ಚಾಮರಾಜನಗರ: ಜಲಕ್ಷಾಮದ ಭೀತಿಯಲ್ಲಿದ್ದ ಹನೂರು ಭಾಗದಲ್ಲಿ ಉತ್ತಮ (Rain) ಮಳೆಯಾಗಿದೆ. ಮಳೆಯಿಂದ ಹಲವು ಕೆರೆ ಕಟ್ಟೆಗಳು ಭರ್ತಿಯಾಗಿವೆ.
ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿಲ್ಲದೇ ಜನ ಪರದಾಡುತ್ತಿದ್ದರು. ಎರಡೇ ದಿನ ಸುರಿದ ಮಳೆಗೆ ಕೆರೆ ಕಟ್ಟೆ ತುಂಬಿದ್ದು, ಜನ ನಿಟ್ಟುಸಿರು ಬಿಟ್ಟಿದ್ದಾರೆ. ಹನೂರು (Hanur) ತಾಲೂಕಿನ ಮಣಗಳ್ಳಿ ಗ್ರಾಮದ ದೊಡ್ಡಹಳ್ಳ, ಚಿಂಚಳ್ಳಿ, ಚಂಗವಾಡಿ, ಬೈರನತ್ತ, ಎಲ್ಲೆ ಮಾಳ ಸೇರಿದಂತೆ ಹಲವೆಡೆ ಕಟ್ಟೆಗಳು ಭರ್ತಿಯಾಗಿವೆ. ಇದನ್ನೂ ಓದಿ: ತ.ನಾಡಿಗೆ ಕಾವೇರಿ ಹರಿವನ್ನು 6ರಿಂದ 3 ಸಾವಿರಕ್ಕೆ ಇಳಿಸಲು CWMAಗೆ ಕರ್ನಾಟಕ ಮನವಿ

ಭಾರೀ ಮಳೆಯಿಂದ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಮಣಗಳ್ಳಿ-ಬಂಡಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸೇತುವೆಗೆ ಹಾನಿಯಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಮುಂಗಾರು ಸಂಪೂರ್ಣ ಕೈ ಕೊಟ್ಟಿದ್ದರಿಂದ ಈ ಭಾಗದಲ್ಲಿ ಜಲಕ್ಷಾಮ ಎದುರಾಗಿತ್ತು. ಈಗ ಮಳೆಯಿಂದಾಗಿ ರೈತರ ಮೊಗದಲ್ಲಿ ಸಂಭ್ರಮ ಮನೆ ಮಾಡಿದೆ. ಇದನ್ನೂ ಓದಿ: ಕಾವೇರಿ ತೀರ್ಥೋದ್ಭವಕ್ಕೆ ಸಮಯ ನಿಗದಿ
ಭಾರೀ ಮಳೆಗೆ ಕುಸಿದ ಗೋಡೆ
ಭಾರೀ ಮಳೆಯಿಂದ ಹನೂರು ತಾಲೂಕಿನ ಹಾವಿನ ಮೂಲೆ ಗ್ರಾಮದ ಶಿವಮ್ಮ,ಮಾದಪ್ಪ ಅವರ ಮನೆ ಗೋಡೆ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಭವಿಸಿಲ್ಲ.

