– ಯಾವ್ದೇ ಕಾರಣಕ್ಕೂ ಇಲ್ಲಿಗೆ ಬರಬೇಡಿ ಅಂತ ಕನ್ನಡಿಗರ ಮನವಿ
ತಿರುವನಂತಪುರಂ/ಬೆಂಗಳೂರು: ಕೇರಳದ ಕೊಟ್ಟಿಯೂರು ದೇವಸ್ಥಾನವು (Kottiyoor Temple) ಪರಮಶಿವನಿಗೆ ಸಮರ್ಪಿತವಾದ ದೇವಾಲಯವಾಗಿದೆ. ಇಲ್ಲಿನ ವಿಶಿಷ್ಟ ಆಚರಣೆಯಿಂದಾಗಿ ಇದು ಐತಿಹಾಸಿಕ ಪ್ರಾಮುಖ್ಯತೆ ಪಡೆದುಕೊಂಡಿದೆ. ಸದ್ಯ ಕೊಟ್ಟಿಯೂರು ದೇವಸ್ಥಾನದಲ್ಲಿ ವೈಶಾಖ ಮಹೋತ್ಸವ ಶುರುವಾಗಿದ್ದು, ಕರ್ನಾಟಕದ ಭಕ್ತರ (Karnataka Devotees) ಮೇಲೆ ದುರ್ವರ್ತನೆ ತೋರುತ್ತಿರುವ ಆರೋಪ ಕೇಳಿಬಂದಿದೆ.

ಹೌದು. ಕೊಟ್ಟಿಯೂರಿಗೆ ಕರ್ನಾಟಕದಿಂದಲೂ ಸಾವಿರಾರು ಭಕ್ತರು ಭೇಟಿ ನೀಡಿ, ಶಿವನ ದರ್ಶನ ಪಡೆಯುತ್ತಿದ್ದಾರೆ. ಆದ್ರೆ ಈ ಬಾರಿ ರಾಜ್ಯದಿಂದ ಹೋಗಿರುವ ಕನ್ನಡಿಗರು (Kannadigas) ಇಲ್ಲಿಗೆ ಯಾವುದೇ ಕಾರಣಕ್ಕೂ ಬರಬೇಡಿ ಅಂತ ಮನವಿ ಮಾಡ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರು ಮನವಿ ಮಾಡಿಕೊಳ್ಳುತ್ತಿರುವ ವಿಡಿಯೋಗಳು ವೈರಲ್ ಆಗಿವೆ.
View this post on Instagram
ಭಾರೀ ಅವ್ಯವಸ್ಥೆ; ಕನ್ನಡಿಗರ ಆಕ್ರೋಶ
ಕೊಟ್ಟಿಯೂರಿನ ಶಿವ ಸನ್ನಿಧಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ, ದೇವರ ದರ್ಶನಕ್ಕೆ ಪರದಾಡುವಂತಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭದ್ರತಾ ಸಿಬ್ಬಂದಿ ವರ್ತನೆಗೆ ಕರ್ನಾಟಕದ ಭಕ್ತರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಅಡುಗೆ ಎಣ್ಣೆ ಪ್ಯಾಕೆಟ್ ಗಾತ್ರ ನಿಗದಿ ಮಾಡಿದ ಕೇಂದ್ರ – ಇಷ್ಟ ಬಂದಂತೆ ಕಂಪನಿಗಳು ಎಣ್ಣೆ ಮಾರುವಂತಿಲ್ಲ

ಸದ್ಯ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋಗಳು, ದೇವಸ್ಥಾನ ಆಡಳಿತ ಮಂಡಳಿ ಹಾಗೂ ಭದ್ರತಾ ಸಿಬ್ಬಂದಿ ಮಹಿಳೆಯರನ್ನು ತಳ್ಳುತ್ತಿರುವುದು, ಭಕ್ತರ ಮೇಲೆ ಕಾಲಿನಿಂದ ನೀರು ಎರಚಿ ವಿಕೃತಿ ಮೆರೆಯುತ್ತಿರುವುದನ್ನು ತೋರಿಸುತ್ತಿವೆ. ಸರತಿ ಸಾಲಿನಲ್ಲಿ ತಳ್ಳಾಟ-ನೂಕಾಟಗಳು ನಡೆಯುತ್ತಲೇ ಇವೆ. ಇದನ್ನೂ ಓದಿ: ಇವರ ಮಕ್ಕಳು, ಅವರ ಮಕ್ಕಳೇ ಕನಸು ಕಾಣಬೇಕು ಅಂತೇನಿಲ್ಲ: ಸುದೀಪ್ ನೆಪೋಟಿಸಂ ಹೇಳಿಕೆಗೆ ಶಿವಣ್ಣ ರಿಯಾಕ್ಷನ್
View this post on Instagram
ವಸೂಲಿ ದಂಧೆ!
