ರಾಂಚಿ: 1 ಕೋಟಿ ರೂ. ಬಹುಮಾನ ಹೊಂದಿದ್ದ ಮೋಸ್ಟ್ ವಾಂಟೆಡ್ ಮಾವೋವಾದಿಯನ್ನು (Maoist) ಪೊಲೀಸರು ಬಂಧಿಸಿದ್ದಾರೆ.
ನಕ್ಸಲರ ವಿರುದ್ಧದ ಕಾರ್ಯಾಚರಣೆ ವೇಳೆ ಪೊಲೀಸರು ಜಾರ್ಖಂಡ್‌ನ (Jharkhand) ಧನ್‌ಬಾದ್ (Dhanbad) ಜಿಲ್ಲೆಯಲ್ಲಿ 1 ಕೋಟಿ ರೂ. ಬಹುಮಾನ ಹೊಂದಿದ್ದ ಮಾವೋವಾದಿ ನಾಯಕ ಮಿಸಿರ್ ಬೆಸ್ರಾನನ್ನು (Misir Besra) ಬಂಧಿಸಿದ್ದಾರೆ. ದೀರ್ಘಕಾಲದಿಂದ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಹಾಗೂ ದೇಶದ ಮೋಸ್ಟ್ ವಾಂಟೆಡ್ ಬಂಡುಕೋರರಲ್ಲಿ ಒಬ್ಬನಾಗಿದ್ದ. ಸದ್ಯ ಈತನ ಬಂಧನವನ್ನು ಭದ್ರತಾ ಅಧಿಕಾರಿಗಳು ಎಲ್‌ಡಬ್ಲ್ಯೂಇ ನಿಗ್ರಹ ಅಭಿಯಾನದ ಐತಿಹಾಸಿಕ ಸಾಧನೆ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ:ವರ್ತೂರು ಗ್ರೌಂಡ್‌ನಲ್ಲಿ ವ್ಯಕ್ತಿಯ ರುಂಡ ಪತ್ತೆ – ಪೊಲೀಸರಿಂದ ತನಿಖೆ
ಪೊಲೀಸರ ಮಾಹಿತಿ ಪ್ರಕಾರ, ಮಿಸಿರ್ ಬೆಸ್ರಾನ ಬಂಧನದಿಂದ ಈ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆಗಳು ಗಣನೀಯವಾಗಿ ದುರ್ಬಲಗೊಳ್ಳಬಹುದು ಎಂದಿದ್ದಾರೆ. ಸದ್ಯ ಭದ್ರತಾ ಪಡೆಗಳು ಜಾರ್ಖಂಡ್ ಹಾಗೂ ನೆರೆಯ ರಾಜ್ಯಗಳಲ್ಲಿ ನಿಷೇಧಿತ ಸಂಘಟನೆ ಮತ್ತು ಕಾರ್ಯಾಚರಣೆಯ ನೆಟ್‌ವರ್ಕ್ ಅನ್ನು ಮಟ್ಟಹಾಕಲು ತೀವ್ರ ಕಾರ್ಯಾಚರಣೆ ನಡೆಸುತ್ತಿವೆ.
ಇದಕ್ಕೂ ಮುನ್ನ 2026ರ ಜನವರಿಯಲ್ಲಿ ಸಾರಂಡಾ ಅರಣ್ಯದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು 1 ಕೋಟಿ ರೂ. ಬಹುಮಾನ ಹೊಂದಿದ್ದ ನಕ್ಸಲ್ ಕಮಾಂಡರ್ ಅನಾಲ್ ದಾ ಅಲಿಯಾಸ್ ತೂಫಾನ್‌ನನ್ನು ಹತ್ಯೆಗೈದಿದ್ದರು. ಕೋಬ್ರಾ ಬೆಟಾಲಿಯನ್ ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ನಡೆಸಿದ ಈ ಕಾರ್ಯಾಚರಣೆಯಲ್ಲಿ ಎಂಟು ನಕ್ಸಲರು ಹತರಾಗಿದ್ದರು.ಇದನ್ನೂ ಓದಿ: ಜಪಾನ್‌ನಲ್ಲಿ 7.1 ತೀವ್ರತೆಯ ಭೂಕಂಪ – ನೆಲಕ್ಕುರುಳಿದ ಕಟ್ಟಡಗಳು, 13 ಜನ ಸಾವು
