– ಕಾಲ್ತುಳಿತ ಸಂಭವಿಸುವ ಆತಂಕ ಇದೆ
– ಕೆಲವರು ಅಸ್ವಸ್ಥ, ಹಲವರು ವಾಪಸ್
ಬೆಂಗಳೂರು/ತಿರುವನಂತಪುರಂ: ಕೊಟ್ಟಿಯೂರು ದೇವಸ್ಥಾನದಲ್ಲಿ ವೈಶಾಖ ಮಹೋತ್ಸವದ ವೇಳೆ ಶಿವನ ದರ್ಶನಕ್ಕೆ ತೆರಳಿರುವ ಕರ್ನಾಟಕದ ಭಕ್ತರ ಮೇಲೆ ದುರ್ವರ್ತನೆ ನಡೆಯುತ್ತಿರುವ ಆರೋಪ ಕೇಳಿಬಂದಿದ್ದು, ಆಕ್ರೋಶ ವ್ಯಕ್ತವಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭದ್ರತಾ ಸಿಬ್ಬಂದಿ ಭಕ್ತರ ಮೇಲೆ ದುರ್ವತನೆ ತೋರುತ್ತಿದ್ದಾರೆ ಎಂದು ಕನ್ನಡಿಗರು ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ.

ಇಲ್ಲಿನ ಅವ್ಯವಸ್ಥೆ ಬಗ್ಗೆ ಬೆಂಗಳೂರಿನಿಂದ ತೆರಳಿದ್ದ ಭಕ್ತರೊಬ್ಬರು ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ್ದಾರೆ. ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನಕ್ಕೆ 8-10 ಘಂಟೆ ಕಾಯಲೇಬೇಕಾಗಿದೆ. 1,000 ರೂ. ವಿಐಪಿ ಟಿಕೆಟ್ ದೊಡ್ಡ ಸ್ಕ್ಯಾಮ್ ನಡೆಯುತ್ತಿದೆ. ಆಡಳಿತ ಮಂಡಳಿ ತುಂಬಾ ಕೆಟ್ಟದಾಗಿ ನಡೆದುಕೊಳ್ಳುತ್ತಿದೆ. ರೌಡಿಸಂ ಮಾಡ್ತಿದ್ದಾರೆ, ಹೊಡೆಯೋಕೆ ಬರ್ತಾರೆ, ಮಹಿಳಾ ಭಕ್ತರ ಮೇಲೆ ಕಾಲಿನಿಂದ ನೀರು ಎರಚುತ್ತಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕೊಟ್ಟಿಯೂರು ದೇವಸ್ಥಾನದಲ್ಲಿ ಕರ್ನಾಟಕ ಭಕ್ತರ ಮೇಲೆ ದುರ್ವರ್ತನೆ – ನೂಕುನುಗ್ಗಲು, ಭಾರೀ ಅವ್ಯವಸ್ಥೆ
ದರ್ಶನಕ್ಕೆ 5-6 ಕಿಮೀ ತನಕ ಭಕ್ತರು ಸಾಲುಗಟ್ಟಿ ನಿಂತಿದ್ದಾರೆ, 8-10 ಗಂಟೆ ಕಾಯಬೇಕಾಗಿದೆ. ತುಂಬಾ ಜನ ಸುಸ್ತಾಗಿದ್ರು. ಅವ್ರನ್ನ ಆಸ್ಪತ್ರೆಗೆ ಕರೆದುಕೊಂಡು ಹೋದ್ರು. ಕೆಲವರು ಮಧ್ಯೆದಲ್ಲಿಯೇ ವಾಪಸ್ ಆದ್ರು. ಕಾಲ್ತುಳಿತದ ಮುನ್ಸೂಚನೆ ಕಾಣಿಸ್ತಿದೆ. ಆರಾಮಾಗಿ ಬರಬೇಕು ಅಂದ್ರೆ ಕೊಟ್ಟಿಯೋರಿಗೆ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ.
