ವಯನಾಡ್: ಸುರಂಗ ರಸ್ತೆ ನಿರ್ಮಾಣ ಪ್ರದೇಶದಿಂದ ಮಣ್ಣು ತೆಗೆಯಲು ಜೂನ್ 20 ರಂದೇ ಗುತ್ತಿಗೆದಾರರಿಗೆ ಆದೇಶ ಹೊರಡಿಸಲಾಗಿತ್ತು. ಆದ್ರೆ ಅವರು ನಿಯಮ ಪಾಲಿಸದ ಕಾರಣ ಭೂಕುಸಿತ (Wayanad Landslide) ಸಂಭವಿಸಿದೆ ಎಂದು ಕೇರಳ ಮುಖ್ಯಮಂತ್ರಿ ವಿ.ಡಿ ಸತೀಶನ್ (VD Satheesan) ಹೇಳಿದ್ದಾರೆ.
ಮೆಪ್ಪಾಡಿ (Meppady) ಭೂಕುಸಿತ ದುರಂತದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿರುವ ಸತೀಶನ್, ಮೀನಂಗಡಿಯ, ಕೋಝಿಕ್ಕೋಡ್‌ನ ರಕ್ಷಣಾ ತಂಡಗಳು ಸ್ಥಳಕ್ಕೆ ತೆರಳಿವೆ. ಸುರಂಗ ರಸ್ತೆಯ ಬಳಿ ಉಂಟಾದ ಭೂಕುಸಿತದಲ್ಲಿ ರಕ್ಷಣಾ ಕಾರ್ಯಾಚರಣೆ ವೇಗವಾಗಿ ನಡೆಯುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಒಬ್ಬರು ಸಾವನ್ನಪ್ಪಿದ್ದಾರೆ, 7 ಜನ ಕಾಣೆಯಾಗಿದ್ದಾರೆ. 7 ಮಂದಿಯನ್ನ ರಕ್ಷಣೆ ಮಾಡಲಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
Heavy Rain triggered landslide in kerala’s wayanad
May God protect and safe everyone
Pray for Wayanad 🙏
Credits : To the respective owner #Kerala #Wayanadlandslide@praddy06 @ChennaiRains @RainStorm_TN @Deltarains pic.twitter.com/AkbhXG7wL6— Shahidarafi (@Shahidarafi51) July 7, 2026
ಸುರಂಗ ರಸ್ತೆ ನಿರ್ಮಾಣ (Wayanad Tunnel Road Project) ಪ್ರದೇಶದಿಂದ ಮಣ್ಣನ್ನ ತೆಗೆಯಲು ಗುತ್ತಿಗೆದಾರರಿಗೆ ಜೂನ್ 20 ರಂದೇ ಹೇಳಲಾಗಿತ್ತು. ವಿಪತ್ತು ನಿರ್ವಹಣಾ ಇಲಾಖೆ ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿಗಳು ಈ ಸಂಬಂಧ ಆದೇಶ ಹೊರಡಿಸಿದ್ದರು. ಲೋಕೋಪಯೋಗಿ ಇಲಾಖೆ ಸಚಿವರೂ ಗುತ್ತಿಗೆದಾರರಿಗೆ ತಾಕೀತು ಮಾಡಿದ್ದರು. ಆದ್ರೆ ಗುತ್ತಿಗೆದಾರರು ಆದೇಶ ಪಾಲಿಸಿಲ್ಲ. ಇದರ ಪರಿಣಾಮ ಇಂದು ದುರಂತ ಸಂಭವಿಸಿದೆ ಎಂದು ವಿವರಿಸಿದ್ದಾರೆ.
225 ಸೆಂ.ಮೀ ಮಳೆ
ಇನ್ನೂ ಈವರೆಗೆ ವಯನಾಡ್‌ನ ಈ ಪ್ರದೇಶದಲ್ಲಿ 225 ಸೆಂ.ಮೀಟರ್ ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ 265 ಮಿ.ಮಿ. ಮಳೆಯಾಗಿದೆ. ಸ್ಥಳದಲ್ಲಿ 8 ಎಸ್ಕಲೇಟರ್‌ಗಳಿವೆ. ಇದನ್ನು ಬಳಸಿಕೊಂಡು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಒಟ್ಟಿನಲ್ಲಿ ಇದು ದುರದೃಷ್ಟಕರ ದುರಂತ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
Absolutely terrifying CCTV visuals of Wayanad Landslide 😱
Look at the big tanker truck getting thrown off and people standing near that narrowly escaping.#wayanad #landslide #exclusive pic.twitter.com/eGyeBAzS8y
— Chennai Weatherman (@chennaisweather) July 7, 2026
ʻಭೂಕುಸಿತ ಮಾನವ ನಿರ್ಮಿತʼ
ಇನ್ನೂ ಈ ಬಗ್ಗೆ ಕಂದಾಯ ಸಚಿವ ಟಿ. ಸಿದ್ದೀಕ್, ಸುರಂಗ ಯೋಜನೆಯ ಕಾಮಗಾರಿ ನಡೆಯುತ್ತಿರುವ ವಯನಾಡ್‌ನ ಮೇಲ್ಪಾಡಿಯ ಕಲ್ಲಾಡಿಯಲ್ಲಿ ನಡೆದ ಭೂಕುಸಿತವು ‘ಮಾನವ ನಿರ್ಮಿತ’ ಎಂದು ಕರೆದಿದ್ದಾರೆ.
ಇದು ನೈಸರ್ಗಿಕ ಭೂಕುಸಿತವಲ್ಲ, ಮಾನವ ನಿರ್ಮಿತ. ಅಗೆದು ತೆಗೆಯಲಾದ ಮಣ್ಣನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡಿದ್ದೇ ದುರಂತಕ್ಕೆ ಕಾರಣ. ಘಟನೆಯಲ್ಲಿ ಕಿರಣ್ ಕುಮಾರ್, ದಿಲೀಪ್, ಸೂರಜ್ ಯಾದವ್, ಸಂಜಯ್ ಠಾಕೂರ್, ರಜನೀಶ್ ಹಾಗೂ ತನ್ಮಯ್ ಘೋಷ್ ಗಾಯಗೊಂಡಿದ್ದು, ಅವರನ್ನು ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಸಚಿವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