ಕನ್ನಡಿಗರೊಂದಿಗೆ ಅನಗತ್ಯವಾಗಿ ಕಠಿಣ ವರ್ತನೆ ತೋರಲಾಗುತ್ತಿದೆ. ದೇವರ ದರ್ಶನ ಪಡೆಯಲು ಸಾಲಿನಲ್ಲಿ ನಿಂತಿರುವಾಗ ನೂಕಾಟವಾಗುತ್ತಿದೆ. ಕರ್ನಾಟಕದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರೂ, ಕನ್ನಡಿಗರಿಗೆ ಸೂಕ್ತ ಗೌರವ ನೀಡಲಾಗುತ್ತಿಲ್ಲ. ಟಿಕೆಟ್‌ಗೆ 1000 ರೂ. ಕೊಟ್ಟರೂ ಸರಿಯಾಗಿ ದೇವರ ದರ್ಶನಕ್ಕೆ ಅವಕಾಶ ಸಿಗುತ್ತಿಲ್ಲ ಎಂಬ ಆರೋಪಗಳು ಸೋಶಿಯಲ್ ಮೀಡಿಯಾಗಳಲ್ಲಿ ಕೇಳಿಬರುತ್ತಿವೆ.
View this post on Instagram
ಕಳೆದ ವರ್ಷ ಕೇರಳದ ಕೊಟ್ಟಿಯೂರು ಶಿವ ದೇವಸ್ಥಾನ ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿತ್ತು. ಇದಾದ ನಂತರ ಕರ್ನಾಟಕದ ಹಲವು ಭಾಗಗಳಿಂದ ಭಕ್ತರು ಕೊಟ್ಟಿಯೂರಿಗೆ ಹೋಗಿ ದೇವರ ದರ್ಶನ ಪಡೆದಿದ್ದರು. ಈ ವರ್ಷ ದೇವಸ್ಥಾನ ಓಪನ್ ಆಗುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಕನ್ನಡಿಗರು ಕೊಟ್ಟಿಯೂರಿಗೆ ಹೋಗಿದ್ದಾರೆ. ಆದರೆ, ಕೊಟ್ಟಿಯೂರಿನ ದೇವಸ್ಥಾನದ ಆಡಳಿತ ಮತ್ತು ಭದ್ರತಾ ಸಿಬ್ಬಂದಿಯ ವರ್ತನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ಹೊರಹಾಕಿದ್ದು, ಯಾವುದೇ ಕಾರಣಕ್ಕೂ ಇಲ್ಲಿಗೆ ಬರಬೇಡಿ ಎಂದು ಮನವಿ ಮಾಡಿಕೊಳ್ತಿದ್ದಾರೆ. ಇದನ್ನೂ ಓದಿ: TVKಯ ಮೊದಲ ರಾಜ್ಯಸಭಾ ಸ್ಥಾನ ಕಾಂಗ್ರೆಸ್ ಪಾಲು
