ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕಳೆದ ವಾರ ನೆದರ್‌ಲ್ಯಾಂಡ್‌ನ ಅಮೆರಿಕ ರಾಯಭಾರಿಯಾಗಿ ಭಾರತ ಮೂಲದ ಸಾಮಾಜಿಕ ಕಾರ್ಯಕರ್ತೆ ಶೇಫಾಲಿ ರಜ್ದಾನ್ ದುಗ್ಗಾಲ್‌ರ ನಾಮನಿರ್ದೇಶನ ಮಾಡಿದ್ದರು. ಇದೀಗ ಬೈಡೆನ್ ಉತ್ತರ ಆಫ್ರಿಕಾದ ಮೊರೊಕ್ಕೊ ದೇಶಕ್ಕೂ ಅಮೆರಿಕ ರಾಯಭಾರಿಯಾಗಿ ಭಾರತೀಯ ಮೂಲದ ವ್ಯಕ್ತಿಯೊಬ್ಬರನ್ನು ನಾಮನಿರ್ದೇಶನ ಮಾಡಿದ್ದಾರೆ.
ಜೋ ಬೈಡೆನ್ ಕೇವಲ 1 ವಾರದಲ್ಲಿ ಇಬ್ಬರು ಭಾರತೀಯ ಮೂಲದ ವ್ಯಕ್ತಿಗಳನ್ನು ರಾಯಭಾರಿಯಾಗಿ ನಾಮನಿರ್ದೇಶನ ಮಾಡಿದ್ದಾರೆ. ಪುನೀತ್ ತಲ್ವಾರ್ ಅಮೆರಿಕ ರಾಯಭಾರಿಯಾಗಿ ನಾಮನಿರ್ದೇಶನಗೊಂಡ ಭಾರತೀಯ ಮೂಲದ 2ನೇ ವ್ಯಕ್ತಿಯಾಗಿದ್ದಾರೆ. ಇದನ್ನೂ ಓದಿ: ನೆದರ್‌ಲ್ಯಾಂಡ್‌ನ ಅಮೆರಿಕ ರಾಯಭಾರಿಯಾಗಿ ಭಾರತ ಮೂಲದ ಮಹಿಳೆ ನಾಮನಿರ್ದೇಶನ
Advertisement
Advertisement
ಪುನೀತ್ ತಲ್ವಾರ್ ಯಾರು?
ಪುನೀತ್ ತಲ್ವಾರ್ ವಿದೇಶಾಂಗ ಇಲಾಖೆ, ಶ್ವೇತಭವನ ಮತ್ತು ಸೆನೆಟ್‌ನಲ್ಲಿ ಹಿರಿಯ ರಾಷ್ಟ್ರೀಯ ಭದ್ರತೆ ಹಾಗೂ ವಿದೇಶಾಂಗ ನೀತಿಯಲ್ಲಿ ಸ್ಥಾನಗಳನ್ನು ಹೊಂದಿದ್ದಾರೆ. ಸದ್ಯ ತಲ್ವಾರ್ ಸ್ಟೇಟ್ ಡಿಪಾರ್ಟ್ಮೆಂಟ್‌ನಲ್ಲಿ ಹಿರಿಯ ಸಲಹೆಗಾರರಾಗಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
Advertisement
ತಲ್ವಾರ್ ಈ ಹಿಂದೆ ರಾಜಕೀಯ-ಮಿಲಿಟರಿ ವ್ಯವಹಾರಗಳ ಸಹಾಯಕ ರಾಜ್ಯ ಕಾರ್ಯದರ್ಶಿಯಾಗಿ, ಅಧ್ಯಕ್ಷರ ವಿಶೇಷ ಸಹಾಯಕ, ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಹಿರಿಯ ನಿರ್ದೇಶಕ ಹಾಗೂ ವಿಶ್ವಸಂಸ್ಥೆಯ ಸೆನೆಟ್‌ನಲ್ಲಿ ವಿದೇಶಿ ಸಂಬಂಧಗಳ ಸಮಿತಿಯಲ್ಲಿ ಹಿರಿಯ ವೃತ್ತಿಪರ ಸಿಬ್ಬಂದಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಭಾರತೀಯ ಮೂಲದ ಗೆಳತಿ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗ್ಲೆನ್ ಮ್ಯಾಕ್ಸ್‌ವೆಲ್
Advertisement
ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಬಿಎಸ್ ಪದವಿಯನ್ನು ಪಡೆದು, ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ವ್ಯವಹಾರ (ಇಂಟರ್‌ನ್ಯಾಷನಲ್ ಅಫರ‍್ಸ್)ಗಳಲ್ಲಿ ಎಂಎ ವ್ಯಾಸಂಗ ಮಾಡಿದ್ದಾರೆ.
ಮಾರ್ಚ್ 11 ರಂದು ಬೈಡೆನ್ ಭಾರತೀಯ ಮೂಲದ ರಾಜಕೀಯ ಕಾರ್ಯಕರ್ತೆ ಶೆಫಾಲಿ ರಜ್ದಾನ್ ದುಗ್ಗಾಲ್ ಅವರನ್ನು ನೆದರ್‌ಲ್ಯಾಂಡ್‌ನ ಅಮೆರಿಕ ರಾಯಭಾರಿಯಾಗಿ ನಾಮನಿರ್ದೇಶನ ಮಾಡಿದ್ದರು. ಶೆಫಾಲಿ ಭಾರತದ ಕಾಶ್ಮೀರದಿಂದ ಅಮೆರಿಕಗೆ ತಮ್ಮ ಸಣ್ಣ ಪ್ರಾಯದಲ್ಲಿಯೇ ವಲಸೆ ಹೋಗಿದ್ದರು. ಶೆಫಾಲಿ ಸಿನ್ಸಿನಾಟಿ, ಚಿಕಾಗೋ, ನ್ಯೂಯಾರ್ಕ್ ಹಾಗೂ ಬೋಸ್ಟನ್ ನಗರಗಳಲ್ಲಿ ಬೆಳೆದಿದ್ದರು.