View this post on Instagram
ಭಾರೀ ಅವ್ಯವಸ್ಥೆ
ಕೊಟ್ಟಿಯೂರಿಗೆ ಕರ್ನಾಟಕದಿಂದಲೂ ಸಾವಿರಾರು ಭಕ್ತರು ಭೇಟಿ ನೀಡಿ, ಶಿವನ ದರ್ಶನ ಪಡೆಯುತ್ತಿದ್ದಾರೆ. ಆದ್ರೆ ಈ ಬಾರಿ ರಾಜ್ಯದಿಂದ ಹೋಗಿರುವ ಕನ್ನಡಿಗರು ಇಲ್ಲಿಗೆ ಯಾವುದೇ ಕಾರಣಕ್ಕೂ ಬರಬೇಡಿ ಅಂತ ಮನವಿ ಮಾಡ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರು ಮನವಿ ಮಾಡಿಕೊಳ್ಳುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಇದನ್ನೂ ಓದಿ: ಅಡುಗೆ ಎಣ್ಣೆ ಪ್ಯಾಕೆಟ್ ಗಾತ್ರ ನಿಗದಿ ಮಾಡಿದ ಕೇಂದ್ರ – ಇಷ್ಟ ಬಂದಂತೆ ಕಂಪನಿಗಳು ಎಣ್ಣೆ ಮಾರುವಂತಿಲ್ಲ
ಕನ್ನಡಿಗರ ಆಕ್ರೋಶ
ಕೊಟ್ಟಿಯೂರಿನ ಶಿವ ಸನ್ನಿಧಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ, ದೇವರ ದರ್ಶನಕ್ಕೆ ಪರದಾಡುವಂತಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭದ್ರತಾ ಸಿಬ್ಬಂದಿ ವರ್ತನೆಗೆ ಕರ್ನಾಟಕದ ಭಕ್ತರು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋಗಳು, ದೇವಸ್ಥಾನ ಆಡಳಿತ ಮಂಡಳಿ ಹಾಗೂ ಭದ್ರತಾ ಸಿಬ್ಬಂದಿ ಮಹಿಳೆಯರನ್ನು ತಳ್ಳುತ್ತಿರುವುದು, ಭಕ್ತರ ಮೇಲೆ ಕಾಲಿನಿಂದ ನೀರು ಎರಚಿ ವಿಕೃತಿ ಮೆರೆಯುತ್ತಿರುವುದನ್ನು ತೋರಿಸುತ್ತಿವೆ. ಸರತಿ ಸಾಲಿನಲ್ಲಿ ತಳ್ಳಾಟ-ನೂಕಾಟಗಳು ನಡೆಯುತ್ತಲೇ ಇವೆ.
ವಸೂಲಿ ದಂಧೆ!
ಕನ್ನಡಿಗರೊಂದಿಗೆ ಅನಗತ್ಯವಾಗಿ ಕಠಿಣ ವರ್ತನೆ ತೋರಲಾಗುತ್ತಿದೆ. ದೇವರ ದರ್ಶನ ಪಡೆಯಲು ಸಾಲಿನಲ್ಲಿ ನಿಂತಿರುವಾಗ ನೂಕಾಟವಾಗುತ್ತಿದೆ. ಕರ್ನಾಟಕದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರೂ, ಕನ್ನಡಿಗರಿಗೆ ಸೂಕ್ತ ಗೌರವ ನೀಡಲಾಗುತ್ತಿಲ್ಲ. ಟಿಕೆಟ್‌ಗೆ 1000 ರೂ. ಕೊಟ್ಟರೂ ಸರಿಯಾಗಿ ದೇವರ ದರ್ಶನಕ್ಕೆ ಅವಕಾಶ ಸಿಗುತ್ತಿಲ್ಲ ಎಂಬ ಆರೋಪಗಳು ಸೋಶಿಯಲ್ ಮೀಡಿಯಾಗಳಲ್ಲಿ ಕೇಳಿಬರುತ್ತಿವೆ. ಇದನ್ನೂ ಓದಿ: ನಾಳೆ ದೆಹಲಿಯಲ್ಲಿ ಇಂಡಿಯಾ ಒಕ್ಕೂಟ ಸಭೆ – ಟಿಎಂಸಿ ಸೇರಿ 23 ಪಕ್ಷಗಳ ನಾಯಕರು ಭಾಗಿ
