಗೆ ಮರಳಿದರು. ವಿರಾಟ್ ಕೊಹ್ಲಿ 43 ರನ್ (25 ಎಸೆತ, 5 ಫೋರ್, 1 ಸಿಕ್ಸ್) ಗಳಿಸಿ ಔಟಾದರು. ಬಳಿಕ ನಾಯಕ ರಜತ್ ಪಾಟಿದಾರ್ 33 ಎಸೆತಗಳಲ್ಲಿ 93 ರನ್ (9 ಸಿಕ್ಸರ್, 5 ಬೌಂಡರಿ) ಸಿಡಿಸಿ ಅಜೇಯರಾಗಿ ಉಳಿದರು.
ಉಳಿದಂತೆ ದೇವದತ್ ಪಡಿಕ್ಕಲ್ 30 ರನ್ (19 ಎಸೆತ, 5 ಫೋರ್), ಕೃಣಾಲ್ ಪಾಂಡ್ಯ 43 ರನ್ (28 ಎಸೆತ, 5 ಫೋರ್, 2 ಸಿಕ್ಸ್), ಜಿತೇಶ್ ಶರ್ಮಾ 15 ರನ್ (5 ಎಸೆತ, 1 ಫೋರ್, 1 ಸಿಕ್ಸ್) ಗಳಿಸಿದರು. 20 ಓವರ್ ಅಂತ್ಯಕ್ಕೆ ಆರ್‌ಸಿಬಿ 5 ವಿಕೆಟ್ ನಷ್ಟಕ್ಕೆ 254 ರನ್ ಕಲೆಹಾಕಿತು.
ಗುಜರಾತ್ ಪರ ಕಾಗಿಸೋ ರಬಾಡ ಹಾಗೂ ಜೇಸನ್ ಹೋಲ್ಡರ್ ತಲಾ 2 ವಿಕೆಟ್ ಕಿತ್ತರೆ, ಪ್ರಸಿದ್ಧ್ ಕೃಷ್ಣ 1 ವಿಕೆಟ್ ಪಡೆದರು.
