– ಕುಡಿಯುವ ನೀರಿಗೆ ತೊಂದರೆ ಇಲ್ಲ, ಜನರ ಹಿತ ಕಾಪಾಡ್ತೇವೆ ಅಂತ ಭರವಸೆ
ಬೆಂಗಳೂರು: ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ತೀರ್ಮಾನ ನಮಗೆ ಸಮಾಧಾನ ತಂದಿಲ್ಲ. ಈ ಬಗ್ಗೆ ಸಿಎಂ ನಿರ್ದೇಶನದ ಮೇರೆಗೆ ನಾವು ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ತಿಳಿಸಿದ್ದಾರೆ.
ತಮಿಳುನಾಡಿಗೆ 15 ದಿನಗಳ ಕಾಲ ನಿತ್ಯ 3,500 ಕ್ಯೂಸೆಕ್‌ನಂತೆ ನೀರು ಹರಿಸಬೇಕೆಂಬ CWRC ಆದೇಶ ಕುರಿತು ʻಪಬ್ಲಿಕ್ ಟಿವಿʼ ಜೊತೆಗೆ ಅವರು ಮಾತನಾಡಿದರು.

ಕಾವೇರಿ ನೀರು ನಿರ್ವಹಣಾ ಸಮಿತಿ ತೀರ್ಮಾನ ನಮಗೆ ಸಮಾಧಾನ ತಂದಿಲ್ಲ. ಸಿಎಂ ಡಿಕೆ ಶಿವಕುಮಾರ್ ಅವರು ಅಪೀಲ್ ಹೋಗಿ ಅಂತಾ ಹೇಳಿದ್ದಾರೆ. ಹಾಗಾಗಿ ನಾವು ಅಪೀಲ್ ಹೋಗ್ತೇವೆ. ಈಗಿರುವ ನೀರಲ್ಲಿ ಡೆಡ್ ಸ್ಟೋರೇಜ್ ಲೆಕ್ಕ ತಗೋಳ್ಳೋಕೆ ಆಗಲ್ಲ. ಕುಡಿಯುವ ನೀರಿಗೆ ಏನೂ ಸಮಸ್ಯೆ ಆಗಲ್ಲ, ಕುಡಿಯೋ ನೀರನ್ನ ಉಳಿಸಿಕೊಳ್ತೇವೆ. ಡೆಡ್ ಸ್ಟೋರೆಜ್ ಎಷ್ಟಿದೆ? ಕುಡಿಯುವ ನೀರು ಎಷ್ಟಿದೆ ಅಂತ ನೋಡಬೇಕು. ಬೆಂಗಳೂರು, ಮಂಡ್ಯ, ರಾಮನಗರ, ಚನ್ನಪಟ್ಟಣ, ಎಲ್ಲಾ ಕಡೆಗು ಕುಡಿಯೋ ನೀರು ಬೇಕು. ಹೀಗಾಗಿ ಸಮಿತಿ ತೀರ್ಮಾನ ಸಮಾಧಾನ ತಂದಿಲ್ಲ ಎಂದು ತಿಳಿಸಿದ್ದಾರೆ.

ಇನ್ನೂ ಬಿಜೆಪಿ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಅವರಿಗೆ ಕಾಮನ್ ಸೆನ್ಸ್ ಇಲ್ಲದೇ ಮಾತಾಡ್ತಾ ಇದ್ದಾರೆ. ಬಿಜೆಪಿ ಅವರಿಗೆ ಸಾಮಾನ್ಯ ಜ್ಞಾನ ಇಲ್ಲ, ಬಿಳಿಗುಂಡ್ಲು ಬಳಿ ಹೋಗಿ ನೋಡಲಿ ಎಷ್ಟು ಬಿಟ್ಟಿದ್ದೇವೆ. ಬರೀ 3,500 ಕ್ಯೂಸೆಕ್ ಅಷ್ಟೇ ಬಿಟ್ಟಿರೋದು. ಸದ್ಯಕ್ಕೆ ಕುಡಿಯುವ ನೀರಿಗೆ ಏನೂ ಸಮಸ್ಯೆ ಇಲ್ಲ ಎಂದಿದ್ದಾರೆ.
