ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೂಂಚ್ ಸೆಕ್ಟರ್‌ನ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ತರಬೇತಿ ವೇಳೆ ಆಕಸ್ಮಿಕವಾಗಿ ಗ್ರೆನೇಡ್ ಸ್ಫೋಟಗೊಂಡು (Grenade Blast) ಇಬ್ಬರು ಭಾರತೀಯ ಸೇನಾ (Indian Army) ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಿಹಾರ ಬೆಟಾಲಿಯನ್‌ನ ಲ್ಯಾನ್ಸ್ ನಾಯಕ್ ರವೀಂದರ್ ಭೇರಾ ಮತ್ತು ಅಗ್ನಿವೀರ್ ಶಕ್ತಿ ಪ್ರಸಾದ್ ಗಾಯಗೊಂಡ ಸೈನಿಕರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪಿಒಕೆಯಲ್ಲಿ ಉಗ್ರರನ್ನು ಅಳಿಯಂದಿರಂತೆ ನಡೆಸಿಕೊಂಡು, ನಾಗರಿಕರ ಕಗ್ಗೊಲೆ ಮಾಡಲಾಗ್ತಿದೆ: ಮಾಜಿ ಪೊಲೀಸ್ ಅಧಿಕಾರಿ ಕಿಡಿ
ಎಲ್‌ಒಸಿಗೆ ಸಮೀಪವಿರುವ ಮಾಲ್ಟಿ ಸೆಕ್ಟರ್‌ನಲ್ಲಿರುವ ಆರ್ಮಿ ಫಾರ್ವರ್ಡ್ ಪೋಸ್ಟ್ ಬಳಿ ಸುಮಾರಿಗೆ ಈ ಘಟನೆ ನಡೆದಿದೆ. ಸೇನಾ ಸಿಬ್ಬಂದಿ ದಿನನಿತ್ಯದ ತರಬೇತಿ ಮತ್ತು ಶಸ್ತ್ರಾಸ್ತ್ರ ನಿರ್ವಹಣೆ ಕವಾಯತು ನಡೆಸುತ್ತಿದ್ದಾಗ ಗ್ರೆನೇಡ್ ಆಕಸ್ಮಿಕವಾಗಿ ಸ್ಫೋಟಗೊಂಡಿದೆ. ಇದರಿಂದ ಇಬ್ಬರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡ ಇಬ್ಬರು ಸಿಬ್ಬಂದಿಯನ್ನು ತಕ್ಷಣ ಚಿಕಿತ್ಸೆಗಾಗಿ ಪೂಂಚ್‌ನ 425 ಫೀಲ್ಡ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಹೆಲಿಕಾಪ್ಟರ್ ಮೂಲಕ ಉಧಂಪುರದಲ್ಲಿರುವ ಉತ್ತರ ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಇದನ್ನೂ ಓದಿ: ಹಾರ್ಮುಜ್ ಬಳಿ ಹಡಗಿನ ಮೇಲೆ ಯುಎಸ್ ದಾಳಿ; ಮೂವರು ಭಾರತೀಯರು ಸಾವು
