ರಾಮನಗರ: ವೋಟರ್ ಐಡಿ ಅಕ್ರಮ (Voters Survey) ಪ್ರಕರಣದ ಒಬ್ಬ ಕಿಂಗ್ ಪಿನ್ ಬಂಧನ ಮಾಡಿದ್ರೆ ಸಾಲದು. ಇದರ ಹಿಂದೆ ಯಾರಿದ್ದಾರೆ? ಯಾವ ರಾಜಕಾರಣಿ ಇದ್ದಾರೆ? ಯಾವ ಮಂತ್ರಿ ಇದ್ದಾರೆ ಎಲ್ಲವೂ ತನಿಖೆ ಆಗಬೇಕು. ಮುಖ್ಯಮಂತ್ರಿ, ಜಿಲ್ಲಾ ಮಂತ್ರಿಗಳೂ ಪ್ರಕರಣದಲ್ಲಿ ಭಾಗಿ ಆಗಿದ್ದರೆ ಅವರ ಬಂಧನ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K Shivakumar) ಆಗ್ರಹಿಸಿದ್ದಾರೆ.
Advertisement
ಕನಕಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿಲುಮೆ (Chilume) ಸಂಸ್ಥೆಯಲ್ಲಿ ಕೆಲಸಕ್ಕೆ ಬಂದಿರುವ ಪಾಪ ಹುಡುಗ ಏನು ಮಾಡ್ತಾನೆ. ಅಗ್ರಿಮೆಂಟ್ ಮಾಡಿಕೊಟ್ಟವರು ಯಾರು? ಆದೇಶ ಕೊಟ್ಟವರು ಯಾರು? ಮೇಲಿನವರಿಂದ ಆದೇಶ ಬಂತು ಅಂತ ಅಲ್ಲಿನ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಅಂದಮೇಲೆ ಆ ಮೇಲಿನವರು ಅಂದ್ರೆ ಯಾರು? ಮುಖ್ಯಮಂತ್ರಿಗಳಾ? ಅಥವಾ ಸಚಿವರಾ ಎಂಬುದು ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಚಿಲುಮೆ ವಿರುದ್ಧ ಕೇಸ್: ತನಿಖೆ ನಡೆಸಲು ಸರ್ಕಾರಕ್ಕೆ ಅಧಿಕಾರವಿಲ್ಲ ಎಂದ ಚುನಾವಣಾ ಆಯೋಗ
Advertisement
Advertisement
ರಾಜ್ಯದ ಜನರನ್ನು ಡಿಕೆಶಿ ಮತ್ತು ಸಿದ್ದರಾಮಯ್ಯ ದಿಕ್ಕು ತಪ್ಪಿಸುತ್ತಿದ್ದಾರೆ ಎಂಬ ಅಶ್ವಥ್ ನಾರಾಯಣ (Ashwathnarayan) ಆರೋಪ ವಿಚಾರವಾಗಿ ಮಾತನಾಡಿ, ಅಲ್ಲಿ ನನ್ನ ಚೆಕ್ ಸಿಕ್ಕಿದೆಯಾ? ನಾನೇನಾದ್ರು ಕೆಲಸ ಮಾಡು ಅಂತ ಹೇಳಿದ್ನಾ? ನಮ್ಮ ಕಾಲದಲ್ಲಿ ನಾವೇನಾದ್ರು ಮಾಡಿದ್ರೆ ನಮ್ಮ ಮೇಲೂ ತನಿಖೆ ಆಗಲಿ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಎಲ್ಲರ ಕೈನಲ್ಲೂ ದೊಣ್ಣೆ ಇತ್ತು – ಕಳ್ಳ, ಹುಚ್ಚು ನಾಯಿ ರೀತಿ ನನ್ನನ್ನು ಅಟ್ಟಾಡಿಸಿ ಹೊಡೆದರು: ಎಂ.ಪಿ ಕುಮಾರಸ್ವಾಮಿ