ಬೆಂಗಳೂರು: ಆಸ್ಟ್ರೇಲಿಯಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಲ್‍ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಭಾರತೀಯ ಮೂಲದ ಗೆಳತಿ ವಿನಿ ರಾಮನ್ ಅವರೊಂದಿಗೆ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಕುರಿತು ನವವಿವಾಹಿತ ದಂಪತಿಯು ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಇನ್‍ಸ್ಟಾಗ್ರಾಮ್‍ನಲ್ಲಿ ರೊಮ್ಯಾಂಟಿಕ್ ಚಿತ್ರವೊಂದನ್ನು ಹಂಚಿಕೊಂಡ ವಿನಿ ರಾಮನ್, ಫೋಟೋದಲ್ಲಿ ದಂಪತಿ ಪರಸ್ಪರ ಚುಂಬಿಸುತ್ತಿರುವುದನ್ನು ಕಾಣಬಹುದು. ಫೋಟೋಗೆ ‘ಮಿಸ್ಟರ್ ಅಂಡ್ ಮಿಸಸ್ ಮ್ಯಾಕ್ಸ್‌ವೆಲ್ | 18.03.22’ ಎಂದು ಅಡಿಬರಹ ನೀಡಿ ಪೋಸ್ಟ್ ಮಾಡಿದ್ದಾರೆ.
Advertisement
View this post on Instagram
Advertisement
ಅಲ್ಲದೆ, ಮ್ಯಾಕ್ಸ್‌ವೆಲ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಅವರ ಪತ್ನಿ ವಿನಿ ರಾಮನ್ ಅವರ ಫೋಟೋಗೆ ಮರು-ಪೋಸ್ಟ್ ಮಾಡಿ, ತಮ್ಮ ಎಂಗೆಜ್‍ಮೆಂಟ್ ಉಂಗುರಗಳನ್ನು ಪ್ರದರ್ಶಿಸಿಸುತ್ತಿದ್ದಾರೆ. ‘ಪ್ರೀತಿಯು ಪೂರ್ಣಗೊಳ್ಳುವ ಹುಡುಕಾಟವಾಗಿದೆ ಮತ್ತು ನಿಮ್ಮೊಂದಿಗೆ ನಾನು ಸಂಪೂರ್ಣತೆಯನ್ನು ಅನುಭವಿಸುತ್ತೇನೆ ಎಂದು ಭಾವಿಸುವೆ’ ಎಂದು ವಿನಿ ಬರೆದುಕೊಂಡಿದ್ದ ಶಿರ್ಷಿಕೆಯ ಫೋಟೋವನ್ನು ಮ್ಯಾಕ್ಸ್‌ವೆಲ್ ಸ್ಕ್ರೀನ್‍ಶಾಟ್ ತೆಗೆದು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಭಾರತ ಮೂಲದ ಯುವತಿಯೊಂದಿಗೆ ಮ್ಯಾಕ್ಸ್‌ವೆಲ್ ಡೇಟಿಂಗ್
Advertisement
Advertisement
ದಂಪತಿಯು 2020ರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಮ್ಯಾಕ್ಸ್‌ವೆಲ್ ಮತ್ತು ವಿನಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ದಂಪತಿಗಳು ಬಹಳ ಸಮಯದಿಂದ ಡೇಟಿಂಗ್ ಮಾಡಿದ್ದಾರೆ. ವಿನಿ ಆಸ್ಟ್ರೇಲಿಯಾದ ಮೆಂಟೋನ್ ಗಲ್ರ್ಸ್ ಸೆಕೆಂಡರಿ ಕಾಲೇಜಿನಲ್ಲಿ ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ್ದಾರೆ. ಪ್ರಸ್ತುತ ಅವರು ಮೆಲ್ಬೋರ್ನ್‍ನಲ್ಲಿ ಫಾರ್ಮಾಸಿಸ್ಟ್ ಆಗಿ ಅಭ್ಯಾಸ ಮಾಡುತ್ತಿದ್ದಾರೆ. ವಿನಿ ಆಸ್ಟ್ರೇಲಿಯಾ ನಗರದಲ್ಲಿ ನೆಲೆಸಿರುವ ತಮಿಳು ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾದ ಮ್ಯಾಕ್ಸ್‌ವೆಲ್ ತಮಿಳುನಾಡಿನ ಅಳಿಯ – ಆಮಂತ್ರಣ ಪತ್ರಿಕೆ ವೈರಲ್
ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ತಂಡವು ಮ್ಯಾಕ್ಸ್‌ವೆಲ್ ಅವರನ್ನು 11 ಕೋಟಿ ರೂ. ನೀಡಿ ತಂಡದಲ್ಲಿಯೇ ಉಳಿಸಿಕೊಂಡಿದೆ. ತಂಡವು ಮಾರ್ಚ್ 27ರ ಭಾನುವಾರದಂದು ಪಂಜಾಬ್ ಕಿಂಗ್ಸ್ ವಿರುದ್ಧ ತಮ್ಮ ಐಪಿಎಲ್ 2022 ಅಭಿಯಾನವನ್ನು ಮುಂಬೈನಲ್ಲಿ ಆಡಲಿದೆ.