ʻಕಾಲಾ ಹಿರಣ್ʼ (Kala Hiran) ಚಿತ್ರ ತಂಡದ ವಿರುದ್ಧ ನಟ ಸಲ್ಮಾನ್ ಖಾನ್ (Salman Khan) ಕೋರ್ಟ್ ಮೆಟ್ಟಿಲೇರಿದ್ದಾರೆ. ಚಿತ್ರದ ಬಿಡುಗಡೆಗೆ ತಡೆ ಕೋರಿ ನಟ ಸಲ್ಮಾನ್ ಖಾನ್ ದೆಹಲಿ ಹೈಕೋರ್ಟ್‌ಗೆ (Delhi High Court) ಅರ್ಜಿ ಸಲ್ಲಿಸಿದ್ದಾರೆ.
ʻಕಾಲಾ ಹಿರಣ್ʼ ಚಿತ್ರ ಸಲ್ಮಾನ್ ಖಾನ್ ಅವರ ಕೃಷ್ಣಮೃಗ ಬೇಟೆ ಪ್ರಕರಣವನ್ನು ಆಧರಿಸಿದೆ. ಇದು ಅವರ ವ್ಯಕ್ತಿತ್ವ ಹಕ್ಕುಗಳನ್ನು ರಕ್ಷಿಸುವ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ. ಅರ್ಜಿಯ ಕುರಿತು ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿ, ನಿರ್ಮಾಪಕರ ನಿಲುವನ್ನು ಕೋರಿದೆ. ಇದನ್ನೂ ಓದಿ: ಮೂಸೆವಾಲಾ ರೀತಿಯಲ್ಲೇ ಹತ್ಯೆ ಮಾಡೋದಾಗಿ ಸಲ್ಮಾನ್‌ಖಾನ್‌ಗೆ ಬೆದರಿಕೆ – ಕೃಷ್ಣಮೃಗ ಬೇಟೆಯೇ ಮುಳುವಾಯ್ತ?
ಸಲ್ಮಾನ್ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರ ರಜಾ ಪೀಠವು ಅಮಿತ್ ಜಾನಿ, ಅಕ್ಷಯ್ ಪಾಂಡೆ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿ, ಜೂನ್ 19 ರಂದು ವಿಚಾರಣೆ ನಿಗದಿಪಡಿಸಿದೆ.
1998ರಲ್ಲಿ `ಹಮ್ ಸಾಥ್ ಸಾಥ್ ಹೈ’ ಚಿತ್ರದ ಶೂಟಿಂಗ್ ಸಂದರ್ಭದ ಬಿಡುವಿನ ವೇಳೆ ಜೋಧ್‌ಪುರದಲ್ಲಿ ಸಲ್ಮಾನ್ ಖಾನ್, ಸೋನಾಲಿ ಬೇಂದ್ರೆ, ಟಬು, ನೀಲಂ ಹಾಗೂ ಸೈಫ್ ಅಲಿ ಖಾನ್ ವಿರುದ್ಧ ಕೃಷ್ಣಮೃಗ ಬೇಟೆ ಆಡಿದ ಆರೋಪ ಕೇಳಿಬಂದಿತ್ತು. ಈ ಪ್ರಕರಣವು ರಾಜಸ್ಥಾನ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ.
ರುವ ಕೇಸ್ ವಿಚಾರಣೆ ಈಗಲೂ ಚಾಲ್ತಿಯಲ್ಲಿದೆ. ಇನ್ನು ಇದೇ ವಿಚಾರಕ್ಕೆ ಸಲ್ಮಾನ್ ಮೇಲೆ ಹಗೆ ತೀರಿಸಿಕೊಳ್ಳಲ್ಲು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹಲವು ಬಾರಿ ದಾಳಿ ಮಾಡಲು ಯತ್ನಿಸುತ್ತಲೇ ಇದೆ. ಈ ಎಲ್ಲಾ ಘಟನೆಗಳ ಚಿತ್ರಣ ಎನ್ನಲಾದ ಕಥೆ “ಕಾಲಾ ಹಿರಣ್” ಚಿತ್ರದಲ್ಲಿ ಅಡಕವಾಗಿದೆ ಎಂಬ ಸುಳಿವಿನ ಆಧಾರದ ಮೇಲೆ ಸಲ್ಮಾನ್ ಖಾನ್ ಈ ಚಿತ್ರಕ್ಕೆ ತಡೆ ತಂದಿದ್ದಾರೆ.
