DharwadDistrictsKarnatakaLatestMain Post

ಸಿದ್ದರಾಮಯ್ಯ 4 ವರ್ಷ ಬಜೆಟ್ ಮಂಡಿಸುವಾಗ ನಾನು ಅದರ ಹಿನ್ನೆಲೆ ಗಾಯಕನಾಗಿದ್ದೆ: ಸಿಎಂ ಇಬ್ರಾಹಿಂ

ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯನವರು (Siddaramaiah) 4 ವರ್ಷ ಬಜೆಟ್ ಮಂಡಿಸಿದ ಸಂದರ್ಭ ನಾನು ಅವರ ಹಿನ್ನೆಲೆ ಗಾಯಕನಾಗಿದ್ದೆ. ಅವರು ಮಾತ್ರ ಮುಂದೆ ಬಾಯಿ ಅಲ್ಲಾಡಿಸುತ್ತಿದ್ದರು ಎಂದು ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (CM Ibrahim) ಹೇಳಿದರು.

ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮದವರೊಂದಿಗೆ ಮಾತನಾಡಿದ ಇಬ್ರಾಹಿಂ, ಸಿದ್ದರಾಮಯ್ಯ ಅವರು ಆಡಳಿತ ಮಾಡಿದ್ದು ಸ್ವಯಂ ಪ್ರೇರಿತ ಅಪರಾಧ. ಹೀಗಾಗಿ ಕ್ಷೇತ್ರ ಹುಡುಕಾಟ ಮಾಡುತ್ತಿದ್ದಾರೆ. ಸಿಎಂ ಇದ್ದವರು 40 ಸಾವಿರ ಮತಗಳ ಅಂತರದಲ್ಲಿ ಸೋತರು. ಅವರನ್ನು ಬಾದಾಮಿಗೆ ಕರೆದುಕೊಂಡು ಹೋಗಿದ್ದೇ ನಾನು ಎಂದು ತಿಳಿಸಿದರು.

ಇದೇ ವೇಳೆ ಪಂಚರತ್ನ ಯಾತ್ರೆ ಬಗ್ಗೆ ತಿಳಿಸಿದ ಇಬ್ರಾಹಿಂ, ಆರೋಗ್ಯ, ಶಿಕ್ಷಣ, ನೀರಾವರಿಗಾಗಿ ಪಂಚರತ್ನ ಯಾತ್ರೆ ನಡೆಯುತ್ತಿದೆ. ಯಾತ್ರೆ ಹಳೇ ಮೈಸೂರು ಭಾಗದಲ್ಲಿ ಜೋರಾಗಿದೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ 5 ವರ್ಷಗಳಲ್ಲಿ ಏನು ಮಾಡುತ್ತೇವೆ ಎಂಬುದನ್ನು ತಿಳಿಸುವುದೇ ಕಾರ್ಯಕ್ರಮದ ಉದ್ದೇಶ. ಒಂದು ವೇಳೆ 5 ವರ್ಷಗಳಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸದೇ ಹೋದರೆ 2028 ರಲ್ಲಿ ನಾವು ನಿಮ್ಮಲ್ಲಿ ಮತ ಕೇಳಲು ಬರುವುದಿಲ್ಲ ಎಂದು ಹೇಳಿಕೆ ನೀಡಿದರು. ಇದನ್ನೂ ಓದಿ: ವೋಟರ್ ಐಡಿ ಅಕ್ರಮದಲ್ಲಿ ಭಾಗಿಯಾಗಿರುವ ಮಂತ್ರಿಯನ್ನು ಬಂಧಿಸಿ: ಡಿಕೆಶಿ ಆಗ್ರಹ

ನಮ್ಮ ಪ್ರಣಾಳಿಕೆಯ ಎಲ್ಲಾ ಯೋಜನೆಗಳಿಗೆ 5 ವರ್ಷಗಳಲ್ಲಿ 5 ಲಕ್ಷ ಕೋಟಿ ರೂ. ಬೇಕಾಗುತ್ತದೆ. ಜನರು ಈ ಬಾರಿ ನಮಗೆ ಆಶೀರ್ವಾದ ಮಾಡಿದರೆ ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೆವೆ ಎಂದರು.

ಬಹು ನಿರೀಕ್ಷಿತ ಸ್ಟಾರ್ಟ್ಅಪ್ ಏನಾಗಿದೆ? ಮೋದಿಯವರು ಕೇವಲ ಕಾಟಾಚಾರಕ್ಕೆ ಮಾಡಿದ್ದಾರೆ. ಯುವಕರು ಉಪಯೋಗಕ್ಕಿಲ್ಲ. ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ ವಿಫಲವಾಗಿದೆ. ಬೊಮ್ಮಾಯಿ ಸರ್ಕಾರ ಕೇಶವ ಕೃಪಾ, ಬಸವ ಕೃಪಾದಲ್ಲಿ ಸಿಕ್ಕು ಒದ್ದಾಡುತ್ತಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಎಲ್ಲರ ಕೈನಲ್ಲೂ ದೊಣ್ಣೆ ಇತ್ತು – ಕಳ್ಳ, ಹುಚ್ಚು ನಾಯಿ ರೀತಿ ನನ್ನನ್ನು ಅಟ್ಟಾಡಿಸಿ ಹೊಡೆದರು: ಎಂ.ಪಿ ಕುಮಾರಸ್ವಾಮಿ

Live Tv

Leave a Reply

Your email address will not be published. Required fields are marked *

Back to top button